ಬಾಲಿವುಡ್ ನಲ್ಲಿ ಪ್ರತಿಭೆಗಿಂತ ಬಿಕಿನಿ ಮುಖ್ಯ..ಇದು ಯಾಮಿ ಗೌತಮ್ ಅನುಭವ

ಶುಕ್ರವಾರ, 25 ಜುಲೈ 2014 (09:47 IST)
ಯಾಮಿ ಗೌತಮ್ ತುಂಬಾ ಮುದ್ದಾದ ಮತ್ತು ಸುಂದರವಾಗಿರುವ ನಟಿ. ಜಾಹೀರಾತುಗಳ ಮೂಲಕ ತನ್ನನ್ನು ಬಣ್ಣದ   ಲೋಕಕ್ಕೆ ಎಂಟ್ರಿ ಮಾಡಿಕೊಂಡ ಆಕೆ ತನ್ನ ಅದೃಷ್ಟವನ್ನು ಹುಡುಕುತ್ತಲೇ ಇರುವಂತಹ ಪರಿಸ್ಥಿತಿ  ಉಂಟಾಗಿದೆ. ಒಲ್ಲೆಯ್ ಅಭಿನೇತ್ರಿ, ರೂಪವಂತೆ ಆಗಿರುವ ಯಾಮಿ ತನಗಾಗಿ ಅವಕಾಶಗಳ ಹುಡುಕಾಟದಲ್ಲಿ ಇದ್ದಾಳೆ. 
 
ಕಾಲಿವುಡ್ , ಟಾಲಿವುಡ್ ನಲ್ಲಿ ಹೇಳಿಕೊಳ್ಳುವ ಗೆಲುವು ಕಾಣದೆ ಇರುವ ಈಕೆ ತನ್ನ ಅದೃಷ್ಟ   ಪರೀಕ್ಷೆ ಮಾಡಿಕೊಳ್ಳಲು ಬಾಲಿವುಡ್ ಕಡೆಗೆ ಹೋಗುವ ನಿರ್ಧಾರ ಮಾಡಿಕೊಂಡು ಅತ್ತ ಹೋದಾಗ ಅಲ್ಲಿನ ಜನರ ವರ್ತನೆ ಆಕೆಗೆ ಆಶ್ಚರ್ಯ ಉಂಟು ಮಾಡಿತಂತೆ. 
 
ನೀನು ಬಟ್ಟೆ ಬಿಚ್ಚು ಆಮೇಲೆ ನಿನಗೆ ನಮ್ಮ ಚಿತ್ರದಲ್ಲಿ ಅವಕಾಶ ಎನ್ನುವ ಸಿದ್ಧಂತೆ ಬಾಲಿವುಡ್ ಮಂದಿ ಬದ್ಧರಾಗಿದ್ದಾರೆ. ಅಕ್ಷಯ್ ಕುಮಾರ್ ಅವರ ನಟನೆಯ ಶೌಕಿನ್ ಅನ್ನುವ ಚಿತ್ರಕ್ಕೆ ಯಾಮಿ ಸರಿಯಾದ ಆಯ್ಕೆ ಎಂದು ನಿರ್ಮಾಪಕರು ನಿರ್ಧಾರ ಮಾಡಿದರಂತೆ.  
 
............ಇನ್ನು ಇದೆ. ಮುಂದೆ ಓದಿ. 
 
 

ಅಲ್ಲಿ ನೀಡಿದ ಎಲ್ಲ ಟೆಸ್ಟ್ ಗಳಲ್ಲೂ ಆಕೆ ಪಾಸಾದರು ಈ ಬಿಕಿನಿ  ಹಾಕಿಕೊಳ್ಳುವ  ಟೆಸ್ಟ್ ನಲ್ಲಿ ಮಾತ್ರ ಸೊನ್ನೆ ಅಂಕ. ಅಂದರೆ ಆಕೆಯು ಬಿಕಿನಿ ಧರಿಸಿದಾಗ ಅದರಲ್ಲಿ ಮೈಮಾಟ ಹಿಡಿದಿಡುವ ಸೌಷ್ಟವ ಆಕೆಗೆ ಇಲ್ಲದ ಕಾರಣ ರಿಜಕ್ಟ್ ಆಗುವ ಪರಿಸ್ಥಿತಿ ಉಂಟಾಯಿತಂತೆ. ಅಲ್ಲದೆ ಬಿಕಿನಿ ಧರಿಸಿದಾಗ ಆಕೆ ಮುಜುಗರ ಅನುಭವಿಸಿದ ಬಗೆ ಕಂಡ ಅಲ್ಲಿನವರು ನೀನು ಈ ರಂಗಕ್ಕೆ ಸೂಟ್ ಆಗಲ್ಲ ಬಿಡು ಎಂದು ನೇರವಾಗಿ ಹೇಳಿದರಂತೆ.
 
ಅಲ್ಲದೆ ಆ ಜಾಗದಲ್ಲಿ ಲೀನಾ ಹೇಡನ್ ನ್ನು ಹೀರೋಯಿನ್ ಆಗಿ ತೆಗೆದುಕೊಂಡರಂತೆ. ಸಿನಿಮಾ ಅಂದ್ರೆ ಒಂದು ಜೂಜು ಅಂತ ಹೇಳ್ತಾರೆ ಕೆಲವರು... ನಿಜ ಅನ್ನಿಸುತ್ತೆ ಇಂತಹ ಪ್ರಕರಣಗಳನ್ನು ಕಂಡಾಗ !

ವೆಬ್ದುನಿಯಾವನ್ನು ಓದಿ