ಫೈಂಡಿಂಗ್ ಫನ್ನಿಯಲ್ಲಿ ಮುತ್ತಿನ ಸುರಿಮಳೆ ಸುರಿದಿರುವ ದೀಪಿಕಾ ಪಡುಕೋಣೆ

ಶುಕ್ರವಾರ, 25 ಜುಲೈ 2014 (09:56 IST)
ಚೆನ್ನೈ ಎಕ್ಸ್ಪ್ರೆಸ್ಸ್ , ರಾಮ್ಲೀಲ ಮುಂತಾದ ಚಿತ್ರಗಳಲ್ಲಿ ಆಕೆ ಸಾಂಪ್ರದಾಯಿಕ ಉಡುಪುಗಳಲ್ಲಿ  ಕಂಡು ಬಂದಿದ್ದ ನಟಿ ದೀಪಿಕಾ ಪಡುಕೋಣೆ.ಆದ್ರೆ ಆಕೆ ಈಗ ಫೈಂಡಿಂಗ್ ಫನ್ನಿ ಅನ್ನುವ ಚಿತ್ರದಲ್ಲಿ ಭಿನ್ನ ರೀತಿಯಲ್ಲಿ  ಆಕೆಯ ಅಭಿಮಾನಿಗಳ ಮುಂದೆ ಬರುತ್ತಿದ್ದಾಳೆ. 
 
ದೀಪಿ ತನ್ನ ಜೊತೆಗಾರ ನಟ ಅರ್ಜುನ್ ಕಪೂರ್ ಅವರ ಜೊತೆಗೆ ಮಾಡಿರುವ ಲಿಪ್ಲಾಕ್ ಯುವ ಹೃದಯಗಳನ್ನು ತಲ್ಲಣ ಮಾಡುವುದರಲ್ಲಿ ಸಂಶಯವೇ ಇಲ್ಲ ಅಂತಾ ಇದ್ದಾರೆ ಬಾಲಿವುಡ್ ಮಂದಿ. ಈ ಚಿತ್ರದಲ್ಲಿ ದೀಪಿಕ ಅರ್ಜುನ್ ಕಪೂರ್ ಜೊತೆ  ನಟಿಸಿರುವ ಲಿಪ್ಲಾಕ್ ದೃಶ್ಯವು ಎದೆಬಡಿತವನ್ನು ಏರಿಸುವ ಸಾಧ್ಯತೆ ಇದೆಯಂತೆ .
 
.........ಇನ್ನು ಇದೆ. ಮುಂದೆ ಓದಿ. 
 
 

ಈ ಚಿತ್ರ ಒಂದು ರೊಮ್ಯಾಂಟಿಕ್ ಎಂಟರ್ ಟೈನರ್   ಆಗಿ ನಿರ್ಮಿತವಾಗಿದೆ. ಆಂಗ್ಲ ಭಾಷೆಯಲ್ಲಿ ಸಿನಿಮಾ ನಿರ್ಮಿಸಲಾಗುತ್ತಿದ್ದು, ಇದರಲ್ಲಿ ದೀಪಿಕ ನಾನು ಇನ್ನು ಕನ್ಯೆ ಎಂದು ಹೇಳಿದ ಡೈಲಾಗ್ ಈಗ ಹಾಟ್ ಟಾಪಿಕ್ ಆಗಿ ಬದಲಾಗಿದೆಯಂತೆ ಬಾಲಿವುಡ್ ನಲ್ಲಿ.
 
 ಸೆಪ್ಟೆಂಬರ್ ಎರಡನೇ ವಾರದಲ್ಲಿ ಚಿತ್ರದ ಬಿಡುಗಡೆ ಆಗಲು ಸಿದ್ಧತೆ ನಡೆಸಲಾಗುತ್ತಿದೆಯಂತೆ. ಮುತ್ತಿನ ಮುಖಾಂತರ ಮತ್ತೆ ಯುವಕರ ಹೃದಯ ತಲ್ಲಣಗೊಳಿಸುವ ಕೆಲ್ಸಕ್ಕೆ ಸಿದ್ಧ ಆಗಿರುವ ದೀಪಿಕ ಈ ಚಿತ್ರ ನೋಡುವ ಮುನ್ನ ಹೃದಯಕ್ಕೆ  ಸಂಬಂಧಪಟ್ಟ ಮಾತ್ರಗಳನ್ನು ಕೊಂಡೊಯ್ಯುವುದು ಎಲ್ಲರೀತಿಯಿಂದಲು ಒಳಿತು ಅಂತಾ ಇದ್ದಾರೆ ಬಾಲಿವುಡ್ ಮಂದಿ !! 

ವೆಬ್ದುನಿಯಾವನ್ನು ಓದಿ