ಪೀಕೆಯಲ್ಲಿ ಆಮೀರ್ ಖಾನ್ ಬೆತ್ತಲಾದರೆ...? ಆಹಾ ಎತ್ತ ನೋಡಿದರು ಬೆತ್ತಲೆ ಬೆತ್ತಲೆ !

ಶುಕ್ರವಾರ, 25 ಜುಲೈ 2014 (10:07 IST)
ಮಿಲಿಂದ್ ಸೋಮನ್, ರಾಹುಲ್ ಬೋಸ್, ರಾಜ್ ಕುಮಾರ್ ಹೀಗೆ  ಹಲವಾರು   ಮಂದಿ  ಈಗಾಗಲೇ ಬಾಲಿವುಡ್ ಚಿತ್ರರಂಗದಲ್ಲಿ ತಮ್ಮ ಬೆತ್ತಲೆ ದೇಹವನ್ನು ತೋರಿಸಿದ್ದಾರೆ. ಅವರು ಮೈ ತೋರಿಸಿದ ಕಥೆಗಳು ಆಗ ಸುದ್ದಿ ಮಾಡಿತ್ತು. ಅದೇರೀತಿ ಈಗ ಹಿರಿಯ ನಟ  ಅಮೀರ್ ಖಾನ್ ಮಿಸ್ಟರ್ ಪರ್ಫೆಕ್ಟ್ ತಮ್ಮ ಹೊಚ್ಚ ಹೊಸ ಚಿತ್ರ ದಲ್ಲಿ ಬೆತ್ತಲೆ ಆಗಲು ಹೊರಟಿದ್ದಾರೆ.
 
 ಆ ಮುಖಾಂತರ ಬೆತ್ತಲೆ ದೇಹಿಗಳ  ಪಟ್ಟಿಗೆ  ಅವರ ಹೆಸರನ್ನು ಸಹಿತ ಸೇರ್ಪಡೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಸಾಗಿದ್ದಾರೆ. ಸಾಮಾನ್ಯವಾಗಿ ಆಮೀರ್ ಖಾನ್ ಅವರು ಕಡಿಮೆ ಚಿತ್ರಗಳಲ್ಲಿ ನಟಿಸಿದರು ಸಹಿತ ಹೆಚ್ಚು ಗಮನ ಸೆಳೆಯುವ   ಪಾತ್ರಗಳನ್ನು ಮಾಡಿದ್ದಾರೆ. 
 
........ಇನ್ನು ಇದೆ. ಮುಂದೆ ಓದಿ. 
 
 

ಅವರ ಹೊಸ ಚಿತ್ರವಾದ ಪೀಕೆಯಲ್ಲಿ  ಬೆತ್ತಲೆ ಆಗುವುದರ ಮುಖಾಂತರ ತಮ್ಮದೊಂದು ಹೊಸ ಛಾಪು ಮೂಡಿಸುವ ಪ್ರಯತ್ನದತ್ತ ಸಾಗಿದ್ದಾರೆ. ಅವರು ಈ ಚಿತ್ರವೂ ಈ ವರ್ಷ ಕ್ರಿಸ್ ಮಸ್ ಸಮಯದಲ್ಲಿ ಬಿಡುಗಡೆ ಆಗುತ್ತದೆ ಎನ್ನುವ ಮಾತನ್ನು ಹೇಳಿದ್ದರು. 
 
ರಾಜ್ ಕುಮಾರ್ ಹಿರಾನಿ ಅವರ ನಿರ್ದೇಶನದಲ್ಲಿ ನಟ ಅಮೀರ್ ಖಾನ್ ಅವರು ನಟಿಸುತ್ತಿರುವ ಚಿತ್ರಕ್ಕೆ ಈಗ ಪೀಕೆ ಅನ್ನುವ ಹೆಸರನ್ನೇ ಅಂತಿಮವಾಗಿ ನಿರ್ಣಯ ಮಾಡಿದ್ದಾರಂತೆ. ಈ ಚಿತ್ರದಲ್ಲಿ ಆಮೀರ್ ಜೊತೆ ಅನುಷ್ಕಾ ಶರ್ಮ ನಟಿಸಿದ್ದಾರೆ. ಈಗ ಹೀರೋಯಿನ್ ಗಳ ಬೆತ್ತಲೆ ಕಾಲ. ಅದರ ಜೊತೆ ಹೀರೋಗಳು ಸಹ ಬೆತ್ತಲೆ ಆಗಲು ಹೊರಟಿರುವುದು .. ಬಿಡಿ ಎಲ್ಲ ಚಿತ್ರಗಳಿಗೂ ಎ ಸರ್ಟಿಫಿಕೇಟ್  ಕೊಡುವಂತ ಸ್ಥಿತಿ ! 

ವೆಬ್ದುನಿಯಾವನ್ನು ಓದಿ