ಯೂಟ್ಯೂಬ್ ನಲ್ಲಿ ಹಂಗಾಮ ಸೃಷ್ಟಿಸಿದ ಹೃತಿಕ್ ರೋಶನ್ ಬ್ಯಾಂಗ್ ಬ್ಯಾಂಗ್!

ಶನಿವಾರ, 26 ಜುಲೈ 2014 (09:19 IST)
ಬಾಲಿವುಡ್ ನ ಸ್ಟಾರ್  ಕಲಾವಿದರಾದ ಹೃತಿಕ್ ರೋಶನ್ ಮತ್ತು ಕತ್ರಿನಾ ಕೈಫ್ ಅವರು ನಟಿಸಿರುವ ಬ್ಯಾಂಗ್ ಬ್ಯಾಂಗ್ ಚಿತ್ರದ ಟೀಸರ್ ಯು ಟ್ಯೂಬ್ ನಲ್ಲಿ ಬಿಡುಗಡೆ ಆಗಿದೆ. ಅದು ಅಲ್ಲಿ ಸಾಕಷ್ಟು ಹಂಗಾಮ ಸೃಷ್ಟಿ ಮಾಡಿದೆ. ಯು ಟ್ಯೂಬ್ ನಲ್ಲಿ ಪೋಸ್ಟ್ ಮಾಡಿದ 24 ಗಂಟೆಗಳ ಒಳಗೆ ಸುಮಾರು 20 ಲಕ್ಷ ಹಿಟ್ಸ್ ಪಡೆದಿವೆ. ಟಾಮ್ ಕ್ರೂಜ್, ಕೆಮೆರಾನ್ ಡಿಯಾಜ್ ನಟಿಸಿರುವ ಹಾಲಿವುಡ್ ಚಿತ್ರ ನೈಟ್ ಅಂಡ್ ಡೇ ಯನ್ನು ಹಿಂದಿಯ ಬ್ಯಾಂಗ್ ಬ್ಯಾಂಗ್ ಆಧರಿಸಿದೆ.  
 
........ಇನ್ನು ಇದೆ. ಮುಂದೆ ಓದಿ. 
 
 

ಯೂ ಟ್ಯೂಬ್ ನಲ್ಲಿ 58 ನಿಮಿಷಗಳ ಕಾಲ ಅಭಿಮಾನಿಗಳಿಗೆ ಖುಷಿ ಹಂಚಿದೆ ಎನ್ನುವ ಸಂಗತಿಯನ್ನು ಹೃತಿಕ್ ರೋಶನ್ ಟ್ವೀಟ್ ಮಾಡಿ ಹೇಳಿದ್ದಾರೆ. ಕತ್ರಿನಾ ಮತ್ತು ಹೃತಿಕ್ ಒಟ್ಟಿಗೆ ನಟಿಸುತ್ತಿರುವ  ಮೂರನೇ ಚಿತ್ರ ಇದಾಗಿದೆ. ನಾ ಮಿಲೇಗಿ ದುಬಾರ ಮತ್ತು ಅಗ್ನಿಪಥ್ ಚಿತ್ರಗಳಲ್ಲಿ ಇವರಿಬ್ಬರು ಒಟ್ಟಾಗಿ ನಟಿಸಿದ್ದರು.

ವೆಬ್ದುನಿಯಾವನ್ನು ಓದಿ