ತಮ್ಮ ಜೀವನ ಚರಿತ್ರೆ ಚಿತ್ರ ನೋಡಿ ಕಣ್ಣೀರು ಹಾಕಿದರಂತೆ ಮೇರಿಕಾಮ್

ಶನಿವಾರ, 26 ಜುಲೈ 2014 (09:22 IST)
ಕಥೆ ಬಯಸಿದ್ದನ್ನು ನೀಡುವ ಮನಸ್ಥಿತಿ ಪಡೆದವರು ಎಂದಿಗೂ ಉತ್ತಮ ಕಲಾವಿದರಾಗುತ್ತಾರೆ.ಕಥೆ ಬಯಸಿದರೆ ಅಂದವಿಹೀನರಾಗುವುದಕ್ಕೆ  ಎಂದಿಗೂ ಹಿಂದೆಮುಂದೆ ನೋಡ ಬಾರದು ಎನ್ನುವ ಮಾತನ್ನು ನಟಿ ಪ್ರಿಯಾಂಕ ಚೋಪ್ರ ಹೇಳಿದ್ದಾರೆ. 
 
ಇಲ್ಲಿವರೆಗೂ ಆಕೆ ಮಾಡಿದ ಪಾತ್ರಗಳು ಒಂದು ಬಗೆ ಆಗಿದ್ದರೆ, ಈಗ ಆಕೆ ಮಾಡಿರುವ ಪಾತ್ರ  ಮೇರಿ ಕಾಮ್    ಮತ್ತೊಂದು ಬಗೆಯದ್ದಾಗಿದೆ ಎಂದೇ ಹೇಳ ಬಹುದಾಗಿದೆ.ಬಾಕ್ಸಿಂಗ್ ಚಾಂಪಿಯನ್ ಆಗಿರುವ ಮೇರಿ  ಕಾಮ್ ಬದುಕಿನಾಧಾರಿತ ಚಿತ್ರದಲ್ಲಿ ಮೇರಿ ಪಾತ್ರದಲ್ಲಿ ನಟಿ ಪ್ರಿಯಾಂಕ ಚೋಪ್ರ ನಟಿಸಿದ್ದಾರೆ. ಈ ಚಿತ್ರದ ನಟನೆಗೆಂದು ಆಕೆ ಸಾಕಷ್ಟು ಕಷ್ಟ ಪಟ್ಟಿದ್ದಾರೆ.
 
 ಸ್ನಾಯುಗಳನ್ನು ಬೆಳೆಸಿದರು, ಬಾಕ್ಸಿಂಗ್ ಕಲಿತರು ಅಲ್ಲದೆ ಮುಖದಲ್ಲಿ ಸಹ ಅನೇಕ ಬದಲಾವಣೆಗಳನ್ನು ಮಾಡಿಕೊಂಡಿದ್ದಾರೆ.ಇತ್ತೀಚೆಗೆ ಆ ಚಿತ್ರದ ಪ್ರಮೋಶನ್ ಕಾರ್ಯಕ್ರಮದಲ್ಲಿ ಆಕೆ ಭಾಗವಹಿಸಿದ್ದರು. ಅವರಿಗೆ ಸಾಕಷ್ಟು ಪ್ರಶಂಸೆ ದೊರಕಿತು ಈ ಪಾತ್ರಕ್ಕೆಂದು! 
 
...........ಇನ್ನು ಇದೆ. ಮುಂದೆ ಓದಿ. 
 
 

ಕಷ್ಟಕರವಾದ ಪಾತ್ರಗಳಲ್ಲಿ ನಟಿಸುವ ವಿಷಯವನ್ನು ನಾನು ಹೆಚ್ಚು ಗಂಭೀರವಾಗಿ ಪರಿಗಣಿಸುವುದಲ್ಲದೆ, ಅದನ್ನು ಸವಾಲಾಗಿ ಸ್ವೀಕರಿಸುತ್ತೇನೆ. ಮೇರಿ ಕಾಮ್ ಚಿತ್ರ ಅತ್ಯಂತ ಚಾಲೆಂಗಿಂಗ್ ಪಾತ್ರ. ನನ್ನ ನಿಜ ಬದುಕಿಗೂ ಹಾಗೂ ಈ ಪಾತ್ರಕ್ಕೂ ಸಾಕಷ್ಟು ಸಾಮ್ಯತೆಗಳಿವೆ. ತಮ್ಮದು ಸಹ ತುಂಬಾ ಚಿಕ್ಕ ಪಟ್ಟಣ. ನಾನು ನನ್ನ ವೃತ್ತಿ ಬದುಕಲ್ಲಿ ಎದುರಾದ ಅಡ್ಡಿಆತಂಕಗಳನ್ನು ಎದುರಿಸಿ ಈ ಮಟ್ಟಕ್ಕೆ ಬೆಳೆದಿದ್ದೇನೆ. 
 
ಮೇರಿ ಕಾಮ್ ಚಿತ್ರದಲ್ಲಿ ನಿರ್ದೇಶಕರು ಬಯಸಿದಂತೆ ನಾನು ಸಿದ್ಧಳಾದೆ. ಈ ಚಿತ್ರವನ್ನು ಮೇರಿ ಕಾಮ್ ಸಹ ವೀಕ್ಷಿಸಿದರು. ಅದನ್ನು ಕಂಡು ಆಕೆಗೆ ಕಣ್ಣೀರು ತಡೆಯೋಕೆ ಆಗಲೇ ಇಲ್ಲವಂತೆ ಎಂದು ನೆನಪಿಸಿಕೊಂಡರು ಈ ಸಮಯದಲ್ಲಿ ಪಿಗ್ಗಿ ಚಾಪ್ಸ್ ! ಈ ಪಾತ್ರಕ್ಕೆ ಸಂಪೂರ್ಣವಾಗಿ ನ್ಯಾಯ ಒದಗಿಸಿರುವ ತೃಪ್ತಿ ಉಂಟಾಯಿತಂತೆ ಮೇ ಕಾಮ್ ಅವರ ಪ್ರಶಂಸೆ ಕೇಳಿದ ಬಳಿಕ ಪಿಗ್ಗಿಗೆ. 

ವೆಬ್ದುನಿಯಾವನ್ನು ಓದಿ