ಯುವ ಹೀರೋ ಜೊತೆ ಶ್ರುತಿ ಲವ್ವಿ ಡವ್ವಿ ?

ಮಂಗಳವಾರ, 29 ಜುಲೈ 2014 (09:37 IST)
ಶ್ರುತಿ ಹಾಸನ್ ಬಗ್ಗೆ ಈಗ ಹರಡಿರುವ ಸುದ್ದಿ ಅದೆಷ್ಟರ ಮಟ್ಟಿಗೆ ಸತ್ಯ ಎನ್ನುವುದು ಗೊತ್ತಿಲ್ಲ. ಆದರೆ ಒಂದಂತು  ನಿಜ ಈ ಸುದ್ದಿ ಈಗ ಟಾಲಿವುಡ್ ನಲ್ಲಿ ಸಿಕ್ಕಾಪಟ್ಟೆ ಜೋರಾಗಿ  ಹರಡಿದೆ. ಆಕೆ ಟಾಲಿವುಡ್ ಯುವ ನಾಯಕನೊಬ್ಬನ ಜೊತೆ ಅಫೇರ್ ಇಟ್ಟುಕೊಂಡಿದ್ದಾಳೆ. 
 
ಈವರೆಗೂ ಆಕೆ ಬಾಲಿವುಡ್ ನಲ್ಲಿ ಇರುವ ನಟರ ಜೊತೆ ಡೇಟಿಂಗ್ ಮಾಡುತ್ತಾ ಸಾಕಷ್ಟು ಸುದ್ದಿ ಆಗಿದ್ದಳು. ಆದಕೆ ಸಾಕಷ್ಟು ಕಾಲದಿಂದ ಟಾಲಿವುಡ್ ಗೆ ಸೇರಿರುವ ಓರ್ವ ಯುವ ನಾಯಕನ  ಜೊತೆ ಪ್ರಣಯದಲ್ಲಿ ನಿರತಳಾಗಿದ್ದಾಳೆ  ಅನ್ನುವ ಸುದ್ದಿಗೆ ಸ್ವಲ್ಪ ಜಾಸ್ತಿನೇ ಪುಷ್ಟಿ ಸಿಕ್ಕಿದೆ. 
 
ಈಕೆಗೆ ಜೋಡಿ ಆದ ಹೀರೋ ಯಾರು ಎನ್ನುವುದು ಅಲ್ಲಿನ  ಮಾಧ್ಯಮದವರ ಕಣ್ಣಿಗೆ ಬಿದ್ದಿಲ್ಲ. ಆದರೆ ಒಂದಂತೂ ಸತ್ಯ ಆ ಹೀರೋ ಪ್ರಸಿದ್ಧ ನಟರ ಮಗ. ಆದ್ದರಿಂದ ಈ ಸಂಗತಿ ಹೊರ ಬರಲು ಸಾಧ್ಯ ಆಗಿಲ್ಲ. ತಮ್ಮಪಾಡಿಗೆ ತಾವು ಇದ್ದೆವು. 
 
.......ಇನ್ನು ಇದೆ. ಮುಂದೆ ಓದಿ.
 
 

ಇದೇನು ಹೀಗೆ ಆಯ್ತಲ್ಲ ಎನ್ನುವ ಚಿಂತೆ ಅವರನ್ನು ಕಾಡಲು ಆರಂಭ ಆಗಿದೆಯಂತೆ. ಪ್ರಸ್ತುತ ಮಹೇಶ್ ಬಾಬು ಅವರ ಹೊಚ್ಚ ಹೊಸ ಚಿತ್ರ ಆಗಡು ನಲ್ಲಿ ಸಹ ಶ್ರುತಿ ನಟಿಸುತ್ತಾ ಇದ್ದಾಳೆ. ಅದರಲ್ಲಿ ಆಕೆ ಐಟಂ ನಂಬರ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾಳೆ. 
 
ಅದಕ್ಕೆಂದು ಭಾರಿ ಮೊತ್ತದ ಸಂಭಾವನೆ ಪಡೆದಿದ್ದಾಳೆ. ಏನೇ ಇದ್ದರು ಸಹ ಆಕೆಯ ಸೀಕ್ರೆಟ್ ಲವರ್ ಯಾರು ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಸಿಕ್ಕಾಗ ನಾವು ತಿಳಿಸ್ತೀವಿ. 

ವೆಬ್ದುನಿಯಾವನ್ನು ಓದಿ