ಕನ್ಯಾದಾನಕ್ಕೆ ಸಿದ್ಧತೆ ನಡೆಸಿರುವ ಸಲ್ಮಾನ್ ಖಾನ್

ಬುಧವಾರ, 30 ಜುಲೈ 2014 (10:04 IST)
ಕನ್ಯಾದಾನಕ್ಕೆ ಸಿದ್ಧತೆ ನಡೆಸಿದ್ದಾರೆ ಸಲ್ಮಾನ್ ಖಾನ್. ಯಾರಿಗೆ ಈ ಹೀರೋ ಕನ್ಯಾದಾನ ಮಾಡೋದು? ಸಿನಿಮಾದಲ್ಲ? ಎನ್ನುವ ಪ್ರಶ್ನೆ ಮೂಡುವುದು ಸಹಜ. ಆದರೆ ಅಂತಹ ನಿಮ್ಮ ಪ್ರಶ್ನೆಗೆ ಉತ್ತರ ಹೇಳುವುದಾದರೆ, ಇಲ್ಲ ಹಾಗೇನು ಇಲ್ಲ ಇದು ರಿಯಲ್ ಸಂಗತಿ.
 
.ಮೋಸ್ಟ್ ಬ್ಯಾಚುಲರ್  ಸಲ್ಮಾನ್ ಖಾನ್ ತಾನು ಮದುವೆ ಆಗದೆ ಇದ್ದರೂ ತನ್ನನ್ನು ಆಶ್ರಯಿಸಿದವರಿಗೆ ಬದುಕು ನೀಡುವ ಸಂಗತಿಯಲ್ಲಿ ಸದಾ ಮುಂದು. ಈಗ ಅವರಿಗೆ ರಾಖಿ ಕಟ್ಟಿ ಅಣ್ಣನ ಸ್ಥಾನದಲ್ಲಿ ಇಟ್ಟು ಪ್ರೀತಿಯಿಂದ ಕಾಣುತ್ತಿರುವ ಹೆಣ್ಣುಮಗಳ ಮದುವೆ ತಾವೇ ನಿಂತು ಮಾಡುತ್ತಿರುವುದಲ್ಲದೆ , ಕನ್ಯಾದಾನ ಮಾಡುವ ಸಂಭ್ರಮದಲ್ಲಿ ಇದ್ದಾರೆ ಸಲ್ಲು. 
 
 ............ಇನ್ನು ಇದೆ ಮುಂದೆ ಓದಿ. 
 
 

ನಟ ಪುಲಕೇಶಿ ಸಾಮ್ರಾಟ್ ಅವರಿಗೆ ಶ್ವೇತ ರೊಹೀರಾ ಜೊತೆ ಮದುವೆ ಮಾಡುತ್ತಿದ್ದಾರೆ ಸಲ್ಮಾನ್. ಏಕೆ ಸಾಲು ರಾಖಿ ಕಟ್ಟಿದ ತಂಗಿ. ಪ್ರತಿವರ್ಷವೂ ಆಕೆ ಸಲ್ಮಾನ್ ಖಾನ್ ಗೆ ರಾಖಿ ಕಟ್ಟುತ್ತಾಳೆ.
 
ಮುಂದಿನವರ್ಷ ಶ್ವೇತ ಮತ್ತು ಪುಲಕೇಶಿ ಮದುವೆ ಆಗುವುದಕ್ಕೆ ನಿರ್ಧಾರ ಮಾಡಿದ್ದಾರೆ. ಸಲ್ಮಾನ್ ತಂಗಿ ಮದುವೆಗೆ ಸಿದ್ಧತೆ ನಡೆಸಿದ್ದಾರೆ.ಸಹೋದರ ಪ್ರೀತಿ, ಹೊಣೆ ಎಂದರೆ ಇದೆ ಅಲ್ವೇ!

ವೆಬ್ದುನಿಯಾವನ್ನು ಓದಿ