ವಿದೇಶಗಳಲ್ಲಿ ಭಾರತೀಯ ಭಾಷೆಗಳ ಚಿತ್ರಗಳು ಡಬ್ ಆಗೋದು ಹೊಸದಲ್ಲ. ಆದರೆ ಕೆಲವು ಮಾತ್ರ ಸಿಕ್ಕಾಪಟ್ಟೆ ಹಂಗಾಮ ಮಾಡುತ್ತದೆ. ಅದರಲ್ಲಿ ಕಳೆದ ವರ್ಷ ಬಿಡುಗಡೆ ಆದ ಆಮೀರ್ ಖಾನ್ ನಟನೆಯ ಧೂಮ್ 3 ಸಹ ಸೇರ್ಪಡೆ ಆಗಿದೆ. ಬಾಲಿವುಡ್ ಸಿನಿ ಇತಿಹಾಸದಲ್ಲೇ ಅತ್ಯಧಿಕ ಮೊತ್ತದ ಹಣ ಗಳಿಸಿದ ಚಿತ್ರ ಧೂಮ್3 ಈ ಚಿತ್ರದ ಮುಖಾಂತರ ಆಮೀರ್ ಖಾನ್ ವಿಲನ್ ಆಗಿಯೂ ಸಹ ತಮ್ಮ ಪ್ರತಿಭೆ ತೋರಿದರು. ಇತ್ತೀಚಿಗೆ ಚೈನಾ ದೇಶದಲ್ಲಿ 2 ಸಾವಿರ ಸ್ಕ್ರೀನ್ ಮೇಲೆ ಬಿಡುಗಡೆ ಆದ ಈ ಚಿತ್ರವೂ ಅಲ್ಲಿನ ಟಾಪ್ 10 ಚಿತ್ರಗಳಲ್ಲಿ ಒಂದಾಗಿದೆ. ಟರ್ಕಿ ದೇಶದಲ್ಲಿ ಧೂಮ್3 ಚಿತ್ರ 9ಸ್ಥಾನ ಪಡೆದ ಭಾರತೀಯ ಚಿತ್ರವಾಗಿತ್ತು.