ಪಾಕಿಸ್ತಾನಿ ನಟನನ್ನು ಹೊಗಳಿ ಅಟ್ಟಕ್ಕೇರಿಸಿದ ಪಾಕ್ ನಟಿ ಅಮೀನ ಶೇಖ್

ಶನಿವಾರ, 2 ಆಗಸ್ಟ್ 2014 (11:11 IST)
ಪಾಕಿಸ್ತಾನಿ ನಟಿಯರು ಭಾರತಕ್ಕೆ ಬರುವ ಪರಂಪರೆ ಹೊಸದಲ್ಲ. ಅವರು ಬಂದಿದ್ದೆ ಸಾಕು ಅಂತ ಭಾರತದ ಅನೇಕರು ಕಾಯ್ತಾ ಇರ್ತಾರೆ. ಆ ಬಳಿಕ ಅವರುಗಳು ಮಾಡುವ ಬಾನಗಡಿ ಸಹ ಹೇಳುವಷ್ಟಿಲ್ಲ. ವೀಣಾ ಮಲ್ಲಿಕ್ ಮಾಡಿದ ಗದ್ದಲ ಗಲಾಟೆಯು ಇನ್ನು ಹಸಿರಾಗಿ ಇರುವಾಗಲೇ ಈಗ ಆಮಿನ ಶೇಖ್ ಅನ್ನುವ ಪಾಕಿಸ್ತಾನಿ ನಟಿ ಯ ಎಂಟ್ರಿ ಆಗಿದೆ. ಅಲ್ಲದೆ ಫವಾದ್  ಅನ್ನೋ ನಟ ಸಹ ಈಗ ಬಾಲಿವುಡ್ ನಲ್ಲಿ ತನಗೊಂದು ಸ್ಥಾನ ಪಡೆಯಲು ಸಿದ್ಧತೆ ನಡೆಸಿದ್ದಾನೆ.
 
ಆ ವಿಷ್ಯ ಪಕ್ಕಕ್ಕೆ ಇಡೋಣ ಅಮೀನ ಶೇಖ್ ವಿಷಯಕ್ಕೆ ಬರೋದಾದರೆ ಆಕೆಗೆ ರಣಬೀರ್ ಕಪೂರ್ ಸಿಕ್ಕಾಪಟ್ಟೆ ಸುಂದರ ನಟ ಅಂತ ಅನ್ನಿಸಿದೆಯಂತೆ.  ಸ್ಕ್ರೀನ್ ಮೇಲೆ ಆತನಿಗೆ ತುಂಬಾ ಎನರ್ಜಿ ಕಾಣುತ್ತದೆಯಂತೆ  ಈಕೆಗೆ. ಮುಖ್ಯವಾಗಿ ಅವಕಾಶ ಸಿಕ್ಕರೆ ತಾನು ಖುಷಿ ಖುಷಿಯಿಂದ ರಣಬೀರ್ ಜೊತೆ ನಟಿಸುವುದಾಗಿ ಹೇಳಿದ್ದಾಳೆ ಈಕೆ. ಅಲ್ಲದೆ ಆಕೆಗೆ ಅಭಿಷೆಖ್ ಬಚ್ಚನ್ ಸಹ ಇಷ್ಟ ಅಂತೆ. 
 
.........ಇನ್ನು ಇದೆ. ಮುಂದೆ ಓದಿ. 
 
 ಫವಾದ್  ಎಂಟ್ರಿ ಬಾಲಿವುಡ್ ನಲ್ಲಿ ಪಾಕ್ ಕಲಾವಿದರಿಗೆ ನಟಿಸಲು ಬಾಗಿಲು ತೆರೆದಂತೆ ಎನ್ನುವ ಮಾತನ್ನು ಆಕೆ ಹೇಳಿದ್ದಾಳೆ. ಜಿಂದಗಿ ಚಾನಲ್ ನಲ್ಲಿ ಪ್ರಸಾರವಾದ ಜಿಂದಗಿ ಗುಲ್ಜಾರ್ ಅನ್ನುವ ಕಾರ್ಯಕ್ರಮದಲ್ಲಿ ಪಾಕಿಸ್ತಾನ್ ಅಲ್ಲದೇ ಭಾರತದಲ್ಲೂ ಸಹ ಅಭಿಮಾನಿಗಳನ್ನು ಪಡೆದುಕೊಂಡಿರುವ ಫವಾದ್ ಬಾಲಿವುಡ್ ನಾಲಿ ಒಳ್ಳೆ ಸ್ಥಾನ ಪಡೆಯಲು ಕಷ್ಟವಲ್ಲ ಎನ್ನುವ ಮಾತನ್ನು ಹೇಳಿದ್ದಾಳೆ. ಫವಾದ್ ನಟನೆಯ ಖೂಬ್ಸೂರತ್ ಟ್ರೈಲರ್ ತಾನು ವೀಕ್ಷಿಸಿರುವುದಾಗಿ ಹೇಳಿರುವ ಈಕೆ ಅದರಲ್ಲಿ ಫವಾದ್ ನಟನೆ ಸಕತ್ತಾಗಿದೆ ಎಂದು ತನ್ನ ದೇಶದ ನಟನನ್ನು ಹೊಗಳಿ ಅಟ್ಟಕ್ಕೇರಿಸಿದ್ದಾಳೆ.
 
ಆತನ ಮೊದಲ ಚಿತ್ರ ಒಳ್ಳೆ ಬ್ಯಾನರ್ ನಲ್ಲಿ  ಸಿದ್ಧ ಆಗಿರೋದನ್ನು ಕಂಡು ಈಕೆ ಹೆಮ್ಮೆ ಪಟ್ಟಿರೋದು ನೋಡಿದ್ರೆ ಪಾಕಿಸ್ತಾನ ನಟನನ್ನು ಈಕೆಯೇ ಪ್ರಮೋಟ್ ಮಾಡೋ ಸಿದ್ಧತೆ ನಡಿಸಿದ್ದಾಳೆ ಎಂದು ಕಾಣುತ್ತೆ. ನೋಡುವ ಆಕೆ ಹೊಗಳಿಕೆ ಅದೆಷ್ಟರ ಮಟ್ಟಿಗೆ ಭಾರತೀಯರ ಮನಕ್ಕೆ ತಲಪುತ್ತದೆಯೋ!

ವೆಬ್ದುನಿಯಾವನ್ನು ಓದಿ