ಹೊಸ ಹೀರೋ ಜೊತೆ ನಟಿಸಲು ಒಪ್ಪಿದ ಶ್ರುತಿ ಹಾಸನ್

ಮಂಗಳವಾರ, 12 ಆಗಸ್ಟ್ 2014 (09:50 IST)
ಹಿಂದೆಲ್ಲ   ಸ್ಟಾರ್ ಹೀರೋಯಿನ್ ಗಳು ಹೊಸ ಹೀರೋಗಳ ಜೊತೆ ನಟಿಸುವ ಸಂಗತಿ ಸುಲಭ ಸಾಧ್ಯ ಆಗಿರುವ ವಿಷಯವಾಗಿರಲಿಲ್ಲ. ಆದರೆ ಈಗ ಆ ಕಾಲ ಬದಲಾಗಿದೆ. ಸಂಸ್ಥೆ, ನಿರ್ದೇಶಕ ಮತ್ತು ಸಂಭಾವನೆ ಸರಿಯಾಗಿದ್ದರೆ ಆಗಷ್ಟೇ ಎಂಟ್ರಿ ಆದ ಹೀರೋ ಜೊತೆಗೂ ಸಹಿತ ಡ್ಯುಯೆಟ್ ಹಾಡಲು ಹೀರೋಯಿನ್ ಗಳು ಸಿದ್ಧ ಆಗಿಬಿಡ್ತಾ ಇದ್ದಾರೆ. ಬಾಲಿವುಡ್ ನಲ್ಲಿ ಈ ಪರಂಪರೆ ಮೊದಲಿನಿದಲೂ ಇದೆ. ಆದರೆ ಈಗ ಆ ಗಾಳಿ ದಕ್ಷಿಣ ಭಾರತದಲ್ಲೂ  ಸಹ ಸೋಕಿದೆ.. ಹೊಸ ಸಂಸ್ಕೃತಿಯನ್ನು ಹುಟ್ಟು ಹಾಕಿದೆ. ಅಲ್ಲಡು ಶೀನು ಅನ್ನುವ ಚಿತ್ರದಲ್ಲಿ ಸಮಂತ ಮತ್ತು ತಮನ್ನ ನಟಿಸಿದ್ದರು. ಈಗ ಶ್ರುತಿ ಹಾಸನ್ ಸಿದ್ಧ ಆಗಿದ್ದಾಳೆ ನಟಿಸಲು. 
 
 ಬೆಲ್ಲಕೊಂಡ ಶ್ರೀನಿವಾಸ್ ಹೀರೋ ಆಗಿರುವ ಹೊಸ ಚಿತ್ರದಲ್ಲಿ ಶ್ರುತಿ ಹೀರೋಯಿನ್ ಆಗಲು ಸಮ್ಮತಿಸಿದ್ದಾಳೆ. ಈ ಚಿತ್ರವನ್ನು ಬೋಯಪಾಟಿ ಶೀನು ಅವರು ನಿರ್ದೇಶಿಸುತ್ತಾ ಇದ್ದಾರೆ. ಈ ಚಿತ್ರದ ಕಥೆಯನ್ನು ಶ್ರುತಿ ಬಳಿ ನಿರ್ದೇಶಕರು ಹೇಳಿದರಂತೆ. ಅದನ್ನು ಆಲಿಸಿದ ಈ ಚೆಲುವೆ ಓಕೆ ಅಂದಳಂತೆ. ಸೊ ಎಲ್ಲ ಸರಿಯಾಗಿ ಸಿಗುತ್ತೆ ಅಂತ ಭರವಸೆ ಆಗಿರ ಬೇಕು ಶ್ರುತಿಗೆ.. ಒಟ್ಟಾರೆ ಶ್ರುತಿ ನಟನೆಯ ಹೊಸ ಚಿತ್ರ ಸಧ್ಯದಲ್ಲೇ ಸೆಟ್ಟೇರುತ್ತಿದೆ. 

ವೆಬ್ದುನಿಯಾವನ್ನು ಓದಿ