ಖಳನಾಯಕಿ ಆಗಲು ಸಿದ್ಧತೆ ನಡೆಸಿರುವ ಕಾಜೋಲ್

ಬುಧವಾರ, 13 ಆಗಸ್ಟ್ 2014 (10:17 IST)
ಕಾಜೋಲ್ ಹಿಂದಿ ಚಿತ್ರರಂಗದ ಅತ್ಯಂತ ಜನಪ್ರಿಯ ತಾರೆ. ಅಜಯ್ ದೇವಗನ್ ಅವರ ಜೊತೆ ಮದುವೆ ಆಗಿ ಎರಡು ಮಕ್ಕಳ ತಾಯಿ ಆಗಿದ್ದರು ಸಹಿತ ಇನ್ನು ತಮ್ಮ ರೂಪದಲ್ಲಿ ಎಲ್ಲಿಯೂ ಆಕರ್ಷಣೆ ಕಡಿಮೆ ಮಾಡಿಕೊಂಡಿಲ್ಲ. ಕೇವಲ ಹೀರೋಯಿನ್ ಆಗಿ ಮಾತ್ರವಲ್ಲ ಗುಪ್ತ್ ಅನ್ನುವ ಚಿತ್ರದಲ್ಲಿ ವಿಲನ್ ಆಗಿಯೂ ಕಾಣಿಸಿದ್ದ ಈ ಚೆಲುವೆ ಈಗ  ಪೂರ್ಣ ಪ್ರಮಾಣದ ಖಳನಾಯಕಿ ಆಗಲಿದ್ದಾರೆ. ಅಂತಹ  ಪಾತ್ರ ಇರುವ ಚಿತ್ರಕ್ಕೆ ಓಕೆ ಅಂದಿದ್ದಾರೆ. ನಾಲ್ಕು ವರ್ಷದ ಬಳಿಕ  ವಿ ಆರ್ ಫ್ಯಾಮಿಲಿ ಎನ್ನುವ ಚಿತ್ರದಲ್ಲಿ ನಟಿಸಿದ ಬಳಿಕ ಆಕೆ ಮತ್ತೆ ಸಿನಿಮಾಗಳಲಿ ಅಭಿನಯಿಸಲು ಆದ್ಯತೆ ನೀಡಲೇ ಇಲ್ಲ. 
 
ಈಗ ಕಾಜೋಲ್ ಮತ್ತೆ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಅದೂ ವಿಲನ್ ಆಗಿ.  ಕಿರುತೆರೆ ಸೀರಿಯಲ್ ಪೆನೋಜ ವನ್ನು ಆಧರಿಸಿ ಈ ಚಿತ್ರವನ್ನು ನಿರ್ಮಿಸಲಾಗುತ್ತಿದ್ದು, ಇದು ಮಾಫಿಯ ಸಂಬಂಧ ಪಟ್ಟ ಕಥಾಹಂದರಹೊಂದಿದೆ. ಈಕೆಯ ಪತಿ ಮಾಫಿಯ ಡಾನ್ ಆಗಿದ್ದು, ಆತನ ಮರಣಾನಂತರ ಇರದ ಹೊಣೆ ಪತ್ನಿ  ಹೊರುತ್ತಾಳೆ. ಕಾಜೋಲ್ ಪತ್ನಿ ಪಾತ್ರಧಾರಿ ಆಗಿದ್ದಾಳೆ. ಈ ಸಿನಿಮಾವನ್ನು ಅಜಯ್ ದೇವಗನ್ ಮತ್ತು  ಎಂಡ ಮೋಲ್ ಇಂಡಿಯ ಒಟ್ಟಾಗಿ ನಿರ್ಮಿಸುತ್ತಿದ್ದಾರೆ. ರಾಮ್ ಮಧ್ವಾಣಿ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಕೆಲವೇ ತಿಂಗಳುಗಳಲ್ಲಿ  ಚಿತ್ರೀಕರಣ ಆರಂಭ ಆಗಲಿದೆಯಂತೆ. 

ವೆಬ್ದುನಿಯಾವನ್ನು ಓದಿ