ಮದುವೆ ಅವಕಾಶಗಳಿಗೆ ಅಡ್ಡಿ ಮಾಡಿಲ್ಲ ಬಾಲಿವುಡ್ ನಲ್ಲಿ ಬದಲಾವಣೆಯಾಗಿದೆ- ಕರೀನ ಕಪೂರ್

ಗುರುವಾರ, 14 ಆಗಸ್ಟ್ 2014 (10:15 IST)
ಬಾಲಿವುಡ್ ನಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ. ನನ್ನ ವಿಷಯದಲ್ಲಿ ಖಂಡಿತ ಆಗಿದೆ. ಮದುವೆ ಆದ ಹೀರೋಯಿನ್ ಗಳಿಗೆ ಇಲ್ಲಿ  ಆದ್ಯತೆ ನೀಡಲ್ಲ ಅನ್ನುವ ಸಂಗತಿಗೆ ಹೆಚ್ಚು ಪ್ರಾಮುಖ್ಯತೆ ನೀಡಿಲ್ಲ. ಮದುವೆ ಆಗೋದು ಅಪರಾಧ ಅಲ್ಲ, ಅಂತಹ ಹೆಣ್ಣುಮಕ್ಕಳಿಗೂ ಅವಕಾಶಗಳು ಸಿಕ್ಕಿವೆ ಎನ್ನುವ ಮಾತನ್ನು ಕರೀನ ಕಪೂರ್ ಖಾನ್ ಹೇಳಿದ್ದಾರೆ. 2012  ರಲ್ಲಿ ಆಕೆ ಸೈಫ್ ಅಲಿ ಖಾನ್ ಅವರ ಜೊತೆ ಮದುವೆ ಆದರು. ಆಗಿನಿಂದಲೂ ಅವಕಾಶಗಳಿಗೆ ಕೊರತೆ ಇಲ್ಲ. ಸಲ್ಮಾನ್ ಅಮೀರ್, ಅಜಯ್ ದೇವಗನ್ ರಂತಹ ಸೂಪರ್ ಹೀರೋಗಳ ಜೊತೆ ನಟಿಸುವ ಅವಕಾಶ ತನಗೆ ಸಿಕ್ಕಿದೆ ಎನ್ನುವ ಖುಷಿ ಆಕೆಗಿದೆ, ಅದೂ ಮದುವೆ ಆದ ಬಳಿಕ. 
 
 ಅಮೀರ್ ಜೊತೆ ತಲಾಶ್, ಸಲ್ಮಾನ್ ಜೊತೆ ದಬಾಂಗ್ 2  ಚಿತ್ರಗಳಲ್ಲಿ ಆಕೆ ಐಟಂ ನಂಬರ್ ನಲ್ಲಿ ಕಾಣಿಸಿಕೊಂಡಿದ್ದ ಈಕೆ ಆ ಬಳಿಕ ಅಮಿತಾಬ್ ಬಚ್ಚನ್ ಹಾಗೂ ಅಜಯ್ ದೇವಗನ್ ಅವರ ನಟನೆಯ ಸತ್ಯಾಗ್ರಹ ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದರು.  ಬಾಲಿವುಡ್ ನಲ್ಲಿ ಹೊಸ ಮತ್ತು ಹಳೆಯ ಪ್ರತಿಭೆಗಳಿಗೆ ಮನ್ನಣೆ ಇದ್ದೆ ಇದೆ. ಮದುವೆ ಆದ ಬಳಿಕ ನನಗೆ ಅನೇಕ ದೊಡ್ಡ ಬ್ಯಾನರ್ ನಲ್ಲಿ ಕೆಲಸ ಮಾಡುವ ಅವಕಾಶ ದೊರಕಿತು. ಇದು ಅತ್ಯಂತ ಸಂತೋಷಕರ ಸಂಗತಿ ಎನ್ನುವ ಮಾತನ್ನು ಆಕೆ ಹೇಳಿದ್ದಾರೆ. 
ನಾಳೆ ಆಕೆ ನಟಿಸಿರುವ ಸಿಂಘಂ ರಿಟರ್ನ್ಸ್  ಚಿತ್ರವೂ ವಿಶ್ವವಿಡಿ ಪ್ರದರ್ಶನ ಕಾಣುತ್ತಿದೆ. ಕಳೆದ ಐದು ತಿಂಗಳಿಂದ ಸಿನಿಮಾಗಳ ಶೂಟಿಂಗ್ ನಲ್ಲಿ ನಾನೆಷ್ಟು ಬ್ಯುಸಿ ಆಗಿದ್ದೇನೆ ಅಂದ್ರೆ ನನ್ನ ಗಂಡನ ಜೊತೆ ಸಹಿತ ಸರಿಯಾಗಿ ಮಾತಾಡೋಕೆ ಆಗಿಲ್ಲ ಎಂದು ಹೇಳಿದ್ದಾರೆ . 

ವೆಬ್ದುನಿಯಾವನ್ನು ಓದಿ