ದೀಪಿಕ ಪಡುಕೋಣೆ ಸವಾಲಾಗಿ ಕಾಡಿದ ಪಾತ್ರ

ಶನಿವಾರ, 16 ಆಗಸ್ಟ್ 2014 (10:12 IST)
ಬಾಲಿವುಡ್ ಲಕ್ಕಿ ಗರ್ಲ್ ದೀಪಿಕಾ ಪಡುಕೋಣೆ ಗೆ ಈಗ ದೊಡ್ಡ ಸವಾಲು ಎದುರಾಗಿದ್ದು, ಅದನ್ನು ಆಕೆ ಆರಾಮವಾಗಿ ನಿಭಾಯಿಸಿದ್ದಾಳೆ. ಫೈಂಡಿಂಗ್  ಫ್ಯಾನಿ   ಎನುವ ಹಾಫ್ ಬೀಟ್ ಹಿತ್ರದಲ್ಲಿ ನಟಿಸಿರುವ ಈ ಚೆಲುವೆಗೆ ಇಂತಹ ಚಿತ್ರಗಳಲ್ಲಿ ನಟಿಸುವುದು ತಿಳಿದಷ್ಟು ಆರಾಮದಾಯಕವಲ್ಲ ಸಾಕಷ್ಟು ಸವಾಲುಗಳನ್ನು ಎದುರಿಸ ಬೇಕು  ಎನ್ನುವ ಮಾತನ್ನು ಹೇಳಿದ್ದಾಳೆ. ಓಂ ಶಾಂತಿ ಓಂ, ಲವ್ ಆಜ್ ಕಲ್, ಕಾಕ್ ಟೈಲ್, ರೇಸ್ 2 , ಏ ಜವಾನಿ ಹೈದೀವಾನಿ, ಚೆನ್ನೈ ಎಕ್ಸ್ಪ್ರೆಸ್ , ರಾಮ್ಲೀಲ ಮುಂತಾದ ಹಿಟ್ ಚಿತ್ರಗಳಲ್ಲಿ ನಟಿಸಿರುವ ಈ ಚೆಲುವೆ ಹೋಮಿ ಅದ್ಜಾನಿಯ ಅವರ ನಿರ್ದೇಶನದ  ಫೈಂಡಿಂಗ್ ಫ್ಯಾನಿ ಯಲ್ಲಿ ಮುಖ್ಯ ಪಾತ್ರಧಾರಿ ಆಗಿದ್ದು. ಇದು ಅತ್ಯಂತ ರಿಸ್ಕ್ ಹೊಂದಿರುವ ಚಿತ್ರವಾಗಿದೆ ಎನ್ನುವ ಮಾತನ್ನು ಹೇಳಿದ್ದಾಳೆ.
 
 ಈ ಸಿನಿಮಾದಲ್ಲಿ ಮಾಡಲು ತನಗೆ ಸಾಧ್ಯ ಎನ್ನುವ ಹೋಮಿ ನಿರ್ಧಾರ ನನಗೆ ಖುಷಿ ಕೊಟ್ಟಿದೆ. ಈ ಚಿತ್ರದಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸ ಬೇಕಾಯ್ತು. ಈಗಾಗಲೇ ಆಕೆ ಹೋಮಿ ನಿರ್ದೇಶನದ ಕಾಕ್ ಟೈಲ್  ಚಿತ್ರದಲ್ಲಿ ನಟಿಸಿದ್ದಾಳೆ. ಭಿನ್ನವಾದ  ಪಾತ್ರ ಮಾಡ ಬೇಕು ಎನ್ನುವ ಸಂಗತಿ ಮನದಲ್ಲಿ ಇತ್ತು , ಅದೀಗ ನಿಜರೂಪ ತಾಳಿದೆ.
 
ಆದರೆ ಆಂಗ್ಲ ಭಾಷೆಯ ಚಿತ್ರದಲ್ಲಿ ಮಾಡಿದಾಗ ವಿಭಿನ್ನವಾದ ಅನುಭವ ಉಂಟಾಯಿತು. ಇದು ಒಂದು ಸವಾಲಾಯಿತು ಎನ್ನುವ ಮಾತು ಹೇಳಿದ್ದಾಳೆ. ಶೂಟಿಂಗ್ ಭಾಗವಾಗಿ ಕೊಂಕಣಿಯಲ್ಲಿ ಮಾತನಾಡ ಬೇಕಿತ್ತು.  ಮಾತೃಭಾಷೆಯಲ್ಲಿ ಮಾತನಾಡುವುದು ಅತ್ಯಂತ ಸಂತೋಷದಾಯಕ ಎಂದುಹೇಳಿದ್ದಾಳೆ ಈ ಭಾಮೆ . 

ವೆಬ್ದುನಿಯಾವನ್ನು ಓದಿ