ಸಲ್ಮಾನ್ ಖಾನ್ ಬಿಗ್ ಬಾಸ್ ಆಗೋಕೆ ವಾರಕ್ಕೆ 5 ಕೋಟಿ ಪಡೀತಾ ಇದ್ದಾರೆ..

ಮಂಗಳವಾರ, 19 ಆಗಸ್ಟ್ 2014 (10:07 IST)
ಸಲ್ಮಾನ್ ಖಾನ್ ಕಾಲ ಈಗ ಮತ್ತಷ್ಟು ಪ್ರಜ್ವಲ ಆಗುತ್ತಿದೆ ಎಂದೇ ಹೇಳಬಹುದಾಗಿದೆ. ಕಾರಣ ಇಷ್ಟೇ ಅವರ ಇತ್ತೀಚಿನ ಚಿತ್ರ  ಈಗ ಬಾಕ್ಸ್ ಆಫೀಸಲ್ಲಿ ಸುಮಾರು 200 ಕೋಟಿಗೂ ಅಧಿಕ ಮೊತ್ತ  ಸಂಪಾದಿಸಿದೆ. ಈಗ ಅವರು ಮತ್ತೊಮ್ಮೆ ಸುದ್ದಿಗೆ ಬಂದಿದ್ದಾರೆ. ಸಲ್ಮಾನ್ ಖಾನ್ ಕಳೆದ ಕೆಲವು ಅವತರಣಿಕೆಯಿಂದ ಬಿಗ್ ಬಾಸ್ ನ ಮುಖ್ಯ ಭಾಗವಾಗಿದ್ದರು.ಆದರೆ ಈಗ ಇದರ 8  ನೇ ಆವೃತ್ತಿಯು ಈಗ ಆರಂಭ ಆಗಲು ಸಿದ್ಧತೆ ನಡೆಸಿದ್ದು, ಅದರಲ್ಲಿ ಸಲ್ಲು ಮಿಯಾ ಮತ್ತೆ ನಿರೂಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈವರೆಗೂ ಪಡೆದ ರೇಟಿಂಗ್ ನಂತೆ ಎಂಟನೇ ಆವೃತ್ತಿ  ಸಹಿತ ಪಡೆಯುತ್ತದೆ ಎನ್ನುವ ವಾಹಿನಿಯವರದ್ದಾಗಿದೆ.
 
 ಈ ಪ್ರತಿಷ್ಟಿತ ಜನಪ್ರಿಯ ರಿಯಾಲಿಟಿ ಶೋನಲ್ಲಿ ಈಗಾಗಲೇ ಪ್ರಸಾರ ವಾಗಿರುವ ಸ್ಫರ್ಧೆಗಳಲ್ಲಿ  ಅನೇಕ ಸಾಧಕರು ಭಾಗವಹಿಸಿದ್ದಾರೆ.ಈಗ ಎಂಟನೇ ಆವೃತ್ತಿಯಲ್ಲಿ ಸ್ಫರ್ಧಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತಿದೆ. ಈಗ ಸಲ್ಮಾನ್ ಅದರ ನಿರೂಪಕರಾಗಿದ್ದಾರೆ ಅಲ್ಲದೆ ಮುಖ್ಯವಾಗಿ ಆ ಕಾರ್ಯಕ್ರಮದ ಆಕರ್ಷಣೆ ಆಗಿದ್ದಾರೆ ಎಂದೇ ಹೇಳ ಬಹುದಾಗಿದೆ. ಈ ಕಾರ್ಯಕ್ರಮದಲ್ಲಿ ಹೆಚ್ಚು ಗಮನ ಸೆಳೆದ ಸಂಗತಿ ಎಂದರೆ ಸಲ್ಮಾನ್ ಖಾನ್ ಅವರ ಸಂಭಾವನೆ. ಈ ಕಾರ್ಯಕ್ರಮಕ್ಕೆಂದು ಅವರು ವಾರಕ್ಕೊಮ್ಮೆ ಬರಲು ಪ್ರತಿ ಷೋ ಗೂ ಸಹಿತ5ಕೋಟಿ ರೂಗಳನ್ನು ಪಡೆಯುತ್ತಿದ್ದಾರೆ. ಹಾಗಂತ ಸುದ್ದಿ ಇದೆ. ಈ ಮುಖಾಂತರ ಅವರು ತಮ್ಮ ಜನಪ್ರಿಯತೆಯ ಬಗ್ಗೆ ಜಗತ್ತಿಗೆ ತಿಳಿಸಿದ್ದಾರೆ ಅಲ್ಲದೆ ಇದು  ಭಾರತೀಯ ಕಿರುತೆರೆಯ ಮಟ್ಟಿಗೆ ದಾಖಲೆ ಆಗಿದೆ ಎಂದೇ ಹೇಳ ಬಹುದಾಗಿದೆ. ಒಂದು ಸಿನಿಮಾ ನಿರ್ಮಿಸಲು ಕೋಟಿಗಳು ಖರ್ಚು ಮಾಡದ  ಇಂಡಸ್ಟ್ರಿಯವರು  ಒಂದು ಕಡೆ ಇದ್ದರೇ, ನಿರೂಪಣೆ  ಮಾಡಲು ಕೋಟ್ಯಾಂತರ ನೀಡುತ್ತಿರುವ ಮಂದಿ ಮತ್ತೊಂದು ಕಡೆ.. ! ಇದನ್ನು ಹಿರಿ ಮತ್ತು ಕಿರುತೆರೆಯ ಯುದ್ಧ ಅಂತ ಕರಿಯ ಬಹುದಾ? 

ವೆಬ್ದುನಿಯಾವನ್ನು ಓದಿ