ಮಗಧೀರ ಹಿಂದಿ ವರ್ಶನ್ ನಲ್ಲಿ ಶಾಹಿದ್ ಕಪೂರ್ ನಟನೆ ?

ಶುಕ್ರವಾರ, 22 ಆಗಸ್ಟ್ 2014 (10:28 IST)
ಟಾಲಿವುಡ್ ಚಿತ್ರರಂಗದಲ್ಲಿ ಮಾತ್ರವಲ್ಲ ರಾಮ ಚರಣ್ ತೇಜ ಅವರ ಚಿತ್ರ ಬದುಕಿನಲ್ಲಿ ಹೊಸ ತಿರುವು ನೀಡಿದ ಚಿತ್ರ ಮಗಧೀರ. ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದವರು ಪ್ರಸಿದ್ಧ ನಿರ್ದೇಶಕ ರಾಜಮೌಳಿ. ಆ ಸಿನಿಮಾ ಈಗ ಹಿಂದಿ ಭಾಷೆಗೆ ರೀಮೇಕ್ ಆಗುತ್ತಿದೆ ಎನ್ನುವ ಸುದ್ದಿ ಹರಡಿದೆ. ಈ ಚಿತ್ರದ ರೀಮೇಕ್ ಹಕ್ಕು ಪಡೆಯಲು ಸಾಕಷ್ಟು ಒದ್ದಾಡಿದ್ದರು ಅನೇಕ ನಿರ್ಮಪಕರು ಆದರೆ ಅದು ಅವರ ಕೈಲಿ ಸಾಧ್ಯ ಆಗಿರಲಿಲ್ಲ. ಆದರೆ ಯಶಸ್ವಿ ನಿರ್ಮಾಪಕ ಸಾಜಿದ್  ನದಿಯಾದ್ವಾಲ ಈ ಚಿತ್ರದ ನಿರ್ಮಾಣ ಮಾಡುವುದಕ್ಕೆ ಆದ್ಯತೆ ನೀಡಿದ್ದಾರೆ. ಅವರು ಈಗ ಚಿತ್ರದ ಹಕ್ಕುಗಳನ್ನು ಪಡೆದಿದ್ದು, ಸಿನಿಮಾ ಸಿದ್ಧತೆಗೆ ಆದ್ಯತೆ ನೀಡಿದ್ದಾರೆ ಎನ್ನುವ ಸಂಗತಿ ಹರಡಿದೆ. ಆದರೆ ಸಧ್ಯಕ್ಕೆ ಯಾವ ವಿಷಯವೂ ಸಹಿತ ಹೊರ ಬಿದ್ದಿಲ್ಲ,ಈ ಚಿತ್ರನಿರ್ಮಾಣ ಆಗುತ್ತದೆ ಎನ್ನುವ ಸಂಗತಿಯ ಹೊರತಾಗಿ! 
 
ಈ ಸಿನಿಮಾದಲ್ಲಿ ಬಾಲಿವುಡ್ ಮುದ್ದಾದ ನಟ ಶಾಹಿದ್ ಕಪೂರ್ ನಟಿಸುತ್ತಾರೆ ಎನ್ನುವ ಸುದ್ದಿ ಇದೆ. ಇತ್ತೀಚಿಗೆ ಆತ ಸಂದರ್ಶನ ಒಂದರಲ್ಲಿ ತಾನು ಮಗಧೀರ ವೀಕ್ಷಿಸಿದೆ ಅದು ತನಗೆ ಇಷ್ಟ ಆಯ್ತು ಎನ್ನುವ ಮಾತನ್ನು ಹೇಳಿದ್ದರು. ಅದಕ್ಕೆ ಪೂರಕವಾಗಿ ಈಗ ಈ ಸುದ್ದಿ ಹೊರ ಬಂದಿದೆ. ಮಗಧೀರ ಹಿಂದಿ ವರ್ಶನ್  ನಲ್ಲಿ ಶಾಹಿದ್ ಜೊತೆ ಕತ್ರಿನ ಕೈಫ್ ನಟಿಸುವ ಸಾಧ್ಯತೆ ಹೇರಳವಾಗಿದೆ.ಈ ಎಲ್ಲ ಟೀಮ್ ಒಂದು ಮಾಡಿ ಚಿತ್ರ ನಿರ್ಮಿಸಿ 2015  ರಷ್ಟರಲ್ಲಿ ಜನರ ಮುಂದೆ ತರಬೇಕು ಎಂದು ನಿರ್ಧರಿಸಿದ್ದಾರಂತೆ ನಿರ್ಮಾಪಕ ಸಾಜಿದ್ ಸಾಬ್! ಸೊ ಮಗಧೀರ ಯಾವರೀತಿ ಚೆರ್ರಿಗೆ ತಿರುವು ಕೊಡ್ತೋ ಅದೇರೀತಿ  ರೀಮೇಕ್ ಸಹ ಶಾಹಿದ್ ತಾರ ಬದುಕನ್ನು ಉಜ್ವಲ ಮಾಡುತ್ತಾ ನೋಡುವ !!
 

ವೆಬ್ದುನಿಯಾವನ್ನು ಓದಿ