ಮಾಫಿಯಾ ಡಾನ್ ಕಡೆಯಿಂದ ಶಾರೂಖ್ ಖಾನ್ ಗೆ ಬೆದರಿಕೆಯ ಕರೆ ?

ಗುರುವಾರ, 28 ಆಗಸ್ಟ್ 2014 (11:10 IST)
ಸೂಪರ್ ಸ್ಟಾರ್ ಗಳು ಇರುವ ಕಡೆ ಸುದ್ದಿಗಳು ಇರಲೇ ಬೇಕು. ಹಾಗೆ ಆಗಿದೆ ಶಾರುಖ್ ವಿಷಯದಲ್ಲೂ ಸಹಿತ. ಕಾಲದ ಕೆಲವು ದಿನಗಳಿಂದ ಶಾರೂಖ್ ಖಾನ್ ಗೆ ಮಾಫಿಯಾ ಡಾನ್ ರವಿ ಪೂಜಾರಿ ಕಡೆಯಿಂದ ಬೆದರಿಕೆಯ ಕರೆ ಬರ್ತಾ ಇದೆ ಎನ್ನುವ ಸುದ್ದಿ ಹರಡಿತ್ತು. ಇದನ್ನು ಶಾರುಖ್ ಆಪ್ತ ವಲಯ ಖಂಡಿಸಿದ್ದಾರೆ. ಮಾಫಿಯಾ ದವರಿಂದ ಯಾವುದೇ ರೀತಿಯ ಕರೆಗಳು ಬಂದಿಲ್ಲ ಎನ್ನುವುದನ್ನು ಸ್ಪಷ್ಟ ಪಡಿಸಿದ್ದಾರೆ.  ಮಾಫಿಯಾ ಡಾನ್ ರವಿ ಪೂಜಾರಿ ಮಾಡಿದರೆನ್ನಲಾದ ಬೆದರಿಕೆಯ ಕಾರಣದಿಂದ ಶಾರೂಖ್ ಮನೆ ಸುತ್ತಲೂ ಪೊಲೀಸ್ ನಿಂದ ಬಂದೋಬಸ್ತ್  ಮಾಡಲಾಗಿದೆ ಎನ್ನುವ ಸುದ್ದಿಯು ಸುಳ್ಳು ಈ ರೀತಿಯ ವದಂತಿ ಹೇಗೆ ಹರಡುತ್ತದೆ ಎನುವ ಸಖೇದಾಶ್ಚರ್ಯ ವ್ಯಕ್ತ ಪಡಿಸಿದ್ದಾರೆ ಶಾರುಖ್ ಗೆ ಸಂಬಂಧ ಪಟ್ಟವರು. 
 
ಈ ಬಗ್ಗೆ ಪೊಲೀಸರನ್ನು ಕಾಂಟಾಕ್ಟ್ ಮಾಡಿದಾಗ ಕಳೆದ ಕೆಲವು ದಿನಗಳಿಂದ ಶಾರುಖ್ ಮನೆಗೆ ಪೊಲೀಸ್ ರಕ್ಷಣೆ ನೀಡಲಾಗಿದೆ. ಇದರ ಬಗ್ಗೆ ಹೆಚ್ಚಿನ ಚರ್ಚೆಯ ಅಗತ್ಯ ಇಲ್ಲ ಎಂದು ಹೇಳಿದ್ದಾರೆ. ಮೊರಾನಿ ಸೋದರರ ಮೇಲೆ ನಡೆದಂತಹ ಗುಂಡಿನ ದಾಳಿಯಿಂದ ಇಂತಹ ಈ ರೀತಿಯ ಕರೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ