ಪೂನಂ ಪಾಂಡೆಯನ್ನು ಕಿತ್ತೊಗೆದ ಫೇಸ್ ಬುಕ್ .. ನೊಂದು ಟ್ವೀಟ್ ಮಾಡಿದ ಮಾದಕ ಸುಂದರಿ!

ಶುಕ್ರವಾರ, 29 ಆಗಸ್ಟ್ 2014 (10:55 IST)
ದಿನನಿತ್ಯದ ಬದುಕಲ್ಲಿ ಸೋಶಿಯಲ್ ಮೀಡಿಯಾವು ಸಹಿತ ಭಾಗವಾಗಿದೆ. ಅದರ ಬಳಕೆ ದಿನೇದಿನೇ ಹೆಚ್ಚಾಗುತ್ತ ಸಾಗಿದೆ ಎಂದೇ ಹೇಳ ಬದುದಾಗಿದೆ.ಕೇವಲ ಸಾಮಾನ್ಯರು ಮಾತ್ರವಲ್ಲ ಸಿನಿಮಾ, ರಾಜಕೀಯ, ಇತರ   ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರು ಸಹಿತ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ ಸೋಶಿಯಲ್ ಮೀಡಿಯಾದಲ್ಲಿ. ಅದೇ ರೀತಿ ಬಾಲಿವುಡ್ ತಾರೆ ಪೂನಂ ಪಾಂಡೆ ಮಾಡಿದ ಗದ್ದಲ ಅಷ್ಟಿಷ್ಟಲ್ಲ  ಫೇಸ್ಬುಕ್  ನಲ್ಲಿ!
 
 ಆದರೆ ಈಗ ಸೋಶಿಯಲ್ ಮೀಡಿಯ ಫೇಸ್ಬುಕ್ ಪೂನಂ ಪಾಂಡೆಗೆ ಶಾಕ್ ನೀಡಿದೆ. ಅದು ಆಕೆಯ ಅಕೌಂಟ್ ನ್ನು ಫೇಸ್ ಬುಕ್ ನಿಂದ ತೆಗೆದು ಹಾಕುವ ನಿರ್ಣಯ ಮಾಡಿದೆ. 2 .1  ಲಕ್ಷ ಫಾಲೋ ಇರುವ ಈ ಮಾದಕ ಚೆಲುವೆ ಅಕೌಂಟ್ ತೆಗೆಯುವ ಕೆಲಸ ಯಾಕೆ ಮಾಡಿದೆ ಎನ್ನುವ ಸುದ್ದಿ ಸ್ಪಷ್ಟವಾಗಿಲ್ಲ  . ತನ್ನ ಫೇಸ್ ಬುಕ್ ಅಕೌಂಟ್ ತೆಗೆದು ಹಾಕಲಾಗಿದೆ ಎಂದು ಪೂನಂ ಟ್ವಿಟ್ಟರ್  ನಲ್ಲಿ  ತಿಳಿಸಿದ್ದಾಳೆ. 
 
 ಇದು ನನಗೆ ತುಂಬಾ ನೋವನ್ನು ಉಂಟು ಮಾಡಿದೆ. ನನಗೇನು ಮಾಡಬೇಕು ಎಂದು ಅರ್ಥ ಆಗ್ತಾ ಇಲ್ಲ. ಏನನ್ನು ಮಾಡಿದರೆ ಈ ಅಕೌಂಟ್ ಮತ್ತೆ ಪಡೆಯ ಬಹುದು ಎನ್ನುವ ಸಂದೇಶ ಆಕೆ ಟ್ವೀಟ್  ಮಾಡಿ ಕೇಳಿದ್ದಾಳೆ.
 
ಯಾರೇ ಆಗಿರಲಿ ಅಸಹ್ಯಕರವಾದ , ಅಶ್ಲೀಲಕರ ವಾಗಿ ಇರುವ ಅಂಶಗಳಿಗೆ ಆದ್ಯತೆ ನೀಡಿದರೆ ಅವರ ಅಕೌಂಟನ್ನು ನಿರ್ದಾಕ್ಷಿಣ್ಯವಾಗಿ  ಫೇಸ್ ಬುಕ್ ತೆಗೆದು ಹಾಕುತ್ತದೆ, ಈಗ ಪೂನಂ ವಿಷಯದಲ್ಲಿ ಅಂತಹದ್ದೇನಾಗಿದೆ ಎನ್ನುವುದು ಗೊತ್ತಿಲ್ಲ, ಒಂದಂತೂ ಸತ್ಯ ಅತಿಯಾದರೆ ಎಲ್ಲಿಯೂ ಜಾಗ ಸಿಗಲ್ಲ !! 

ವೆಬ್ದುನಿಯಾವನ್ನು ಓದಿ