ಬಿಹಾರ್ ಪೊಲೀಸರಿಗೆ ಮೋಡಿ ಮಾಡುತ್ತಿರುವ ರಾಣಿ ಮುಖರ್ಜಿ ಮರ್ದಾನಿ

ಶುಕ್ರವಾರ, 29 ಆಗಸ್ಟ್ 2014 (11:05 IST)
ಬಾಲಿವುಡ್ ತಾರೆ ರಾಣಿ ಮುಖರ್ಜಿ ನಟಿಸಿರುವ ಮರ್ದಾನಿ ಬಿಹಾರ್ ಪೊಲೀಸರಿಗೆ ಸ್ಫೂರ್ತಿ ನೀಡಿದೆ. ಇತ್ತೀಚಿಗೆ ಬಿಡುಗಡೆ ಆದ ಮರ್ದಾನಿ ಚಿತ್ರವನ್ನು ವಿಮರ್ಶಕರು ಹೊಗಳುತ್ತಿದ್ದಾರೆ. ಪೊಲೀಸರೆಲ್ಲರೂ ಮರ್ದಾನಿ ಚಿತ್ರವನ್ನು ವೀಕ್ಷಿಸಿ ಪಾಠ ಕಲಿಯ ಬೇಕು ಎಂದು ಆ ಚಿತ್ರದ  ಪ್ರದರ್ಶನವನ್ನು ಬಿಹಾರದ ಎಲ್ಲಾ  ಜಿಲ್ಲಾ ಎಸ್ಪಿ , ಜೀ ಆರ್ಪಿ, ಎಸ್ಸಿ, ಬಿಹಾರ್ ಮಿಲಿಟರಿ ಪೊಲೀಸ್  ಕಮ್ಯಾಂಡ್ ಗಳಿಗೆ ಏರ್ಪಾಟು ಮಾಡಬೇಕೆಂದು ಆ ರಾಜ್ಯದ ಸಿಐಡಿ ಅರವಿಂದ್ ಪಾಂಡೆ ಆದೇಶಿಸಿದ್ದಾರೆ.
 
ಮರ್ದಾನಿ ಮಹಿಳೆಯರ ಅಕ್ರಮ ರವಾನೆ ಕಥೆಯ ಹಂದರ ಹೊಂದಿದೆ. ಮಹಿಳೆಯರನ್ನು ಅಕ್ರಮವಾಗಿ ಸಾಗಿಸುವ ಕೆಲಸ ವಿಶ್ವವ್ಯಾಪಿಯಾಗಿದ್ದು, ಅದೊಂದು ನಾಗರೀಕ ಸಮಾಜದ ದುರಂತವಾಗಿದೆ. ಅಂಗಾಂಗ, ಮಹಿಳೆ, ಹಸುಗೂಸುಗಳ  ಮಾರಾಟ ವಿಶ್ವವಿಡಿ ಸಮಸ್ಯೆ ಆಗಿದೆ. ಈ ರೀತಿಯ ಮಾರಾಟ ಈಗ ಹೆಚ್ಚು ಹೆಚ್ಚಾಗಿದೆ ಎನ್ನುವ ಖೇದ ವ್ಯಕ್ತ ಪಡಿಸಿದ್ದಾರೆ ಅರವಿಂದ್ ಪಾಂಡೆ. ಇಂತಹ ಸಂಗತಿಗಳನ್ನು ಚಿತ್ರರೂಪದಲ್ಲಿ ತೋರಿಸಿರುವುದರಿಂದ ಸಾಕಷ್ಟು ಕಲಿಕೆ ಮಾಡಿಕೊಳ್ಳ ಬಹುದು ಪೊಲೀಸರು  ಎಂದು  ಈ ಅಧಿಕಾರಿ ಹೇಳಿದ್ದಾರೆ! 

ವೆಬ್ದುನಿಯಾವನ್ನು ಓದಿ