300 ಕೋಟಿ ಕ್ಲಬ್ ಗೆ ಸೇರ್ಪಡೆ ಆಯ್ತು ಸಲ್ಮಾನ್ ಖಾನ್ ಕಿಕ್

ಶುಕ್ರವಾರ, 29 ಆಗಸ್ಟ್ 2014 (11:11 IST)
ಸಿನಿಮಾದ ಗೆಲುವು ಸೋಲು ಹೊರತು ಪಡಿಸಿ ಬಾಲಿವುಡ್ ನಲ್ಲಿ ಅನೇಕ ರೀತಿಯ ರೆಕಾರ್ಡ್ ಮಾಡುವ ವಿಷಯದಲ್ಲಿ ಸಲ್ಮಾನ್ ಖಾನ್ ಒಬ್ಬರು. ಅವರ ಏಳು ಚಿತ್ರಗಳು ಬಾಕ್ಸಾಫೀಸಲ್ಲಿ ಸಾಧನೆ ಮಾಡಿ ಅಲ್ಲಿನ ಚರಿತ್ರೆಯಲ್ಲಿ ಮೊದಲ ಸ್ಥಾನ ಪಡೆದಿದೆ. ಅಂದರೆ ಈ ಕಲಾವಿದನ  ಏಳು ಚಿತ್ರವೂ ಸಹಿತ  ನೂರು ಕೋಟಿ ಕ್ಲಬ್ ಗೆ ಸೇರ್ಪಡೆ ಆಗಿ ರೆಕಾರ್ಡ್ ಉಂಟು ಮಾಡಿದೆ.  ಇನ್ನು ಇತ್ತೀಚಿಗೆ ಬಿಡುಗಡೆ ಆದ ಸಲ್ಮಾನ್ ಖಾನ್ ಅವರ ಕಿಕ್ ಚಿತ್ರದಲ್ಲಿ ಹೇಳಿಕೊಳ್ಳುವಂತಹ ಆಕರ್ಷಣೆ ಇಲ್ಲದೆ ಇದ್ದರೂ ಸಹಿತ ಕೋಟಿಗಳಷ್ಟು ಹಣ ಕೊಳ್ಳೆ ಹೊಡೆಯುತ್ತಿದೆ. ಇದರ ಮೂಲ ತೆಲುಗು ಚಿತ್ರ ಕಿಕ್. ಹಿಂದಿಯಲ್ಲಿ ಕಿಕ್ ರೀಮೇಕ್ ಚಿತ್ರದ ಬಗ್ಗೆ ತೆಲುಗು ಕಿಕ್ ನಿರ್ದೇಶಕ  ಸುರೇಂದರ್ ರೆಡ್ಡಿ   ಖುಷಿ ಹೊಂದಿಲ್ಲ. ಮೂಲ ಚಿತ್ರದಲ್ಲಿ ಇರುವಂತಹ ಅನೇಕ ಸಂಗತಿಗಳು, ಅಂಶಗಳು ಇದರಲ್ಲಿ ಇಲ್ಲ ಎನ್ನುವ ಬೇಸರ ವ್ಯಕ್ತ ಪಡಿಸಿದ್ದಾರೆ.
 
ತೆಲುಗಿನಲ್ಲಿ ಇರುವಂತಹ ಆಸಕ್ತಿಕರ ಅಂಶಗಳು ಹಿಂದಿಯಲ್ಲಿ ಇಲ್ಲ ಎಂದು ನಿರ್ದೇಶಕ ಸುರೇಂದರ್ ರೆಡ್ಡಿ ಬೇಜಾರಾಗಿ ಹೇಳಿಕೊಳ್ಳುತ್ತಾ ಇದ್ದರೂ ಸಹಿತ ಕಿಕ್ ಚಿತ್ರದ ಗಳಿಕೆ ಇನ್ನು ನಿಂತೇ ಇಲ್ಲ.  ಕಿಕ್ ಮೂಲಕ ಮೊದಲ ಬಾರಿ ಸಲ್ಮಾನ್  ಖಾನ್ ಮುನ್ನೂರು ಕೋಟಿ  ಕ್ಲಬ್ ಗೆ ಸೇರ್ಪಡೆ ಆಗಿದ್ದಾರೆ. ಈ ಮುಖಾಂತರ ಆಮೀರ್, ಶಾರೂಖ್ ಅವರಿಗೆ ಸವಾಲ್ ಹಾಕಿದ್ದಾರೆ. ಕಿಕ್ ಇಡಿ ದೇಶ ಒಟ್ಟಾರೆ 307 ಕೋಟಿ ಗಳಿಸಿದೆ. ವಿಶ್ವವಿಡಿ 377 ಕೋಟಿ , ವಿಶ್ವ ವ್ಯಾಪಿಯಾಗಿ ಧೂಮ್ 3 542 ಕೋಟಿ, ಚೈನಾ ಎಕ್ಸ್ ಪ್ರೆಸ್ 422 ಕೋಟಿ, ತ್ರಿ ಇಡಿಯೇಟ್ಸ್ 365 ಕೋಟಿಗಳಷ್ಟು ವಸೂಲಿ ಮಾಡಿ ರೆಕಾರ್ಡ್ ಕ್ರಿಯೇಟ್ ಮಾಡಿದೆ.  

ವೆಬ್ದುನಿಯಾವನ್ನು ಓದಿ