ಶಾರೂಖ್ ಖಾನ್ ಹೆಂಡತಿ ಮಾತಿಗೆ ಬೆಲೆ ಕೊಡೋಲ್ಲವಂತೆ ..!!

ಶನಿವಾರ, 30 ಆಗಸ್ಟ್ 2014 (09:18 IST)
ಬಾಲಿವುಡ್ ಬಾದ್ಷಾ ಶಾರೂಖ್ ಖಾನ್ ತನ್ನ ಮಕ್ಕಳ ಮೇಲೆ ಹೊಂದಿರುವ ಪ್ರೀತಿ ಅಷ್ಟಿಷ್ಟಲ್ಲ. ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ತಮ್ಮ ಮಕ್ಕಳ ಮೇಲೆ ಪ್ರೀತಿ ಇದ್ದೆ ಇರುತ್ತದೆ ಅದು ವಿಶೇಷವಲ್ಲ, ಆದರೆ ಕಿನ್ ಖಾನ್ ಗೆ ತನ್ನ ಮಕ್ಕಳಿಗಾಗಿ ಪಾತ್ರಗಳ   ವಿಷಯದಲ್ಲಿ ಹೆಚ್ಚು ಚೂಸಿ ಆಗಿರುವುದಲ್ಲದೆ, ಅವರು ಬಯಸುವಂತಹ  ಸಾಹಸ ದೃಶ್ಯಗಳಲ್ಲಿ ನಟಿಸಲು ಹೆಚ್ಚಿನ ಆದ್ಯತೆ ನೀಡುತ್ತಾರಂತೆ. ಈಗ ಬಿಡುಗಡೆಗೆ ಸಿದ್ಧ ಆಗಿರುವ ಚಿತ್ರ ಹ್ಯಾಪಿ ನ್ಯೂ ಇಯರ್ ಇದಕ್ಕೆ  ಈಗಿನ ಉದಾಹರಣೆ . ಇದರ ಬಗ್ಗೆ ಮಾತಾನಾಡುತ್ತಾ ಶಾರುಖ್ ಖಾನ್ ತೆರೆಯ ಮೇಲೆ  ನಮ್ಮ  ಸಾಹಸವೆಲ್ಲ ಮಕ್ಕಳಾದ ಆರ್ಯನ್ ಮತ್ತು ಸುಹಾನಗಾಗಿ.
 
 ಸಿನಿಮಾಗಳಲ್ಲಿ ಆದಷ್ಟು ಹೆಚ್ಚು ಸಾಹಸ ದೃಶ್ಯಗಳಲ್ಲಿ  ಕಾಣುವಂತೆ ಅವರು ನನಗೆ ಹೇಳುತ್ತಾರೆ. ಆದ್ದರಿಂದ ಅವರು ಹೇಳಿದ ಮಾತುಗಳನ್ನು ಕೇಳುತ್ತೇನೆ. ಆಕೆ ಹೇಳುವ (ಗೌರಿ ) ಮಾತುಗಳಿಗಿಂತ ಹೆಚ್ಚು ಕೇಳೋದು ಮಕ್ಕಳ ಮಾತನ್ನೇ ಎಂದು ನಗುತ್ತ ಹೇಳಿದ್ದಾರೆ ಶಾರುಖ್.ನಿನ್ನಂತ ಅಪ್ಪ ಇಲ್ಲ !! 

ವೆಬ್ದುನಿಯಾವನ್ನು ಓದಿ