ಖಡಕ್ ವಕೀಲೆಯಾಗಿ ಐಶ್ವರ್ಯ ರೈ .. ಕಪ್ಪು ಕೋಟಿನಿಂದ ರೀ ಎಂಟ್ರಿ

ಶನಿವಾರ, 30 ಆಗಸ್ಟ್ 2014 (09:33 IST)
ಐಶ್ವರ್ಯ್ ರೈ ಎಂದಿಗೆ ಬಣ್ಣ ಹಚ್ಚುತ್ತಾರೆ, ಯಾವಾಗ ತಮ್ಮನ್ನು ರಂಜಿಸುತ್ತಾರೆ ಎನ್ನುವ ಕಾತುರ ಆಕೆಯ ಅಭಿಮಾನಿಗಳಲ್ಲಿ ತುಂಬಿ ಹರಿಯುತ್ತಿದೆ, ಆದರೂ ಸಹಿತ ಈವರೆಗೂ ಆಕೆ ತನ್ನ ರೀ ಎಂಟ್ರಿ ಮಾಡಿಲ್ಲ. ಕಳೆದ ಎರಡುಮೂರು ವರ್ಷಗಳಿಂದ ಆಕೆಯು ಚಿತ್ರದಲ್ಲಿ ನಟಿಸುವ ಮಾತೆ ಎಲ್ಲೆಡೆ, ಆದರೂ ಸಹಿತ ಐಶ್ ನಟನೆಗೆ ಆದ್ಯತೆ ನೀಡಲೇ ಇಲ್ಲ. ಈಗ ಮತ್ತೆ ಆಕೆ ಮೇಕ್ ಅಪ್ ಮಾಡಿ ಕ್ಯಾಮರಾ ಮುಂದೆ ನಿಲ್ಲುವ ಕಾಲ ಹತ್ತಿರ ಆಗ್ತಾ ಇದೆ. ಈ ಬಾರಿ ಗ್ಲಾಮರ್ ಬೊಂಬೆಯಾಗದೆ  ಕರಿ ಕೋಟು ಧರಿಸಿ ವಕಿಲೆಯ ಪಾತ್ರದಲ್ಲಿ ಆಕೆ ಕಾಣಿಸಿಕೊಳ್ಳುತ್ತಿದ್ದಾರೆ. ಇದೆ ಮೊದಲ ಬಾರಿ ಈಕೆ ಇಂತಹ ಪಾತ್ರ ಮಾಡಿರುವುದು.  
 
ಸಂಜಯ್ ಗುಪ್ತ್ ಅವರು ನಿರ್ಮಿಸುತ್ತಿರುವ ಚಿತ್ರದಲ್ಲಿ ಐಶ್ವರ್ಯ ರಾಯ್ ಒಂದು ಪವರ್ ಫುಲ್ ಪಾತ್ರದಲ್ಲಿ ನಟಿಸುತ್ತಾ ಇದ್ದಾರೆ.ಇದರಲ್ಲಿ ಆಕೆಯ ವಕೀಲೆ ಪಾತ್ರ ಹೆಚ್ಚು ಆಸಕ್ತಿಭರಿತವಾಗಿರುತ್ತದೆ ಎನ್ನುವ ಸುದ್ದಿ ಕೇಳಿ ಬಂದಿದೆ. ಈ ಚಿತ್ರಕ್ಕೆ ಜಸ್ಬಾ ಎನ್ನುವ ಶೀರ್ಷಿಕೆ ನೀಡಲಾಗಿದೆ. ಈ ಚಿತ್ರದಲ್ಲಿ ಆಕೆ ಆಕ್ಷನ್ ಸೀನ್ ಗಳಲ್ಲಿ ಸಹಿತ ಕಂಡು ಬರುತ್ತಿದ್ದಾರೆ. ಐಶ್ ಗೆ ಜೋಡಿಯಾಗಿ ಇರ್ಫಾನ್ ಖಾನ್ ನಟಿಸುತ್ತಿದ್ದಾರಂತೆ. ಇದರಲ್ಲಿ ಇರ್ಫಾನ್ ಸಸ್ಪೆಂಡ್ ಆದ ಓರ್ವ ಪೊಲೀಸ್ ಅಧಿಕಾರಿ ಪಾತ್ರದಲ್ಲಿ  ಕಾಣ ಬರುತ್ತಿದ್ದಾರೆ.ಜಾನ್ ಅಬ್ರಹಾಂ ಸಹಿತ ಮುಖ್ಯ ಭೂಮಿಕೆಯಲ್ಲಿ ಇದ್ದಾರೆ. 

ವೆಬ್ದುನಿಯಾವನ್ನು ಓದಿ