ಪರಿಚಿತರ ಅಂತ್ಯಸಂಸ್ಕಾರಕ್ಕೆ ಹೋಗದೆ ಇರಬೇಡಿ .. ಮತ್ತೆ ಅವರೆಂದಿಗೂ ನಮಗೆ ಸಿಗುವುದಿಲ್ಲ

ಮಂಗಳವಾರ, 9 ಸೆಪ್ಟಂಬರ್ 2014 (11:16 IST)
ಸ್ನೇಹಿತರ ದಿನದಂದು ಆಪ್ತ ಮಿತ್ರರು ವಿಶ್ ಮಾಡಿದಾಗ ತಕ್ಷಣ ಅವರಿಗೂ ವಿಶ್ ಮಾಡಿ ಬಿಡಿ, ಅಥವಾ ನಿಮಗೆ ಮೊದಲೇ ವಿಶ್ ಮಾಡ ಬೇಕು ಎಂದೆನಿಸಿದರೆ ತಪ್ಪದೆ ತಕ್ಷಣ ಮಾಡಿ ಬಿಡಿ ಸ್ನೇಹಿತರ ಮದುವೆ, ಇನ್ನು ಅನೇಕ ಸಂಭ್ರಮಗಳಿಗೆ ತಪ್ಪದೆ ಹೋಗಿ ಆನಂದಿಸಿ, ಒಂದು ವೇಳೆ ಇಂತಹ ಕಾರ್ಯಕ್ರಮಗಳು ಮಿಸ್ ಆದರೆ ತೊಂದರೆ ಇಲ್ಲ , ಆದರೆ ಆಪ್ತರು ಮತ್ತೆ ಹಿಂತಿರುಗಿ ಬಾರದ ಜಾಗಕ್ಕೆ ಹೊರಟು ಹೋದರೆ ಅಂತ್ಯಕ್ರಿಯೆಗಳಿಗೆ ಮಾತ್ರ ತಪ್ಪದೆ ಹಾಜರಾಗಿ.  ಏಕೆಂದರೆ ಆನಂತರ ಅವರನ್ನು ಎಂದಿಗೂ ಮತ್ತೆ ನೋಡಲಾಗುವುದಿಲ್ಲ ಎಂದು ಹೇಳಿದ್ದಾರೆ ಅಮಿತಾಬ್ ಬಚ್ಚನ್.
 
 ಬಿಗ್ ಬಿ ಇದ್ದಕ್ಕಿದ್ದ  ಹಾಗೆ ಹೀಗೆ ಹೇಳುವುದರ ಹಿಂದೆ ದೊಡ್ಡ ಕಾರಣವಿದೆ. 30  ವರ್ಷಗಳ ಕಾಲ ತಮ್ಮ ಮನೆ, ಕಚೇರಿಗೆ ಸಂಬಂಧಪಟ್ಟ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದ ಆತನ ಸ್ಟಾಫ್  ಮೆಂಬರ್ ಇದ್ದಕ್ಕಿದ್ದ ಹಾಗೆ ಮರಣಿಸಿದರು. ಆತನ ಬಗ್ಗೆ ಹೇಳುತ್ತಾ ನನ್ನ ಮಗ ಅಭಿಷೇಕ್ ಬಚ್ಚನ್, ಮಗಳು ಶ್ವೇತ  ಆತನ ಕೈಲೇ ಬೆಳೆದರು. ನಮ್ಮ ಮಕ್ಕಳು ಆತನನ್ನು ಅಂಕಲ್ ಎಂದು ಕರೆಯುತ್ತಿದ್ದರು. ಆರೋಗ್ಯವಾಗಿಯೇ ಇದ್ದ. ಸಾಯುವ ದಿನದ ಮುಂಜಾನೆ ನಾನು ಆತನ ಜೊತೆ ಮಾತನಾಡಿದೆ. ಫಂಕ್ಷನ್ ಇದೆ ಎಂದು ಕೇಳಿ ಒಂದು ವಾರ ರಜೆ ಕೇಳಿದ. ಆ ಬಳಿಕ ಊರಿಗೆ ಹೋದವನಿಗೆ ಇದ್ದಕ್ಕಿದ್ದ ಹಾಗೆ ಹೃದಯಾಘಾತವಾಗಿ ಮರಣಿಸಿದ. ಈ ಸಂಗತಿ ಕೇಳಿದಾಗ ದಿಗ್ಭ್ರಾಂತಿ  ಆಯ್ತು ನನಗೆ. ಎಲ್ಲರಿಗೂ ಗೊತ್ತು ಹುಟ್ಟಿದವ ಸಾಯಲೇ ಬೇಕು. ಆದರೂ ಇಂತಹ ಸಂಗತಿಗಳನ್ನು ಜೀರ್ಣಿಸಿಕೊಳ್ಳುವುದು ಕಷ್ಟ. ಮತ್ತೆ ಎಲ್ಲೋ ಹುಟ್ಟುತ್ತಾನೆ ಎಂದು ಮನವನ್ನು ಸಂತೈಸಿಕೊಳ್ಳುವುದಷ್ಟೇ ಈಗ ಉಳಿದಿರುವುದು ಎಂದು ಹೇಳಿದ್ದಾರೆ ಬಿಗ್ ಬಿ.. 

ವೆಬ್ದುನಿಯಾವನ್ನು ಓದಿ