ಪರಿಣಿತಿ ಮನ ಗೆದ್ದ ಷಾದ್ ... ಆತ ಅಷ್ಟೊಂದು ಆಕರ್ಷಿಸಲು ಕಾರಣ ?

ಮಂಗಳವಾರ, 9 ಸೆಪ್ಟಂಬರ್ 2014 (11:20 IST)
ಈವರೆಗೂ ತನ್ನ ತಾರಾ ಬದುಕಿನಲ್ಲಿ ಇದ್ದಂತಹ ಇಮೇಜ್ ಕಿಲ್ ದಿಲ್  ಮತ್ತು ದಾವತ್ ಇ ಇಶ್ಕ್  ಚಿತ್ರಗಳು ಬದಲಾಯಿಸುತ್ತದೆ ಎಂದು ನಂಬಿದ್ದಾಳೆ ಪರಿಣಿತಿ ಚೋಪ್ರ. ಇತ್ತೀಚಿಗೆ  ನಡೆದ ಸಂದರ್ಶನ ಒಂದರಲ್ಲಿ ಮಾತನಾಡುತ್ತ ಆಕೆ ತನ್ನ ಬಗ್ಗೆ ಇರುವ ಡೇಟಿಂಗ್ ಅಪವಾದಗಳನ್ನು ಸಾರಾಸಗಟಾಗಿ ತಳ್ಳಿ ಹಾಕಿದ್ದಾಳೆ.  ಕಿಲ್ ದಿಲ್ ನಿರ್ದೇಶಕ ಷಾದ್ ಅಲಿ ಜೊತೆ ಕೆಲಸ  ಮಾಡುವಾಗ ಯಾವ ರೀತಿಯ ಅನುಭವ ಉಂಟಾಯಿತು ಎನ್ನುವ ಪ್ರಶ್ನೆಗೆ ಆಕೆ ಆರಾಮವಾಗಿ ಉತ್ತರಿಸಿದ್ದಾಳೆ.   
 
ಎಷ್ಟೇ ಒತ್ತಡವಿದ್ದರೂ ಸಹಿತ ಷಾದ್ ಅವರು  ಶಾಂತ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.ಷಾದ್ ಕೋಪಿಷ್ಟರಲ್ಲ, ಮುಖ್ಯವಾಗಿ ಅವರು ಅದ್ಭುತವಾದ ನಿರ್ದೇಶಕ. ಅಷ್ಟೇ ಅಲ್ಲದೆ ಉತ್ತಮ ಸ್ನೇಹಿತ. ಶೂಟಿಂಗ್ ಪೂರ್ಣ ಆದೊಡನೆ ಆತ ಅತ್ಯಂತ ಆರಾಮವಾಗಿ ಸಮಯ ಕಳೆಯುತ್ತಿದ್ದರು. ತನ್ನ ಜೊತೆ ನಟಿಸುತ್ತಿರುವ ರಣವೀರ್ ಮತ್ತು ಷಾದ್ ಅತ್ಯುತ್ತಮ  ಸ್ನೇಹಿತರು ಎನ್ನುವ ಮಾತನ್ನು ಹೇಳಿದ್ದಾಳೆ ಪರಿಣಿತಿ .
 
ಷಾದ್ ಅವರನ್ನು ಅರ್ಥ ಮಾಡಿಕೊಳ್ಳುವುದು ಸುಲಭವಲ್ಲ, ಆದರೆ ರಣವೀರ್ ಅವರು ಸುಲಭವಾಗಿ ಅರ್ಥ ಆದರು. ಅವರ ಬಗ್ಗೆ ಇರುವಂತಹ ಭಿನ್ನಾಭಿಪ್ರಾಯ ದೂರವಾಯ್ತು ಎನ್ನುವ ಮಾತನ್ನು ಹೇಳಿದ್ದಾಳೆ ಪರಿಣಿತ. ತಾನು ನಗುತ್ತ ಎಲ್ಲರನ್ನು ನಗಿಸುವ ಗುಣ ಹೊಂದಿದ್ದಾರೆ ಷಾದ್ ಎಂದು ಹೇಳಿದ್ದಾಳೆ. 

ವೆಬ್ದುನಿಯಾವನ್ನು ಓದಿ