ಮುಂಬೈ ಟು ಚಂಡಿಗಡ್ ಆಹಾರ ಯಾತ್ರೆಯ ಸಂಭ್ರಮದಲ್ಲಿ ದಾವತ್ ಇ ಇಶ್ಕ್ ತಂಡ...

ಶನಿವಾರ, 13 ಸೆಪ್ಟಂಬರ್ 2014 (10:21 IST)
ಎಲ್ಲರಿಗೂ ವಿಹಾರ  ಯಾತ್ರೆ ಬಗ್ಗೆ ಅರಿವಿದೆ ಆದರೆ ಈ ಚಿತ್ರತಂಡ ಭಿನ್ನ ರೀತಿಯಲ್ಲಿ ತಮ್ಮ ಚಿತ್ರವನ್ನು ಜಗತ್ತಿನ ಮುಂದೆ ತರಲು ನಿಶ್ಚಯ ಮಾಡಿದ್ದಾರೆ, ಇದರಲ್ಲಿ ಅವರು ಆಹಾರ ಯಾತ್ರೆಗೆ ಆದ್ಯತೆ ನೀಡುತ್ತಿದ್ದಾರೆ. ಈ ವಿಶೇಷವಾದ ಯಾತ್ರೆಯಲ್ಲಿ ಆದಿತ್ಯ ರಾಯ್ ಕಪೂರ್ ಮತ್ತು ಪರಿಣಿತಿ ಚೋಪ್ರ ಸಕತ್ ಬ್ಯುಸಿಯಾಗಿದ್ದಾರೆ. ಈ ಜೋಡಿ ಅಭಿನಯಿಸಿರುವ ದಾವತ್ -ಇ -ಇಶ್ಕ್ ಚಿತ್ರದ ಬಿಡುಗಡೆಯ ಹಾದಿಯಲ್ಲಿದೆ. ಚಿತ್ರದಲ್ಲಿ ಆಹಾರಕ್ಕೆ ಆದ್ಯತೆ ನೀಡಿರುವುದರಿಂದ ಹೊಸ ಯೋಜನೆ ಕೈಗೊಂಡಿದ್ದಾರೆ ನಿರ್ದೇಶಕರು. ಇದು ಹಬೀಬ್ ಫೈಸಲ್ ನಿರ್ದೇಶನದ ಮೊಟ್ಟ ಮೊದಲ ಚಿತ್ರವಾಗಿದೆ
 
ಪ್ರೇಕ್ಷಕರ ಬಳಿ ತಲುಪಲು ಸಿಕ್ಕಾಪಟ್ಟೆ ಅದ್ಧೂರಿಯಾಗಿ ಪ್ರಚಾರ ಕಾರ್ಯ ಮಾಡುತ್ತಿದ್ದಾರೆ. ಅದರ ಭಾಗವಾಗಿ ಮುಂಬೈ ಟು ಚಂಡಿಗಡ್ ಆಹಾರ ಯಾತ್ರೆಯ ಯೋಜನೆ ಕೈಗೊಂಡಿದ್ದಾರೆ ಚಿತ್ರತಂಡ. ಈ ಮಾರ್ಗದಲ್ಲಿ ದೊರಕುವ ರಸ್ತೆ ಬದಿಯ ಹೋಟೆಲ್‌ನಿಂದ ಹಿಡಿದು ಸ್ಟಾರ್ ಹೋಟೆಲ್ ತನಕ ಹೋಗಿ ಅಲ್ಲಿ ತಯಾರಾದ ಅಡುಗೆ ರುಚಿಯನ್ನು ನೋಡುತ್ತಾರಂತೆ ಪರಿಣಿ ಮತ್ತು ಆದಿತ್ಯ. ಇವರಿಬ್ಬರೂ ಮುಂಬೈ‌ನಿಂದ ಚಂಡಿಗಡ್ ವರೆಗೂ ಕಾರಿನಲ್ಲಿ ಹೋಗುತ್ತಾರಂತೆ. ಅಲ್ಲಿ ಇರುವವರಿಗೆ ದಾವತ್ ಇ ಇಶ್ಕ್ ಬಗ್ಗೆ ಒಂದಷ್ಟು ಅಂಶಗಳನ್ನು ಸಹಿತ ಹೇಳುತ್ತಾರಂತೆ. 

ವೆಬ್ದುನಿಯಾವನ್ನು ಓದಿ