ಹೃತಿಕ್ ರೋಷನ್ ಗೆ ಪ್ರತಿದಿನ ಬರುವ ಪತ್ರಗಳಲ್ಲಿ ಏನಿರುತ್ತೆ ಗೊತ್ತೇ? ಆ ಪತ್ರಗಳನ್ನು ಬರೆಯುವವರು ಯಾರೆಂದರೆ !

ಶನಿವಾರ, 13 ಸೆಪ್ಟಂಬರ್ 2014 (10:26 IST)
ಸಲ್ಮಾನ್ ಖಾನ್ ತನ್ನ ಮೈಮೇಲೆ  ಶರ್ಟ್  ಧರಿಸಲು ಆದ್ಯತೆ ನೀಡಲ್ಲ ತಮ್ಮ ಚಿತ್ರಗಳಲ್ಲಿ .. ಇನ್ನು  ಶಾರುಖ್   ಖಾನ್ ಎಯಿಟ್  ಪ್ಯಾಕ್  ಮೂಲಕ ತನ್ನ ರೂಪ  ಜಗತ್ತಿನ ಮುಂದೆ ಇಟ್ಟಿದ್ದಾರೆ . ಆದರೆ  ಹೆಣ್ಣು ಮಕ್ಕಳಿಗೆ  ಇವರಿಬ್ಬರಿಗಿಂತ  ಹೆಚ್ಚಾಗಿ  ಆಕರ್ಷಣೆ  ಇರೋದು  ಗ್ರೀಕ್  ದೇವತೆ  ಹೃತಿಕ್  ರೋಷನ್ ಕಡೆಗೆ. ಬಾಲಿವುಡ್ ನ ಹಾಟೆಸ್ಟ್ ಮ್ಯಾನ್ ಎನ್ನುವ ಅಗ್ಗಳಿಕೆ ಪಡೆದಿರುವ  ಹೃತಿಕ್  ಕಂಡ್ರೆ ಹುಡುಗೀರಿಗೆ ಸಿಕ್ಕಾಪಟ್ಟೆ ಇಷ್ಟವಂತೆ . ಅವರಿಗೆ ದಿನಕ್ಕೆ ಲೆಕ್ಕ ವಿಲ್ಲದಷ್ಟು ಐ ಲವ್ ಯು ಎಂದು ಹೇಳುವ ಪತ್ರಗಳು ಬರುತ್ತಿರುತ್ತದೆಯಂತೆ. 
 
ಒಂದರ್ಥದಲ್ಲಿ ದಾಖಲೆ ನಿರ್ಮಾಣ ಆಗುವಷ್ಟು! ಅಷ್ಟೇ ಅಲ್ಲದೆ ಆ ಪಾತ್ರಗಳಲ್ಲಿ ಪ್ರೇಮ ನಿವೇದನೆ ಜೊತೆಗೆ ಮತ್ತೆ ಇನ್ನು ಏನೇನೇನೋ ಬರೆದಿರುತ್ತಾರಂತೆ ಹೃತಿಕ್‌ಗೆ ಮುಜುಗರವಾಗುವಷ್ಟು! ಹಾಗಂತ ಅವರ ಆಪ್ತರು ಹೇಳಿದ್ದಾರೆ. ಸಧ್ಯಕ್ಕೆ ಹೃತಿಕ್ ರೋಷನ್ ಅವರ ಬ್ಯಾಂಗ್ ಬ್ಯಾಂಗ್ ಚಿತ್ರದ ಬಿಡುಗಡೆಯ ಸಮಯ ಹತ್ತಿರ ಆಗುತ್ತಿದೆ. ಈ ಚಿತ್ರದಲ್ಲಿ ಕತ್ರಿನ ಜೊತೆ ಮಾಡುವ ಮೋಡಿ ಮತ್ತಷ್ಟು ಹುಡುಗೀರ ಗಮನ ಸೆಳೆಯುತ್ತದೆ ಎಂದು ನಂಬಿದ್ದಾರೆ ಚಿತ್ರ ಮಂದಿ. 

ವೆಬ್ದುನಿಯಾವನ್ನು ಓದಿ