ಶಾರುಖ್ ಖಾನ್ ಎಯಿಟ್ ಪ್ಯಾಕ್ ಬಗ್ಗೆ ಸಲ್ಮಾನ್ ಖಾನ್‌ಗೆ ಸಂದೇಹವಂತೆ...

ಸೋಮವಾರ, 15 ಸೆಪ್ಟಂಬರ್ 2014 (10:39 IST)
ಬಾಲಿವುಡ್ ನಲ್ಲಿ ಯಾವ ವಿಷಯಕ್ಕೆ ಸುದ್ದಿಯಾಗುತ್ತದೆಯೋ ಬಲ್ಲವರು ಯಾರು.. ಹಾಗೆ ಆಗಿದೆ ಈಗ ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ಇಬ್ಬರು ಬದ್ಧ ದ್ವೇಷಿಗಳು ಮತ್ತು ಸ್ನೇಹಿತರು ಎನ್ನುವುದು ಎಲ್ಲರಿಗೂ ಗೊತ್ತು. ಈ ಸ್ನೇಹಿತರು ಮುಖ್ಯವಾಗಿ ಕಾರ್ಯಕ್ರಮಗಳಲ್ಲಿ ಒಬ್ಬರನೊಬ್ಬರು ಹಗ್ ಮಾಡಿ ಮಾತಾಡಿಕೊಳ್ಳುವುದು ಸಾಮಾನ್ಯ ಸಂಗತಿ. ಅದೇರೀತಿ ಅವರು ಒಬ್ಬರ ಬಗ್ಗೆ ಮತ್ತೊಬ್ಬರು ಬೇರೆ ರೀತಿ ಕಾಮೆಂಟ್ ಮಾಡಿಕೊಳ್ಳುವುದು ಸಹ ಸಾಮಾನ್ಯ ಸಂಗತಿ. ಈಗ ಕಿಂಗ್ ಖಾನ್ ಶಾರುಖ್ ಖಾನ್ ಅವರಿ ಎಯಿಟ್ ಪ್ಯಾಕ್ ಮೂಲಕ ಮಿಂಚುತ್ತಿದ್ದಾರೆ. ಅದರ ಬಗ್ಗೆ ಸಲ್ಮಾನ್ ಖಾನ್ ಈ ಎಯಿಟ್ ಪ್ಯಾಕ್ ನಿಜವೇನಾ ಎನ್ನುವ ಪ್ರಶ್ನೆ ಕೇಳಿದ್ದಾರೆ. ಇದು  ನಿಜವಾಗಿದೆಯೋ ಅಥ್ವಾ ಸುಳ್ಳೋ ಎನ್ನುವ ಸಂದೇಹ ಆರಂಭವಾಗಿದೆ ಆತನಿಗೆ. ಅದನ್ನು ಬಹಿರಂಗವಾಗಿ ಹೇಳಿ ಎಲ್ಲರ ಗಮನ ಸೆಳೆದಿದ್ದಾರೆ ಈ ಬೈಸೆಪ್ಸ್ ವೀರ ಸಲ್ಮಾನ್ ಖಾನ್. 
 
ಬಾಲಿವುಡ್ ಬಾದ್ಷ ಅವರನ್ನು ವೈಯಕ್ತಿಕವಾಗಿ  ಭೇಟಿ  ಮಾಡಿರುವ ಸಲ್ಲು ಮಿಯ ಹ್ಯಾಪಿ ನ್ಯೂ ಇಯರ್ ಟ್ರೇಲರ್ ವೀಕ್ಷಿಸಿ ಶಾರೂಖ್ ಸಕತ್ತಾಗಿ ಅಭಿನಯಿಸಿದ್ದಾರೆ ಎನ್ನುವ ಮಾತನ್ನು ಹೇಳಿದ್ದಾರೆ. ಆದರೆ ಈ ಬಗ್ಗೆ ಅದ್ಯಾಕೋ ಶಾರುಖ್ ಯಾವುದೇ ಪ್ರತಿಕ್ರಿಯೆ  ನೀಡಿಲ್ಲ. ಅದ್ಯಾಕೆ ಈ ರೀತಿ ಇದ್ದಾರೆ ಶಾರುಖ್ ಎನ್ನುವ ಪ್ರಶ್ನೆ ಬಿ ಟೌನ್ ವಾಸಿಗಳನ್ನು   ಕಾಡುತ್ತಿದೆ.. ಜೊತೆ ನಮಗೂ ಸಹಿತ ! 

ವೆಬ್ದುನಿಯಾವನ್ನು ಓದಿ