ಶಾರೂಖ್ ಖಾನ್ ಮೇಲೊಂದು ಕೇಸ್ .. ಬಾಲಿವುಡ್ ನಲ್ಲಿ ಕೇಸುಗಳ ಹಂಗಾಮ

ಮಂಗಳವಾರ, 16 ಸೆಪ್ಟಂಬರ್ 2014 (11:43 IST)
ಬಾಲಿವುಡ್ ನಲ್ಲಿ ಕೇಸ್ ಹಾಕುವುದು ಸಹ ಒಂದು ಸಾಮಾನ್ಯ   ಸಂಗತಿಯಾಗಿ ಬಿಟ್ಟಿದೆ. ಮುಂಬೈ ಬಾಂದ್ರ ಕೋರ್ಟ್‌ನಲ್ಲಿ ಶಾರುಖ್ ಖಾನ್ ಮೇಲೆ ಕೇಸ್ ನಮೂದಾಗಿದೆ. ಶಾರುಖ್ ಮನೆಯ ಪಕ್ಕದಲ್ಲಿರುವ ಸ್ಥಳದಲ್ಲಿ ಅಕ್ರಮವಾಗಿ ಕಟ್ಟಡ  ನಿರ್ಮಾಣ ಮಾಡಿದ್ದಾರೆ ಎನ್ನಲಾದ ಸಂಗತಿ ಬಗ್ಗೆ ಈಗಾಗಲೇ ಬಾಲಿವುಡ್ ನಲ್ಲಿ ಸಾಕಷ್ಟು ಸುದ್ದಿ ಹರಡಿದೆ. ಅದಕ್ಕೆ ಪೂರಕವಾಗಿ ಈಗ ಕೇಸ್ ಸಹಿತ ದಾಖಲಾಗಿದೆ. ಶಾರುಖ್ ಖಾನ್ ಅವರು ತಮ್ಮ ಮನೆ ಪಕ್ಕದಲ್ಲಿ ಅಕ್ರಮ ರಾಂಪ್ ನಿರ್ಮಾಣ ಮಾಡಿರುವ ಬಗ್ಗೆ ಸಮಾಜ ಸೇವಕ ನಿಕೋಲಾಸ್ ಅಲ್ಮಿದಾ ಕೇಸ್ ದಾಖಲು ಮಾಡಿದ್ದಾರೆ.  
 
ಈ ಕೇಸ್ ನಲ್ಲಿ ಬೃಹತ್ ಮುಂಬೈ ಮುನ್ಸಿಪಲ್ ಕಾರ್ಪೋರೇಶನ್ ಕಮೀಷನರ್  ಅಲ್ಲದೆ  ಮತ್ತೂ ಮೂರು ಜನ ಅಧಿಕಾರಿಗಳು ಪ್ರತಿವಾದಿಗಳಾಗಿದ್ದಾರೆ.ಜನರ ಓಡಾಡುವುದಕ್ಕೆ ಕಷ್ಟಕರವಾಗಿರುವ ಈ ಜಾಗದಲ್ಲಿ  ಅಕ್ರಮವಾಗಿ  ನಿರ್ಮಿಸಿರುವ ಕಟ್ಟಡವನ್ನು ನಿರ್ಮೂಲನ ಮಾಡುವಂತೆ ಮಾಡಲು ಅನೇಕ ಅಧಿಕಾರಿಗಳನ್ನು ಭೇಟಿ ಮಾಡಿದ್ದೆ ಆದರೆ ಅವರಿಂದ ಯಾವುದೇ ರೀತಿಯಲ್ಲು ಪ್ರತಿಕ್ರಿಯೆ ದೊರಕದ ಕಾರಣ ತಾನು ಕೋರ್ಟನ್ನು ಆಶ್ರಯಿಸ ಬೇಕಾಯ್ತು ಎಂದು ಅಲ್ಮಿದಾ ಹೇಳಿದ್ದಾರೆ.  

ವೆಬ್ದುನಿಯಾವನ್ನು ಓದಿ