ಶ್ರುತಿ ಹಾಸನ್ ಮನ ಸೆಳೆದ ಹೀರೋ... ಆತನ ಬಗ್ಗೆಯೇ ಗುಣಗಾನ

ಮಂಗಳವಾರ, 16 ಸೆಪ್ಟಂಬರ್ 2014 (11:47 IST)
ಸಾಮಾನ್ಯವಾಗಿ ಚಿತ್ರರಂಗದಲ್ಲಿ ಯಾರು ಹೆಚ್ಚು ಸ್ನೇಹಿತರಲ್ಲ. ಅದಕ್ಕೆ ಕಾರಣ ಅವರ ವೃತ್ತಿ. ಆದರೂ ಸಹಿತ ಒಂದಷ್ಟು ಮಂದಿ ಅವರ ಸ್ನೇಹ ಉಳಿಸಿಕೊಂಡಿರುತ್ತಾರೆ ಪರಿಣಿತಿ-ಅಲಿಯ, ಕರೀನ -ಸೋನಂ ಹೀಗೆ ಹಲವರು. ಇವರೆಲ್ಲ ಎಷ್ಟೇ ಒಳ್ಳೆಯ ಸ್ನೇಹಿತೆಯರಾಗಿದ್ದರು ವೃತ್ತಿ ವಿಷಯದಲ್ಲಿ ಒಬ್ಬರ ಬಗ್ಗೆ ಒಬ್ಬರಿಗೆ ಅಸೂಯೆ, ಅಸಹನೆ ಇದ್ದೆ ಇದೆ. ಅಂತಹ ಒಂದು ಬೆಳಕಿಗೆ ಬಂದಿದೆ. ಬಾಲಿವುಡ್ ಮಾತ್ರವಲ್ಲ ಟಾಲಿವುಡ್, ಕಾಲಿವುಡ್ ನಲ್ಲಿ ಸಹಿತ ಹೆಚ್ಚು ಜನಪ್ರಿಯತೆ ಪಡೆದ ನಟಿ ಶ್ರುತಿ ಹಾಸನ್. ಆಕೆಯು ಇತ್ತೀಚಿಗೆ ಫೈಂಡಿಂಗ್ ಫ್ಯಾನಿ ಚಿತ್ರದ ಪ್ರೀಮಿಯರ್ ಶೋನಲ್ಲಿ ಆಡಿದ ಮಾತುಗಳು ಆಕೆಯ ಬಗ್ಗೆ ಯೋಚಿಸುವಂತೆ ಮಾಡಿದೆ. ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಿನಿ ಗಣ್ಯರೆಲ್ಲರು ದೀಪಿಕ ಪಡುಕೋಣೆಯ ಅಂದ ಚಂದ ಹಾಗೂ ಅಭಿನಯ ಹೊಗಳಿದರೆ ಶ್ರುತಿ ಹಾಸನ್ ಅರ್ಜುನ್ ಕಪೂರ್ ನ್ನು ಸಿಕ್ಕಾಪಟ್ಟೆ ಹೊಗಳಿದ್ದಾಳೆ. 
 
ಅಲ್ಲದೆ ಅರ್ಜುನ್ ನೀನೇನು ಅನ್ನೋದನ್ನು ಈ ಚಿತ್ರದ ಮೂಲಕ ತೋರಿಸಿದ್ದಿಯ. ಚಿತ್ರರಂಗದಿಂದ ಹೊರಗೆ ಬಂದ ಬಳಿಕವು ಸಹಿತ ನಿನ್ನ ಬಗ್ಗೆ ಆಲೋಚಿಸುತ್ತ ಸಾಗ ಬೇಕು ಅಷ್ಟೊಂದು ಚಂದ ನಟಿಸಿದ್ದೀಯ. ಡಿಂಪಲ್ ಕಪಾಡಿಯ ಮೇಡಂ ಸಹ ತುಂಬಾ ಚೆನ್ನಾಗಿ ನಟಿಸಿದ್ದಾರೆ ಎಂದು ಬಾಯಿಗೆ ಬಂದಷ್ಟು ಹೊಗಳಿದ್ದಾಳೆ. ಈ ಚೆಲುವೆಯ ಹೊಗಳಿಕೆಯನ್ನು ಕಂಡು ಬೇರೆಯವರಿಗೆ ಸಕತ್ ಆಶ್ಚರ್ಯ ಆಗಿದೆ ಯಾಕೆಂದ್ರೆ ಈ ಸಿನಿಮಾದಲ್ಲಿ ದೀಪಿ ಅಭಿನಯ ಸಕತ್ತಾಗಿದೆ ಎನ್ನುವ ಮಾತುಗಳು ಕೇಳಿ ಬಂದಿದೆ,ಅಷ್ಟೇ ಅಲ್ಲದೆ ಇದರಲ್ಲಿ ನಸುರುದ್ದೀನ್ ಶಾ  ಮತ್ತು ಪಂಕಜ್ ಕಪೂರ್ ರಂತಹ ಅನುಭವಿ ನಟರನ್ನು ಬಿಟ್ಟು ಈ ಬಾಲಕನ ಮೇಲ್ಯಾಕೆ ಈ ಬಾಲಕಿ ಗಮನ ಎಂದೆಲ್ಲ ಕಥೆ ಗಳು ಹುಟ್ಟಿವೆ.. ಏನ್ ಶ್ರುತಿ ನಿನ್ನ ಸಂಗತಿ ??

ವೆಬ್ದುನಿಯಾವನ್ನು ಓದಿ