ದಕ್ಷಿಣ ಭಾರತ ಸಿನಿಮಾಗಳಲ್ಲಿ ನಟಿಸಲು ಅಭಿಷೇಕ್‌ಗೆ ಇಷ್ಟವಂತೆ

ಬುಧವಾರ, 17 ಸೆಪ್ಟಂಬರ್ 2014 (10:25 IST)
ಬಾಲಿವುಡ್ ಹೀರೋಗಳು ಈಗ ತಮ್ಮ ಕೆಲಸವನ್ನು ಆರಾಮ  ಮಾಡಿಕೊಳ್ಳುತ್ತಿದ್ದಾರೆ. ಅಂದರೆ ಈಗ ದಕ್ಷಿಣ  ಭಾರತದಲ್ಲಿ ಹಿಟ್ ಆದಂತಹ ಸಿನಿಮಾಗಳ ಕಡೆಗೆ  ತಮ್ಮ ಗಮನ ಕೊಡಲು ಆರಂಭ ಆಗಿದ್ದಾರೆ. ಅದಕ್ಕೆ ಪೂರಕವಾಗಿ ರೀಮೇಕಾದ ಚಿತ್ರಗಳು ಈಗ ಸಕತ್  ಹಿಟ್  ಕೊಡ್ತಾ ಇವೆ. ಆದರೆ ಈಗ ಹೇಳ ಹೊರಟಿರುವ ಸಂಗತಿ ಸ್ವಲ್ಪ ಭಿನ್ನ. ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಅವರು ಅನೇಕ ಭಾಷೆಗಳಲ್ಲಿ ಮತ್ತು ಟೀವಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದು ಮತ್ತು ಜನಪ್ರಿಯತೆ ಗಳಿಸಿದ್ದು ಎಲ್ಲರಿಗು ಗೊತ್ತೇ ಇದೆ, ಅದೇರೀತಿ ಅಭಿಷೇಕ್ ಬಚ್ಚನ್‌ಗು ಸಹಿತ ದಕ್ಷಿಣದ ಭಾಷೆಗಳಲ್ಲಿ ನಟಿಸುವ ಆಸೆ ಇದೆಯಂತೆ. ಅದರಲ್ಲೂ ತಮಿಳು ಭಾಷೆಯಲ್ಲಿ ನಟಿಸುವ ಆಸೆ ಸಿಕ್ಕಾಪಟ್ಟೆ. ಚೆನ್ನೈ ನನಗೆ ಅತ್ಯಂತ ಇಷ್ಟ. ರಜನಿಕಾಂತ್, ಕಮಲ್ ಹಾಸನ್ ನನ್ನ ಅತಿ ಪ್ರಿಯರಾದ ನಟರು ಎಂದು ಹೇಳುವುದರ ಮೂಲಕ ತಮ್ಮ ತಮಿಳು ಸೀಮೆಯ ಮೇಲಣ ಅಭಿಮಾನವನ್ನು ವ್ಯಕ್ತ ಪಡಿಸಿದ್ದಾರೆ ಅಭಿಷೇಕ್.
 
 ಆತನ ಪತ್ನಿ ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ ಮಣಿರತ್ನಂ ಅವರ ನಿರ್ದೇಶನದ ಜೀನ್ಸ್ ಚಿತ್ರದ ನಟನೆಯ ನಂತರ ಬಾಲಿವುಡ್ ಗೆ ಬಂದು ಅಲ್ಲಿ ಸೂಪರ್ ಸ್ಟಾರಿಣಿಯಾಗಿದ್ದು. ಮಣಿರತ್ನಂ ಚಿತ್ರಗಳು ಭಿನ್ನತೆ ಮತ್ತು ವಿಶೇಷತೆ ಪಡೆದಿರುತ್ತದೆ, ಅಂತೂ ಅಭಿಷೇಕ್ ಬಚ್ಚನ್ ತಮ್ಮ ಭವಿಷ್ಯ  ಮತ್ತಷ್ಟು ಉಜ್ವಲ ಮಾಡಿಕೊಳ್ಳಲು ಚೆನ್ನೈ ಕಡೆ ಕಣ್ ಹಾಕಿರುವುದು ಒಳ್ಳೆಯ ಬೆಳವಣಿಗೆ!

ವೆಬ್ದುನಿಯಾವನ್ನು ಓದಿ