ಸಂಜಯ್ ದತ್ ಬಿಗ್ ಬಾಸ್ ಮನೆಯಲ್ಲಿ ಬಂಧಿಯಾದರೆ ಒಳ್ಳೆಯದು !

ಶುಕ್ರವಾರ, 19 ಸೆಪ್ಟಂಬರ್ 2014 (10:40 IST)
ಯರವಾಡ ಜೈಲ್ ಗಿಂತ ಬಿಗ್ ಬಾಸ್ ಹೌಸ್ ನಲ್ಲಿ ಸಂಜಯ್ ದತ್ ಅವರನ್ನು ಬಂಧಿಸಿದರೆ ಒಳ್ಳೆಯದು ಎನ್ನುವ ಭಾವ ಹೊಂದಿದ್ದಾರೆ ಸಲ್ಮಾನ್ ಖಾನ್.ಈ ತಿಂಗಳು 21 ರಂದು ಬಿಗ್ ಬಾಸ್ 8  ಆರಂಭವಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಸಲ್ಮಾನ್ ಖಾನ್ ಹೋಸ್ಟ್ ಮಾಡುತ್ತಿದ್ದಾರೆ. ಇದಕ್ಕೆಂದು ಅವರು ಅಪಾರ ಮೊತ್ತದ ಸಂಭಾವನೆ ಪಡೆದಿದ್ದಾರೆ. ಈ ಕಾರ್ಯಕ್ರಮದಲ್ಲಿ ಅನೇಕ ಸೆಲೆಬ್ರಿಟಿಗಳು ಸ್ಪರ್ಧಿಗಳಾಗಿರುತ್ತಾರೆ. ಈ ಬಾರಿ ಯಾರ‌್ಯಾರು ಮನೆಗೆ ಬರಬಹುದು ಎನ್ನುವ ಕುತೂಹಲ ಇದೆ ಜನರಲ್ಲಿ.  
 
ಯರವಾಡ ಜೈಲ್ ನಲ್ಲಿ ಇರುವ ಸಂಜಯ್ ದತ್ ಅವರನ್ನು ಬಿಗ್ ಬಾಸ್ ಮನೆಯಲ್ಲಿಡುವುದು ಎಲ್ಲ ರೀತಿಯಿಂದಲೂ ಉತ್ತಮ ಎನ್ನುವ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ ಸಲ್ಮಾನ್ ಖಾನ್. ಯಾರ ಬದುಕನ್ನು ತೆರೆಯ ಮೇಲೆ ನೋಡುವ ಆಸೆ ಇದೆ ಎನ್ನುವ ಪ್ರಶ್ನೆಗೆ ಉತ್ತರಿಸುತ್ತ ಈ ಸಂಗತಿಯನ್ನು ಮಾಧ್ಯಮಗಳ ಮುಂದೆ ಹೇಳಿದ್ದಾರೆ. 1993  ರ ಮುಂಬೈ ಬ್ಲಾಸ್ಟ್ ಅಪರಾಧಿಯಾಗಿ ಈಗ ಜೈಲ್ ಸೇರಿದ್ದಾರೆ ಸಂಜಯ್. 

ವೆಬ್ದುನಿಯಾವನ್ನು ಓದಿ