ಅಮಿತಾಬ್ ಬಚ್ಚನ್ ಜೊತೆ ನಟಿಸುವ ಕನಸು ನನ್ನದು.. ಅದು ಈಗ ನನಸಾಗುತ್ತಿದೆ..

ಶನಿವಾರ, 20 ಸೆಪ್ಟಂಬರ್ 2014 (10:36 IST)
ಅಮಿತಾಬ್ ಬಚ್ಚನ್ ಅವರಿಗೆ 71  ವರ್ಷ ವಯಸ್ಸಾದರೂ ಸಹಿತ ಅವರ ಬಗ್ಗೆ ಆಕರ್ಷಣೆ ಕಡಿಮೆ ಆಗಿಲ್ಲ ಅನೇಕರಿಗೆ ಅದಕ್ಕೆ ಈಗ ಇರುವ ಹೊಸ ಉದಾಹರಣೆ ಸಮೀರಾ ಮಹಮದ್ ಅಲಿ. ಈ ವಿದೇಶಿ ನಟಿ ಕನಸು ಅಮಿತಾಬ್ ಬಚ್ಚನ್ ಅವರ ಜೊತೆ ನಟಿಸುವುದಾಗಿದೆ. ಈಕೆ ಆ ಹಿರಿಯ ಯಂಗ್ ಹೀರೋ ಜೊತೆ ನಟಿಸುವ ಕನಸು ಕಂಡಿದ್ದಳಂತೆ. ಅದೀಗ ಬಿ ಪಾಜಿಟಿವ್ ಚಿತ್ರದ ಮೂಲಕ ನನಸಾಗುತ್ತಿದೆ. ಮುಖ್ಯವಾಗಿ 29  ವರ್ಷದ ಸಮೀರ ದುಬೈ ನಲ್ಲಿ ಇದ್ದಷ್ಟು ಕಾಲ ಅಮಿತಾಬ್ ಅವರ ಸಿನಿಮಾಗಳನ್ನು ವೀಕ್ಷಿಸಿ ಬೆಳೆದಳಂತೆ. ಅಮಿತಾಬ್ ನನ್ನ ಫೇವರೆಟ್.
 
ಪ್ರಸ್ತುತ ಈಗ ಈಕೆ ಗೋವಾದಲ್ಲಿ ಶೂಟಿಂಗ್ ನಲ್ಲಿ ಪಾಲ್ಗೊಳ್ಳುತ್ತಿದ್ದಾಳೆ. ಬಿ ಪಾಜಿಟಿವ್ ಚಿತ್ರದ ಮೂಲಕ ಈಕೆಯ ಕನಸು ನನಸಾಗುತ್ತಿದೆ. ಈ ಚಿತ್ರವನ್ನು ವೆಂಕಟೇಶ್ ಕುಮಾರ್ ನಿರ್ದೇಶಿಸುತ್ತಿದ್ದಾರೆ. ಕಡಿಮೆ ಬಜೆಟ್ ನಲ್ಲಿ ತಯಾರಾಗುತ್ತಿರುವ ಈ ಚಿತ್ರ ಕನ್ನಡ , ಹಿಂದಿ ಮತ್ತು ಆಂಗ್ಲ ಭಾಷೆಯಲ್ಲಿ ಏಕಕಾಲದಲ್ಲಿ ನಿರ್ಮಾಣವಾಗುತ್ತಿದೆ.  ಚಿತ್ರದಲ್ಲಿ ಅಮಿತಾಬ್ , ಸಮೀರ ಅಲ್ಲದೆ ರಾಜ್ ಪುರೋಹಿತ್, ನಿವೇದಿತಾ  ಬಿಶ್ವಾಸ್ ಮುಂತಾದವರು ಅಭಿನಯಿಸುತ್ತಿದ್ದಾರೆ. ಇಷ್ಟು ಕಡಿಮೆ ಬಜೆಟ್ಟಿನ ಚಿತ್ರದಲ್ಲಿ ನಟಿಸಲು ಕಿರಿಕಿರಿ ಎಂದು  ಅನ್ನಿಸಲ್ವ ಎನ್ನುವ ಪ್ರಶ್ನೆಗೆ ಬಜೆಟ್ ಮುಖ್ಯವಲ್ಲ ಕಂಟೆಂಟ್ ಮುಖ್ಯ ಎಂದು ಹೇಳಿದ್ದಾರೆ ಬಿಗ್ ಬಿ. ಅಲ್ಲದೆ ಲಂಡನ್ ನಲ್ಲಿ ಕಡಿಮೆ ಬಜೆಟ್ಟಿನ ಚಿತ್ರಗಳು ಹೆಚ್ಚಿನ ಹಣ ಗಳಿಕೆ ಮಾಡಿದ್ದನ್ನು ಈ ಸಮಯದಲ್ಲಿ ಹೇಳಿದ್ದಾರೆ ಅಮಿತಾಬ್ ಬಚ್ಚನ್.  
 
ಮೂರು ಭಾಷೆಗಳಲ್ಲಿ ತಯಾರಾಗುತ್ತಿರುವ ಈ ಚಿತ್ರವೂ ತನ್ನನ್ನು ತುಂಬಾ ಆಕರ್ಷಿಸಿದೆ ಎಂದಿರುವ ಈ ಚೆಲುವೆ ಮಾತ್ರ ಚಿತ್ರದಲ್ಲಿ ತನ್ನ ಪಾತ್ರದ ಬಗ್ಗೆ ಹೇಳಿಲ್ಲ. ಈ ಚಿತ್ರದ ಸ್ಟೋರಿಲೈನ್ ತನಗೆ ಸಕತ್ ಆಸಕ್ತಿ ಹುಟ್ಟಿಸಿತು. ಆದ ಕಾರಣ ಚಿತ್ರದಲ್ಲಿ ನಟಿಸಲು ಆದ್ಯತೆ ನೀಡಿದೆ ಎಂದು ಹೇಳಿದ್ದಾಳೆ ಈ ಚೆಲುವೆ. 
 

ವೆಬ್ದುನಿಯಾವನ್ನು ಓದಿ