ಐಶ್ವರ್ಯ ರೈ ಬಚ್ಚನ್- ಶಾರುಖ್ ನಟನೆಯ ಚಿತ್ರ ನಿರ್ದೇಶನದತ್ತ ರೋಹಿತ್ ಶೆಟ್ಟಿ

ಮಂಗಳವಾರ, 23 ಸೆಪ್ಟಂಬರ್ 2014 (10:17 IST)
ಬಾಲಿವುಡ್ ಬಾದ್ಷಾ ಶಾರುಖ್ ಖಾನ್ ಮತ್ತು ಅಮಿತಾಬ್ ಬಚ್ಚನ್ ಅವರ ಕಾಂಬಿನೇಶನ್  ಸಕತ್ ಸೂಪರ್ ಹಿಟ್ ಆಗಿದೆ ಎಂದೇ ಹೇಳ ಬಹುದಾಗಿದೆ. ಈಗ ಮತ್ತೆ ಈ ಜೋಡಿ ಹ್ಯಾಪಿ ನ್ಯೂ ಇಯರ್ ನಲ್ಲೂ ಸಹಿತ ನಟಿಸಿದ್ದಾರೆ. ಈ ಚಿತ್ರವನ್ನು ಫರ ಖಾನ್ ನಿರ್ದೇಶಿಸಿದ್ದಾರೆ. ಸಧ್ಯದಲ್ಲೇ ಈ ಚಿತ್ರದ ಬಿಡುಗಡೆ ಆಗಲು  ಎಲ್ಲ ಸಿದ್ಧತೆಗಳು ನಡೆದಿವೆ, ಇದರ ನಡುವೆ ಶಾರುಖ್ ಖಾನ್ ಅವರು ಈಗ ರೋಹಿತ್ ಶೆಟ್ಟಿ ಅವರ ನಿರ್ದೇಶನದ ಚಿತ್ರದಲ್ಲಿ ನಟಿಸಲು ಸಿದ್ಧತೆ  ನಡೆಸಿದ್ದಾರೆ. 
 
ಎಸಾರ್ಕೆ ಜೊತೆಯಲ್ಲಿ ನಟಿಸಲು ಅಪರೂಪದ ಅತಿಲೋಕ ಸುಂದರಿ ಐಶ್ವರ್ಯ ರೈ ರನ್ನು ಸಹಿತ ಕೇಳಿದ್ದಾರಂತೆ. ಸುಮಾರು ಹನ್ನೆರಡು ವರ್ಷಗಳ ಬಳಿಕ  ಶಾರುಖ್ ಮತ್ತು ಐಶ್ ರನ್ನು ಒಟ್ಟಿಗೆ ಒಂದೇ ಕ್ಯಾಮರದ ಮುಂದೆ ನಟಿಸುವ ಸಿದ್ಧತೆ ಮಾಡಿದ್ದಾರೆ ರೋಹಿತ್ ಶೆಟ್ಟಿ. ಬಾಲಿವುಡ್ ನ ಸ್ಟಾರ್ ನಿರ್ದೇಶಕರಾಗಿರುವ ರೋಹಿತ್ ಈಗ ತಮ್ಮ ಗಮನ  ಈ ಜೋಡಿ ಬಗ್ಗೆ ಇಟ್ಟಿದ್ದಾರೆ.ಈ ಚಿತ್ರದ ಹೆಸರು ಹಮ್. ಅಮಿತಾಬ್ ಬಚ್ಚನ್  ನಟನೆಯ ಹಮ್ ಚಿತ್ರದ ರೀಮೇಡ್ ಆಗ್ತಾ ಇದೆ.  ಬಿಗ್ ಬಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಶಾರುಖ್ ಖಾನ್. 

ವೆಬ್ದುನಿಯಾವನ್ನು ಓದಿ