ನಾನು ಸಿಂಗಲ್ ಅಂತ ಹೇಳಿದೋರು ಯಾರು.. ನಾನು ಸಿಂಗಲ್ ಆಗಿದ್ದೇನೆ ಅಂತ ನೀವು ಹೇಗೆ ತಿಳಿದಿರಿ?

ಬುಧವಾರ, 24 ಸೆಪ್ಟಂಬರ್ 2014 (10:52 IST)
ಮಾಜಿ ವಿಶ್ವ ಸುಂದರಿ ಪ್ರಿಯಾಂಕ ಚೋಪ್ರ. ಆಕೆಯ ಚಿತ್ರಗಳ ಜೊತೆ ತನ್ನ ರೂಪದಿಂದಲೂ ಸಹಿತ ಎಲ್ಲರಿಗೂ ಇಷ್ಟ ಆಗುವಂತೆ ಇದ್ದಾರೆ. ಪ್ರಿಯಾಂಕ ಚೋಪ್ರ  ಕೇವಲ ಒಂದೇ ತೆರನಾದ ಪಾತ್ರಗಳಿಗೆ ಆದ್ಯತೆ ನೀಡಲ್ಲ. ಇದರಿಂದ ಬಾಲಿವುಡ್ ನಲ್ಲಿ ಸಹಿತ ಭಿನ್ನವಾಗಿ ತನ್ನನ್ನು ಗುರುತಿಸಿಕೊಂಡಿದ್ದಾರೆ. 
 
ಪ್ರಿಯಾಂಕ ಚೋಪ್ರ ಬಾಲಿವುಡ್ ನಲ್ಲಿ ಈಗ ಲೀಡ್ ನಟಿ . ಆಕೆಯ ರೀಲ್ ಬದುಕಲ್ಲಿ ಸದಾ ಹೀರೋಗಳ ಜೊತೆ ಕಾಣಿಸಿಕೊಂಡರೂ ಸಹ ರಿಯಲ್ ಬದುಕಲ್ಲಿ ಸಿಂಗಲ್ ಎನ್ನುವ ಹಣೆಪಟ್ಟಿ ಹೊಂದಿದ್ದಾರೆ. ಆಕೆ ಎಂದಿಗೂ ತನ್ನ ಸಂಬಂಧ  ಹಾಗೂ ಬಾಂಧವ್ಯಗಳ ಬಗ್ಗೆ ಹೇಳಲು ಇಷ್ಟ ಪಡುವುದಿಲ್ಲ. ಅದೇರೀತಿ ಆಗಿದೆ ಈಗ ಸಹಿತ . ಡಾನ್ 2  ರ ಸಮಯದಲ್ಲಿ ಶಾರುಖ್ ಖಾನ್ ಅವರ ಜೊತೆ  ಸ್ನೇಹ ಜಾಸ್ತಿ ದೂರ ತಲುಪಿದೆ ಎಂದು ಮಾಧ್ಯಮಗಳು ಬರೆದಾಗ ಆ ವಿಷಯಕ್ಕೆ ಸಂಬಂಧಪಟ್ಟಂತೆ ಆಕೆ ಯಾವುದೇ ರೀತಿಯಲ್ಲೂ ಪ್ರತಿಕ್ರಿಯೆ ತೋರಿಸಿರಲಿಲ್ಲ. ಅಂದರೆ ಇಂತಹ ಸಂಗತಿಗಳ ಬಗ್ಗೆ ಆಕೆ ಎಂದಿಗೂ ವರ್ಣರಂಜಿತವಾಗಿ ಹೇಳಲ್ಲ. ಇಷ್ಟಾದರೂ ಆಕೆ ಇತ್ತೀಚೆಗೆ ನಾನು ಸಿಂಗಲ್ ಅಲ್ಲ.. ಎಲ್ಲರು ನೀನು ಸಿಂಗಲ್  ಅಲ್ವ ಸೊ ಮದುವೆ ಆಗು ಅಂತಾರೆ ಆದರೆ ನಾನು ಸಿಂಗಲ್ ಆಗಿದ್ದೇನೆ   ಅಂತ ನೀವು ಹೇಗೆ ತಿಳಿದಿರಿ ಎಂದು ಪ್ರಶ್ನೆ ಮಾಡಿದ್ದಾರೆ. 
 
ಮೇರಿ ಕೋಮ್ ಚಿತ್ರದ ಯಶಸ್ಸಿನಿಂದ ಖುಷಿಯಾಗಿರುವ ಪಿಗ್ಗಿ  ಮಾತ್ರ ತನ್ನ ಅನೇಕ ವೈಯಕ್ತಿಕ ಸಂಗತಿಗಳ ಬಗ್ಗೆ ಎಂದಿಗೂ ಹೊರ ಹಾಕಲು ಇಷ್ಟ ಪಡುವುದಿಲ್ಲ.. ಆ ಗುಪ್ತತೆ ಆಕೆಯ ಐಡೆಂಟಿಟಿ. 

ವೆಬ್ದುನಿಯಾವನ್ನು ಓದಿ