ಮಣಿರತ್ನಂ ಸಿನಿಮಾದಲ್ಲಿ ಎ ಆರ್ ರೆಹಮಾನ್ ಮಗನ ಗಾನಸುಧೆ

ಮಂಗಳವಾರ, 30 ಸೆಪ್ಟಂಬರ್ 2014 (10:45 IST)
ಸಾಮಾನ್ಯವಾಗಿ ತಾಯಿ ತಂದೆ ನಡೆದು ಬಂದ ದಾರಿ ಅಥವ ಅವರ ವೃತ್ತಿಯನ್ನು ತಮ್ಮ ವೃತ್ತಿಯಾಗಿ ಮಾಡಿಕೊಳ್ಳುವ ಮಕ್ಕಳು ಹೇರಳವಾಗಿದ್ದಾರೆ . ಆಸ್ಕರ್ ವಿಜೇತ ಸಂಗೀತ ನಿರ್ದೇಶಕ ಎ . ಆರ್ . ರೆಹಮಾನ್ ವಿಷಯದಲ್ಲೂ ಸಹಿತ ಇದೆ ರೀತಿ ಆಗಿದೆ ಎಂದೇ ಹೇಳ ಬಹುದಾಗಿದೆ. ಸಾಮಾನ್ಯವಾಗಿ ರೆಹಮಾನ್ ಮುಂದೆ ಒಂದು ಹಾಡಾದ್ರೂ ಹಾಡ ಬೇಕು ಎನ್ನುವ ಕನಸು ಹೊಂದಿದ್ದಾರೆ ಬಹಳಷ್ಟು ಗಾಯಕರು. ಈವರೆಗೂ ಅವರ ನಿರ್ದೇಶನದಲ್ಲಿ ಹಾಡಿದ ಅನೇಕರು ಸಿಕ್ಕಾಪಟ್ಟೆ ಪಾಪ್ಯುಲರ್ ಆಗಿದ್ದಾರೆ, ಆ ಸಾಲಿಗೆ ರೆಹಮಾನ್ ಮಗ ಅಮೀನ್ ಸಹಿತ ಸೇರ್ಪಡೆ ಆಗುತ್ತಿದ್ದಾನೆ. 
 
ತನ್ನ ತಂದೆಯ ಸಂಗೀತ ನಿರ್ದೇಶನದಲ್ಲಿ ಆತ ಹಾಡುತ್ತಿದ್ದಾನೆ. ಈ ಸಂಗತಿಯನ್ನು ರೆಹಮಾನ್ ಖುದ್ದು ತಿಳಿಸಿದ್ದಾರೆ. ಸಾಕಷ್ಟು ಮಂದಿ ನಿರ್ದೇಶಕರು ಅಮೀನ್ ಚಿತ್ರದಲ್ಲಿ ನಟಿಸಲು ಆಹ್ವಾನ ನೀಡಿದ್ದರು ಆದರೆ ಅವನಿಗೆ ಶಿಕ್ಷಣಕ್ಕೆ ಮೊದಲು ಆದ್ಯತೆ ನೀಡ ಬೇಕು ಅಲ್ಲವೇ. ಆದರೆ  ಹಾಡು ಹಾಡುತ್ತಿದ್ದಾನೆ. ಮಣಿರತ್ನಂ ಅವರ ಮುಂದಿನ ಚಿತ್ರದಲ್ಲಿ ಆತನಿಗೆ ಹಾಡುವ ಅವಕಾಶ ಸಿಕ್ಕಿದೆ ಎಂದು ಹೇಳಿದ್ದಾರೆ. ಕಪಲ್ಸ್ ರೀಟ್ರೀಟ್  ಎನ್ನುವ ಆಂಗ್ಲ ಸಿನಿಮಾದಲ್ಲಿ ಅಮೀನ್ ನಾ ನಾ ಎನ್ನುವ ಹಾಡನ್ನು ಈಗಾಗಲೇ ಹಾಡಿದ್ದಾನೆ.  

ವೆಬ್ದುನಿಯಾವನ್ನು ಓದಿ