ತನ್ನ ಮುಖ ನೋಡಿ ತಾನೇ ಭಯಪಟ್ಟ ಶ್ರುತಿಹಾಸನ್.. ವ್ಯಾಟ್ ಹ್ಯಾಪನ್ಡ್ ಶ್ರುತಿ ??

ಮಂಗಳವಾರ, 30 ಸೆಪ್ಟಂಬರ್ 2014 (10:47 IST)
ಸ್ವಿಜರ್ ಲ್ಯಾಂಡ್ ಜ್ಯೂರಿಚ್ ವಿಮಾನ ನಿಲ್ದಾಣದಲ್ಲಿ ಸಪೂರ ಸುಂದರಿ ಶ್ರುತಿ ಹಾಸನ್ ಬಯಸದಂತಹ ಸಂಗತಿ ನಡೆದಿದೆ. ಇದರಿಂದ ಆಕೆಗೆ ತನ್ನ ಬಗ್ಗೆ ತಾನೇ ಆಶ್ಚರ್ಯ ಹೊಂದುವ ಪರಿಸ್ಥಿತಿ ಉಂಟಾಗಿದೆ ಎಂದೇ ಹೇಳ ಬಹುದಾಗಿದೆ. ಸಾಮಾನ್ಯವಾಗಿ ಹೀರೋಯಿನ್ ಗಳು ತಮ್ಮ  ಸೌಂದರ್ಯದ ಬಗ್ಗೆ ಸಕತ್ ಅಭಿಮಾನ ಹೊಂದಿರುತ್ತಾರೆ. ಅದು ತಪ್ಪಲ್ಲ. ಆದರೆ ಅಂತಹ ಮುದ್ದಾದ ಹುಡುಗಿಯರನ್ನು ಕಂಡು ಈಕೆ ಮುಖ ಥೇಟ್ ದೆವ್ವದ ರೀತಿ ಇದೆ ಅಂದ್ರೆ ಏನಾಗ ಬೇಡ ಮನಸ್ಥಿತಿ ...? ಹಾಗೆ ಆಗಿದೆ ಶ್ರುತಿ ಹಾಸನ್ ವಿಷಯದಲ್ಲೂ ಸಹಿತ. ಸ್ವಿಜರ್ ಲ್ಯಾಂಡ್ ನಲ್ಲಿ ಆಕೆಯನ್ನು ಕಂಡ ಅಲ್ಲಿನ ನಿವಾಸಿ ಈಕೆಯನ್ನು ಜಾಂಬಿ ಲಾ  ರೀತಿ ಇದ್ದಾಳೆ ಎಂದು ಹೇಳಿದಂತೆ. ಇದನ್ನು ಕೇಳಿದ ಆಕೆಗೆ ಶಾಕ್ ಆಗಿದೆ.  
 
ಸಾಮಾನ್ಯವಾಗಿ ಯಾರಾದರೂ ವಿಚಿತ್ರವಾಗಿ ಕಂಡರೆ ಸ್ವಿಜರ್ ಲ್ಯಾಂಡ್ ಜನರು ಜಾಂಬಿ ಲಾ  ಎಂದು ಕರೆಯುತ್ತಾರೆ. ಆತ ತನ್ನ ಫ್ರೆಂಡ್ಸ್‌ಗೆ ಹೇಳಿದ ಮಾತು ಶ್ರುತಿ ಕಿವಿಗೆ ಬಿದ್ದಿದೆ.. ಇಂಡೋನೇಶಿಯಾ ದೇಶದ  ಸುಮಾತ್ರದಲ್ಲಿ ವಾಸಿಸುವ ಈ ಬುಡಕಟ್ಟು ಜನಾಂಗ ವಿಚಿತ್ರ ಹಾಗೂ ವಿಶೇಷವಾದ ರೀತಿಯಲ್ಲಿ ಕಂಡು ಬರುತ್ತಾರೆ . ಅವರಂತೆ ತಾನು ಇದ್ದೀನಾ   ಎಂದು ಆಕೆ ಹೋಟೆಲ್ ರೂಂ ಗೆ ಹೋಗಿ ತನ್ನ ಸುಂದರ ವದನ ಕಂಡಾಗ ನಿದ್ದೆಗೆಟ್ಟು   ನಿರಂತರವಾಗಿ ಕೆಲಸ ಮಾಡಿದ ಪರಿಣಾಮ ಭಾಗಶಃ ಅದೇರೀತಿ ಆಗಿತ್ತಂತೆ. ತನ್ನ ಮುಖ ಕಂಡು ತನಗೆ ಭಯ ಆಯ್ತು ಎನ್ನುವ ಸತ್ಯವನ್ನು ಸಂದರ್ಶನ ಒಂದರಲ್ಲಿ ಬಿಚ್ಚಿಟ್ಟಿದ್ದಾಳೆ.  ಭಾರತದಲ್ಲಿ ಯುವಕರ ಗಮನ ಸೆಳೆದ ಹಾಟಿನಿ ಆಗಿರುವ ಶ್ರುತಿ ದೂರದ ಸ್ವಿಜರ್ ಲ್ಯಾಂಡ್ ನಲ್ಲಿ ಮಾತ್ರ ಅಲ್ಲಿನ ಹೈಕಳುಗಳಿಗೆ ಜಾಂಬಿ ಲಾ ರೀತಿ ಕಂಡದ್ದು ಮಾತ್ರ ಪಾಪ!! 

ವೆಬ್ದುನಿಯಾವನ್ನು ಓದಿ