ಹೈದರ್ ನನ್ನ ಕೆರಿಯರ್‌ಗೆ ಉತ್ತಮ ಮಾರ್ಗದರ್ಶಿ.. ವಿಶಾಲ್ ಅತ್ಯುತ್ತಮ ನಿರ್ದೇಶಕ

ಮಂಗಳವಾರ, 30 ಸೆಪ್ಟಂಬರ್ 2014 (10:49 IST)
ಹೈದರ್ ಚಿತ್ರದಲ್ಲಿನ ಪಾತ್ರ ತನ್ನ ಕೆರಿಯರ್‌ನ್ನು ಉಜ್ವಲ ಮಾಡುತ್ತದೆ ಎನ್ನುವ ನಂಬಿಕೆಯನ್ನು ಕಪೂರ್ ಕನ್ಯೆ ಶ್ರದ್ಧಾ ಕಪೂರ್ ಹೇಳಿದ್ದಾಳೆ. ಆಶಿಕಿ 2  ಈ ಚೆಲುವೆ ಆ ಬಳಿಕ ಏಕ್ ವಿಲನ್ ಚಿತ್ರದಲ್ಲೂ ಸಹಿತ ಅಭಿನಯಿಸಿ ಎಲ್ಲರ ಮನ ಗೆದ್ದಿದ್ದಾರೆ . ಈಗ ಶಾಹಿದ್ ಕಪೂರ್ ಅವರ ಜೊತೆ ಹೈದರ್ ಚಿತ್ರದಲ್ಲಿ  ನಟಿಸುತ್ತಿರುವ ಈ ಬಾಲಿಕೆಗೆ ವಿಶಾಲ್ ಭಾರದ್ವಾಜ್ ಅವರ ನಿರ್ದೇಶನ ಸಿಕ್ಕಾಪಟ್ಟೆ ಇಂಪ್ರೆಸ್ ಮಾಡಿದೆ. ವಿಮರ್ಶಕರಿಂದ ಹೈದರ್ ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಹೈದರ್ ಸಹ ಹಿಟ್ ಲಿಸ್ಟ್ ನಲ್ಲಿ ನಿಲ್ಲುತ್ತದೆ ಎಂದು ಆಶಿಸುತ್ತೇನೆ ಎನ್ನುವ ಸದಾಶಯ ಹೊಂದಿದ್ದಾಳೆ ಈ ಚೆಲುವೆ. ನನ್ನ ಕೆರಿಯರ್ ಗೆ ಈ ಚಿತ್ರ ಉತ್ತಮ ಸೂಚಕ ಆಗುತ್ತದೆ ಎನ್ನುವ ಭಾವನೆ ಇದೆ ಎಂದು ಸಹಿತ ಆಕೆ ಹೇಳಿದ್ದಾಳೆ. ವಿಶಾಲ್ ಅನೇಕ  ಅತ್ಯುತ್ತಮ ಚಿತ್ರಗಳನ್ನು ನಿರ್ಮಿಸಿದ್ದಾರೆ. 
 
ಅವರು ನಿರ್ದೇಶಿಸಿದ ಚಿತ್ರಗಳು ಉತ್ತಮ ಫಲಿತಾಂಶ ನೀಡಿದೆ. ಅದೇ ಸಾಲಿಗೆ ಹೈದರ್ ಸಹ ಸೇರ್ಪಡೆ ಆಗುತ್ತದೆ ಎನ್ನುವ ನಂಬಿಕೆ ನನಗಿದೆ ಎಂದು ಹೇಳಿದ್ದಾಳೆ ಈ ಭಾಮೆ!ಶೇಕ್ಸ್ ಪಿಯರ್ ಅವರ ಟ್ರಾಜಿಕ್ ನಾಟಕದ ಸಿನಿ ರೂಪವಾಗಿದ್ದು, ಅಕ್ಟೋಬರ್ 2  ರಂದು ಈ ಚಿತ್ರ ಬಿಡುಗಡೆ ಆಗುತ್ತಿದೆ. ತನ್ನ ಪಾತ್ರದ ಹೆಸರು ಹೈದರ್. ನನ್ನ  ಪಾತ್ರ ಅತ್ಯಂತ ಕ್ಲಿಷ್ಟಕರವಾಗಿದ್ದು ಸವಾಲಿನಿಂದ ಕೂಡಿದೆ . ಇದು ನನ್ನ  ನಟನೆಯ ಐದನೇ ಚಿತ್ರವಾಗಿದೆ ಎಂದು ಸಹ ಹೇಳಿದ್ದಾಳೆ ಶ್ರದ್ಧಾ. ಅತ್ಯಂತ ತಂಪಾದ ವಾತಾವರಣ, ಕಷ್ಟಕರವಾದ ಸನ್ನಿವೇಶಗಳನ್ನು ಕಾಶ್ಮೀರದಲ್ಲಿ ನಡೆದ ಶೂಟಿಂಗ್ ನಿಂದ ಎದುರಿಸಿದಳಂತೆ ಈ ಚೆಲುವೆ. ಇಷ್ಟೆಲ್ಲಾ ಕಷ್ಟ ಪಟ್ಟ ಈಕೆಯ ಹೈದರ್ ಜನಕ್ಕೆ ಇಷ್ಟ ಆದರೆ ಅದೇ ಕಲಾವಿದರ ಬದುಕಿನ ದೊಡ್ಡ ಸಾರ್ಥಕತೆ. 
 

ವೆಬ್ದುನಿಯಾವನ್ನು ಓದಿ