ಮತ್ತೆ ಬಣ್ಣ ಹಚ್ಚಿದ ಹೇಮಮಾಲಿನಿ.. ಸಿಮ್ಲ ಮಿರ್ಚಿ ಸಧ್ಯದಲ್ಲೇ ತಿನ್ನಲು ಸಿದ್ಧ!!

ಮಂಗಳವಾರ, 30 ಸೆಪ್ಟಂಬರ್ 2014 (10:52 IST)
ಭಾರತೀಯ ಚಿತ್ರರಂಗ ಆಳಿದ ಅಂದಕಾಲದ  ಸೂಪರ್ ಸ್ಟಾರ್ ಹೀರೋಯಿನ್ ಗಳಲ್ಲಿ ಹೇಮಮಾಲಿನಿ ಸಹ ಒಬ್ಬರು. ಡ್ರೀಮ್ ಗರ್ಲ್ ಆಗಿದ್ದಲ್ಲದೆ ಎಲ್ಲ ಹುಡುಗರ ಡ್ರೀಮ್  ಕಿತ್ತು ಕೊಂಡ ಗರ್ಲ್ ಸಹಿತ ಆದರು. ಅದಾದ ಬಳಿಕ ಧರ್ಮೇಂದ್ರ ಅವರನ್ನು ಮದುವೆ ಆಗಿ ಇಬ್ಬರು ಮಕ್ಕಳ ತಾಯಿಯಾಗಿ, ಪತ್ರಿಕೆ  ಒಂದರ ಸಂಪಾದಕಿಯಾಗಿ, ಜಾಹೀರಾತು, ರಾಜಕೀಯ ಎಂದು ಬದುಕನ್ನು ನಡೆಸುತ್ತಾ ಅಮಿತಾಬ್ ರಂತಹ ಹೀರೋಗಳ  ಜೊತೆ ನಟಿಸುತ್ತಾ ಇದ್ದ ಈ ನುಣುಪು ಕೆನ್ನೆಯ ಚೆಲುವೆ ಸ್ವಲ್ಪ ಕಾಲದಿನದ ಅಭಿನಯಿಸುವುದಕ್ಕೆ ಆದ್ಯತೆ ನೀಡದೇ ಮತ್ತೆ ರಾಜಕೀಯದತ್ತ ತಮ್ಮ ಗಮನ ನೀಡಿದ್ದರು. 
 
ಆದರೆ ಈಗ ಬಂದಿರುವ ಸುದ್ದಿ ಪ್ರಕಾರ ಈಗ ರಮೇಶ್ ಸಿಪ್ಪಿ ಅವರು ತಯಾರಿಸುತ್ತಿರುವ ಚಿತ್ರದಲ್ಲಿ ಅಭಿನಯಿಸಲು ಸಿದ್ಧ ಆಗುತ್ತಿದ್ದಾರೆ. ಈ ಚಿತ್ರದ ಹೆಸರು ಸಿಮ್ಲ ಮಿರ್ಚಿ. ಈ ಚಿತ್ರದ ಶೂಟಿಂಗ್ ಕಳೆದ ಭಾನುವಾರದಿಂದ ಆರಂಭವಾಗಿದ್ದು, ಈ ಸಂಭ್ರಮವನ್ನು ತನ್ನ ಅಭಿಮಾನಿಗಳ ಜೊತೆ ಟ್ವೀಟ್ ಮಾಡಿ  ಹಂಚಿಕೊಂಡಿದ್ದಾರೆ. ಅಂದಾಜ್, ಸೀತ ಆರ್ ಗೀತ, ಶೋಲೆ ಸೇರಿದಂತೆ ಅನೇಕ ಸೂಪರ್ ಹಿಟ್ ಚಿತ್ರಗಳನ್ನು ನೀಡಿರುವ ಹೇಮಾ ನೂಪುರ್ ಎನ್ನುವ ಧಾರಾವಾಹಿಯಲ್ಲೂ ಸಹಿತ ಪ್ರಮುಖ ಪಾತ್ರಧಾರಿಯಾಗಿದ್ದರು. ಈಗ ಮಿರ್ಚಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಹೇಮಾ. ಈ ಚಿತ್ರದಲ್ಲಿ ನಿರ್ದೇಶಕ ರಮೇಶ್ ಸಿಪ್ಪಿ ಸಹ ಅತಿಥಿ ಪಾತ್ರದಲ್ಲಿ ನಟಿಸುತ್ತಾ ಇದ್ದಾರೆ. 

ವೆಬ್ದುನಿಯಾವನ್ನು ಓದಿ