ಬ್ಯಾಂಗ್ ಬ್ಯಾಂಗ್‌ಗಾಗಿ ಸಕತ್ ಕಷ್ಟಪಟ್ಟ ಕತ್ರಿನಾ ... ಸಾಧನೆ ಅಂದ್ರೆ ಸುಮ್ಮನೇನಾ?

ಗುರುವಾರ, 2 ಅಕ್ಟೋಬರ್ 2014 (11:27 IST)
ವಿಶ್ವದ ಏಳು ಬೇರೆಬೇರೆ ಸ್ಥಳದಲ್ಲಿ ಶೂಟಿಂಗ್ ಆದಂತಹ ಬ್ಯಾಂಗ್ ಬ್ಯಾಂಗ್ ಚಿತ್ರದಲ್ಲಿ ತಾನು ನಟಿಸಲು ಸಾಕಷ್ಟು ಕಷ್ಟ ಪಟ್ಟೆ  ಎನ್ನುವ ಮಾತನ್ನು ಹೇಳಿದ್ದಾಳೆ  ಕತ್ರಿನಾ.   ಈ ಸಿನಿಮಾದಲ್ಲಿ ಆಕೆ ವಿಭಿನ್ನವಾಗಿ ಫೈಟ್ ಮಾಡಿದ್ದರ ಬಗ್ಗೆ ಹೇಳಿದ್ದೆವು. ಈ ಸಿನಿಮಾದಲ್ಲಿ ಫೈಟ್ಸ್ ತುಂಬಾ ಭಿನ್ನವಾಗಿದ್ದು, ಅಭಿಮಾನಿಗಳನ್ನು ನಿಶ್ಚಿತವಾಗಿ ಆಕರ್ಷಿಸುತ್ತದೆ ಎನ್ನುವ ಮಾತನ್ನು ಆಕೆ ಹೇಳಿದ್ದಾಳೆ. 
 
 
ವಿಶ್ವದಲ್ಲಿ ಹಲವಾರು ದೇಶಗಳಲ್ಲಿ ಶೂಟಿಂಗ್ ನಡೆಸಲು ನಿರ್ಮಾಕರು ಮಾಡಿದ ವೆಚ್ಚ ಸುಮಾರು 140  ಕೋಟಿ ರೂಪಾಯಿ ಖರ್ಚು  ಮಾಡಿದ್ದು, ಇದಕ್ಕೆಂದು ವಿಶೇಷ ತಂತ್ರಜ್ಞರು ಕಾರ್ಯ ನಿರ್ವಹಿಸಿರುವ ಬಗ್ಗೆ ಈ ಚೆಲುವೆ ಹೇಳಿದ್ದಾಳೆ. ಇದನ್ನು ಫ್ಯಾಕ್ಸ್ ಸ್ಟುಡಿಯೋ ನಿರ್ಮಿಸಿದೆ. ಈ ಚಿತ್ರ ಇಂದು ಬಿಡುಗಡೆ ಆಗುತ್ತಿದೆ.
 
ಈ ಚಿತ್ರದಲ್ಲಿ ಆಕ್ಷನ್ ಮಾತ್ರವಲ್ಲ ಪ್ರೇಮವು   ಸಹಿತ ಮಿಳಿತ ಆಗಿದೆಯಂತೆ. ಬ್ಯಾಂಗ್ ಬ್ಯಾಂಗ್ ಚಿತ್ರದಲ್ಲಿ ಅನೇಕ ಸ್ಟಂಟ್ ದೃಶ್ಯಗಓಳಲ್ಲಿ ತಾನೇ ಖುದ್ದು ನಟಿಸಿದ ಬಗ್ಗೆ ಹೇಳಿರುವ ಈ ಚೆಲುವೆಗೆ ಮಹಿಳಾ ಪ್ರಧಾನ ಚಿತ್ರದಲ್ಲಿ ನಟಿಸ ಬೇಕು ಎನ್ನುವ ಆಸೆ ಇದೆಯಂತೆ. ಯಾರಾದರು ಒಳ್ಳೆಯ ಸ್ಕ್ರಿಪ್ಟ್  ತಂದಲ್ಲಿ ಈಕೆಯ ಕಡೆಯಿಂದ ಓಕೆ ಎನ್ನುವ ಉತ್ತರ ಖಂಡಿತವಂತೆ! ತೀಸ್ ಮಾರ್ ಖಾನ್, ಧೂಮ್ 3  ವೀರ್ ಚಿತ್ರಗಳಲ್ಲಿ ನಟಿಸಿ ಅಭಿಮಾನಿಗಳಿಗೆ ಹೆಚ್ಚು ಇಷ್ಟ ಆಗುವಂತೆ ಮಾಡಿದ ಈ ಚೆಲುವೆಯ ತಾರ ಬದುಕಿನ
ಪ್ರತಿಷ್ಠೆಯಾಗಿದೆ  ಈ ಚಿತ್ರದ ಯಶಸ್ಸು. ಅದು ಇಂದು ಬಿಡುಗಡೆ ಆಗುತ್ತಿದೆ. 

ವೆಬ್ದುನಿಯಾವನ್ನು ಓದಿ