ಧನುಶ್ ನಿರ್ಮಾಣದ ಚಿತ್ರದಲ್ಲಿ ಅಮಿತಾಬ್ -ರೇಖಾ ಅಭಿನಯ

ಗುರುವಾರ, 9 ಅಕ್ಟೋಬರ್ 2014 (12:53 IST)
ರೇಖಾ ಮತ್ತು ಅಮಿತಾಬ್ ಬಚ್ಚನ್ ಅವರ ಪ್ರಣಯ ಸಾಕಷ್ಟು ಸುದ್ದಿ ಮಾಡಿತ್ತು.. ವರ್ಷಗಳೇ ಉರುಳಿದರು ಸಹಿತ ಆ ಜೋಡಿಯ ಪ್ರಣಯದ ಬಗ್ಗೆ ನೆನಪಿಸಿಕೊಳ್ಳುತ್ತಲೇ ಇರುತ್ತಾರೆ ಮಂದಿ! 1975 - 1980 ರ ಸಮಯದಲ್ಲಿ ರೇಖಾ ಮತ್ತು ಅಮಿತಾಬ್ ಬಚ್ಚನ್ ಅವರ ಪ್ರೇಮಾಯಣ ಬಾಲಿವುಡ್ ನ ಹಾಟ್ ಟಾಪಿಕ್ ಆಗಿತ್ತು. ಇನ್ನೇನು ಅಮಿತಾಬ್ ಬಚ್ಚನ್ ಜಯಾ ಬಾಧುರಿಯನ್ನು ಬಿಟ್ಟು ರೇಖಾಳನ್ನು ಮದುವೆಯಾಗಿಯೇ ಬಿಡ್ತಾರೆ ಎಂದು ಸಹಿತ ನಂಬಲಾಗಿತ್ತು.

ಆದರೆ ಆನಂತರ ನಡೆದ ಪ್ರಕರಣಗಳು ಅಮಿತಾಬ್ ಮತ್ತು ರೇಖಾ ಅವರ ಪರಿಣಯಕ್ಕೆ ಅಂತ್ಯ ಹಾಡಿತ್ತು. ಅದಾದ ನಂತರ ಒಟ್ಟಿಗೆ ಅವರಿಬ್ಬರೂ ಒಟ್ಟಿಗೆ ನಟಿಸಿರಲೇ ಇಲ್ಲ. ಆದರೆ ಈ ಪ್ರೇಮಿಗಳನ್ನು ತೆರೆಯ ಮೇಲೆ ಒಂದು ಮಾಡ ಬೇಕು ಎಂದು ಸಾಕಷ್ಟು ಪ್ರಯತ್ನ ಮಾಡಿದ್ದರು ಅನೇಕರು ಆದರೆ ಅದು ಯಶ ಕಾಣಲೇ ಇಲ್ಲ.

ಆದರೆ ಈ ಜೋಡಿ ಮತ್ತೆ ಒಟ್ಟಿಗೆ ತೆರೆ ಹಂಚಿಕೊಳ್ಳುವಂತೆ ಮಾಡುವ ನಿಟ್ಟಿನಲ್ಲಿ ರಜನಿಕಾಂತ್  ಅವರ ಅಳಿಯ ಧನುಶ್ ಯಶಸ್ವಿ ಆಗಿದ್ದಾರೆ. ಅವರು ನಿರ್ಮಿಸುತ್ತಿರುವ ಷಮಿತಾಬ್ ಚಿತ್ರದಲ್ಲಿ ಅಮಿತಾಬ್ ಜೋಡಿಯಾಗಿ ರೇಖಾಳನ್ನು ಆಯ್ಕೆ ಮಾಡಿಕೊಂಡ ಸಂಗತಿ ಈಗ ಬಾಲಿವುಡ್ ನಲ್ಲಿ ಎಲ್ಲರ ಗಮನ ಸೆಳೆದಿದೆ. ಈ ಸಂಗತಿಯನ್ನು ಧನುಶ್ ಅಳಿಯ ಖುದ್ದು ಎಲ್ಲರ ಬಳಿ ಹೇಳಿದ್ದಾರೆ ಟ್ವೀಟ್ ಮಾಡುವುದರ ಮೂಲಕ ದಶಕಗಳ ಬಳಿಕ ಷಮಿತಾಬ್ ಈ ಜೋಡಿಯನ್ನು ಒಟ್ಟು ಮಾಡಿದೆ.

ವೆಬ್ದುನಿಯಾವನ್ನು ಓದಿ