ನನಗೆ ಪಾತ್ರವಷ್ಟೇ ಮುಖ್ಯ .. ಚಿತ್ರನಟನಾಗಿ ಸುರಕ್ಷಿತ ಸ್ಥಾನದಲ್ಲಿದ್ದೇನೆ

ಬುಧವಾರ, 22 ಅಕ್ಟೋಬರ್ 2014 (10:46 IST)
ಬಾಲಿವುಡ್ ನಲ್ಲಿ ನಾನು ಮಲ್ಟಿ ಸ್ಟಾರರ್ ಚಿತ್ರಗಳಲ್ಲಿ ಅಭಿನಯಿಸಲು ಯಾವುದೇ ರೀತಿಯ ಕಿರಿಕಿರಿ ಹೊಂದಿಲ್ಲ ಎನ್ನುವ ಮಾತನ್ನು ಹೇಳಿದ್ದಾರೆ ಬಾಲಿವುಡ್ ಸ್ಟಾರ್ ನಟ ಅಭಿಷೇಕ್ ಬಚ್ಚನ್.  
 
ಧೂಮ್ 3 ಚಿತ್ರದಲ್ಲಿ ಆಮೀರ್ ಖಾನ್ ಜೊತೆ ನಟಿಸಿದ್ದ ಈ ನಟ ನಟನಾಗಿ ನಾನು ಸುರಕ್ಷಿತ ಸ್ಥಾನದಲ್ಲಿ ಇರುವ ಬಗ್ಗೆ ತಿಳಿಸಿದ್ದಾರೆ. ನಾನು ಆಯ್ಕೆ ಮಾಡಿಕೊಳ್ಳುವ ಸಿನಿಮಾಗಳಲ್ಲಿನ ಪಾತ್ರಗಳಲ್ಲಿ ಪ್ರಮುಖ ಪಾತ್ರದತ್ತ ಆದ್ಯತೆ ನೀಡುತ್ತೇನೆ. ಅದು ಸೋಲೋ ಆಗಿರ ಬಹುದು ಇಲ್ಲವೇ ಮಲ್ಟಿ ಸ್ಟಾರರ್ ಚಿತ್ರ ಆಗಿರ ಬಹುದು. ನಾನು ಅವುಗಳ ಬಗ್ಗೆ ಗಮನ ನೀಡಲ್ಲ. ನನಗೆ ನಟನಾಗಿರುವ ಬಗ್ಗೆ ಎಂತಹ ಸಮಸ್ಯೆ ಇಲ್ಲ. ಪಾತ್ರವಷ್ಟೇ ಮುಖ್ಯ ಎಂದು ಹೇಳಿದ್ದಾರೆ. .
 
ಸೋಲೋ ಚಿತ್ರಗಳಲ್ಲಿ ಒಬ್ಬರಿಂದ ಗೆಲುವು ಸಾಧ್ಯವಿಲ್ಲ. ಅದು ಹೀರೋ ಒಬ್ಬನ  ಶ್ರಮವಲ್ಲ, ಅದು ಇಡಿ ಟೀಮ್ ಎಂದು ಹೇಳುತ್ತಾರೆ. ಸಧ್ಯದಲ್ಲೇ ಅವರ ಹೊಸ ಚಿತ್ರ ಹ್ಯಾಪಿ ನ್ಯೂ ಇಯರ್ ಬಿಡುಗಡೆ ಆಗುತ್ತಿದೆ.
 
ಇತ್ತೀಚಿಗೆ ಹೆಚ್ಚಾಗಿ ಅಭಿಷೇಕ್ ಮಲ್ಟಿ ಸ್ಟಾರರ್ ಚಿತ್ರಗಳಲ್ಲಿ ಕಂಡು ಬರುತ್ತಿದ್ದು ವರದಿಗಾರರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸುತ್ತ ಈ ಮಾತನ್ನು ಹೇಳಿದರು. 

ವೆಬ್ದುನಿಯಾವನ್ನು ಓದಿ