ವಿಲನ್ ಆಗ್ತಾ ಇದ್ದಾರೆ ಕಿಲಕಿಲ ನಗುವಿನ ಗೋವಿಂದ ...

ಗುರುವಾರ, 23 ಅಕ್ಟೋಬರ್ 2014 (12:09 IST)
ಮುಂಬೈ   ಜಾಲಿ ಬಾಯ್ ಗೋವಿಂದ ತಮ್ಮ ಮುಂದಿನ ಚಿತ್ರದಲ್ಲಿ  ಖಳನಾಯಕರಾಗಿ ಎಂಟ್ರಿ ಆಗುತ್ತಿದ್ದಾರೆ. ಕಾಮಿಡಿ ಕಿಂಗ್ ಎನ್ನುವ ಬಿರುದು   ಪಡೆದಿರುವ ಗೋವಿಂದ ಹೆಚ್ಚು ತಮ್ಮನ್ನು ಗುರುತಿಸಿಕೊಂಡಿದ್ದು ಹಾಸ್ಯ ಪ್ರಧಾನ ಚಿತ್ರಗಳ ಮೂಲಕ. ಅತ್ಯುತ್ತಮ  ಡ್ಯಾನ್ಸರ್ ಆಗಿರುವ ಗೋವಿಂದ ತಮ್ಮ ಚಿತ್ರಗಳಲ್ಲಿ ತಮ್ಮದೇ ಆದ ಒಂದು ಸ್ಟೈಲ್ ಸೃಷ್ಟಿ ಮಾಡಿ ಜನಪ್ರಿಯತೆ ಪಡೆದವರು.

ಈಗ ಹಾಸ್ಯ ಪಾತ್ರದಿಂದ  ಅಂದರೆ ಕಾಮಿಡಿ ಕಿಂಗ್ ಪಾತ್ರದಿಂದ ವಿಲನ್ ಪಾತ್ರ ಮಾಡುವುದರ ಮೂಲಕ ತಮ್ಮ ಬದುಕಲ್ಲಿ ಹೊಸ ಒಂದು ಆಯಾಮದತ್ತ ಕೈ ಚಾಚಿದ್ದಾರೆ.ಯಶ್ ಚೋಪ್ರ ಫಿಲಿಮ್ಸ್ ನಿರ್ಮಾಣದಲ್ಲಿ ತಯಾರಾಗುತ್ತಿರುವ ಕಿಲ್ ದಿಲ್  ಚಿತ್ರದಲ್ಲಿ ಗೋವಿಂದ ಖಳನಟ ಆಗುತ್ತಿದ್ದಾರೆ. ವಿಲನ್ ಪಾತ್ರದಲ್ಲಿ ನಟಿಸುತ್ತಿರುವ ಬಗ್ಗೆ ಪ್ರಶ್ನಿಸಿದರೆ  ಕಿಲಕಿಲ ನಗೆಯ ಗೋವಿಂದ  ಯಶ್ ರಾಜ್ ಫಿಲಿಮ್ಸ್ ಬ್ಯಾನರ್ ಅಡಿಯಲ್ಲಿ ಸಿದ್ಧ ಆಗುವ ಚಿತ್ರಗಳಲ್ಲಿ ವಿಲನ್ ಪಾತ್ರಗಳು ಸಹ ಹೀರೋಗಿರುವಷ್ಟೇ ಪ್ರಾಮುಖ್ಯತೆ ಪಡೆದಿರುತ್ತದೆ .

ಆದ್ದರಿಂದ ತಾನು ಈ ಪಾತ್ರದಲ್ಲಿ ನಟಿಸಲು ಸಮ್ಮತಿಸಿದೆ ಎಂದು ಹೇಳಿದ್ದಾರೆ. ಶಾದ್ ಅಲಿ ನಿರ್ದೇಶನ ಮಾಡುತ್ತಿರುವ ಈ ಚಿತ್ರದಲ್ಲಿ ರಣವೀರ್ ಸಿಂಗ್ ಮತ್ತು ಅಲಿ ಜಾಫರ್, ಪರಿಣಿತಿ ಚೋಪ್ರ ಮುಖ್ಯ ಭೂಮಿಕೆಯಲ್ಲಿ ಇದ್ದಾರೆ. 

ವೆಬ್ದುನಿಯಾವನ್ನು ಓದಿ