ಮಾಫಿಯಾ ರಾಣಿ ಪಾತ್ರದಲ್ಲಿ ರಾಣಿ ಮುಖರ್ಜಿ..

ಗುರುವಾರ, 23 ಅಕ್ಟೋಬರ್ 2014 (12:26 IST)
ರಾಣಿ ಮುಖರ್ಜಿ ತಮ್ಮನ್ನು ಕೇವಲ ಆತಿ ಕ್ಯಾ ಖಂಡಾಲ ಅನ್ನುವ ರೋಮ್ಯಾಂಟಿಕ್ ಅಂಶಗಳ ಚಿತ್ರಗಳಿಗೆ  ಮೀಸಲು ಮಾಡಿಕೊಳ್ಳಲಿಲ್ಲ. ಅವರು ಅನೇಕಾನೇಕ  ಉತ್ತಮ ಚಿತ್ರಗಳಲ್ಲಿ ನಟಿಸಿ  ತಾನು ಅಪರೂಪದ ನಟಿ ಎಂದು ಸಾಬೀತು ಮಾಡಿದ್ದಾರೆ. ಇತ್ತೀಚಿಗೆ ಮದುವೆ ಆದ ಈ ನಟಿ   ಮದುವೆ ನಂತರವೂ ನಟಿಸಿದ್ದ ಚಿತ್ರ ಮರ್ದಾನಿ. ಅದು ಸಾಕಷ್ಟು ಹೆಸರು ಪಡೆಯಿತು. ಇದಾದ ಬಳಿಕ ಈಗ ರಾಣಿ ಮುಖರ್ಜಿ ಮತ್ತೊಂದು ಚಿತ್ರದಲ್ಲಿ ನಟಿಸಲು ಸಿದ್ಧತೆ ನಡೆಸಿದ್ದಾರೆ.

ಅದರಲ್ಲಿ ಮಾಫಿಯ ಡಾನ್ ಪಾತ್ರಧಾರಿ ಆಗಿದ್ದಾರೆ . ಮಾಫಿಯ ಡಾನ್ ದಾವೂದ್ ಇಬ್ರಾಹಿಮ್ ಅವರ ತಂಗಿಯಾಗಿರುವ ಹಸೀನ ಪಾರ್ಕರ್ ಜೀವನ ಚರಿತ್ರೆಯನ್ನು ಒಳಗೊಂಡ ಸಿನಿಮಾದಲ್ಲಿ ಆಕೆ ನಟಿಸುತ್ತಿದ್ದಾರೆ. ಹಲವಾರು ಕ್ರಿಮಿನಲ್ ಕೇಸ್ ಗಳಲ್ಲಿ ಗುರುತಿಸಲ್ಪಟ್ಟಿದ್ದ ಹಸೀನ ಈ ಬಾರಿಯ  ರಂಜಾನ್ ಹಬ್ಬದ ಸಮಯದಲ್ಲಿ ಹೃದಯಾಘಾತದಿಂದ ಮುಂಬೈನಲ್ಲಿ ನಿಧನ ಹೊಂದಿದರು. ಈ ಕಥೆಯನ್ನು  ಅಪೂರ್ವ  ಲಖಿಯ ಸಿನಿಮಾ ಮಾಡುತ್ತಿದ್ದಾರೆ. 
 
 ಮುಖ್ಯ ಪಾತ್ರಧಾರಿ ಆಗಿದ್ದಾರೆ ರಾಣಿ. ದಕ್ಷಿಣ ಮುಂಬೈ ನಾಗ್ ಪಡ ಪ್ರಾಂತ್ಯದಿಂದ ತನ್ನ ಕಾರ್ಯ ಚಟುವಟಿಕೆ ಮಾಡುತ್ತಿದ್ದ ಹಸೀನಾ ಗಾಡ್ ಮದರ್ ಆಫ್ ನಾಗ್ ಪಡ ಎನ್ನುವ ಹೆಸರನ್ನು ಹೊಂದಿದ್ದರು. ಆಕೆಯ ಪಾತ್ರವನ್ನು ತೆರೆಯ ಮೇಲೆ ಮಾಡಿ ತೋರುವುದಕ್ಕೆ ಸೂಕ್ತ ವ್ಯಕ್ತಿ ರಾಣಿ ಎಂದು ನಿರ್ದೇಶಕ ಲಿಖಿಯ ಅಭಿಮತ. ಆದ ಕಾರಣ ರಾಣಿ ಆಯ್ಕೆ ಆಗಿದ್ದಾರೆ.

ವೆಬ್ದುನಿಯಾವನ್ನು ಓದಿ