ದೀಪಾವಳಿ ಹಬ್ಬದ ಸಡಗರದಲ್ಲಿ ಅಮಿತಾಬ್ ಬಚ್ಚನ್..ಆಮೀರ್ ಖಾನ್ .. ಎಕೋ ಫ್ರೆಂಡ್ಲಿ ಉತ್ಪನ್ನ ಗಳಿಗೆ ಬಿಗ್ ಬಿ ಆದ್ಯತೆ

ಶುಕ್ರವಾರ, 24 ಅಕ್ಟೋಬರ್ 2014 (12:23 IST)
ದೀಪಾವಳಿ ಅಂದ್ರೆ ಎಲ್ಲರಿಗೂ ಸಂಭ್ರಮದ ಹಬ್ಬ. ಈ ಬೆಳಕಿನ ಹಬ್ಬದ ಆಚರಣೆಯಲ್ಲಿ ಬಾಲಿವುಡ್ ಮಂದಿ ಹಿಂದೆ ಉಳಿದಿಲ್ಲ. ಬಾಲಿವುಡ್ ಮೆಗಾ ಸ್ಟಾರ್ ಅಮಿತಾಬ್ ಬಚ್ಚನ್ ಅವರ ಮನೆಯಲ್ಲಿ ಅದ್ಧೂರಿಯಾಗಿ ನೆರವೇರುತ್ತಿದೆ ಈ ಹಬ್ಬ. ಇದರ ಆಚರಣೆಗೆಂದು ಸಿದ್ಧ ನಡೆಸಿದ್ದು ಅಮಿತಾಬ್ ಪತ್ನಿ ಜಯ ಬಚ್ಚನ್. ಇದ ಸಂಪೂರ್ಣ ಹೊಣೆಗಾರಿಕೆಯನ್ನು ಜಯ ಅವರೇ ಹೊತ್ತಿದ್ದು, ಪ್ರತಿಯೊಂದು ಅಂಶಗಳಿಗೂ ಆದ್ಯತೆ ನೀಡಿದ್ದಾರಂತೆ.

ಅಲ್ಲದೆ ಈ ಬಾರಿ ಎಕೋ ಫ್ರೆಂಡ್ಲಿ ಉತ್ಪನ್ನಗಳ ಬಳಕೆ ಮಾಡ ಬೇಕು ಎನ್ನುವ ನಿರ್ಧಾರಕ್ಕೆ ಈ ಕುಟುಂಬ ಬದ್ಧವಾಗಿದೆಯಂತೆ. ಸಂಪ್ರದಾಯಬದ್ಧವಾಗಿ ನಡೆಯುವ ಈ ಹಬ್ಬದಲ್ಲಿ ಭಾಗವಹಿಸಲು ಬರುವ ಅತಿಥಿಗಳಲ್ಲಿ ಅನಿಲ್ ಕಪೂರ್, ಕಂಗನಾ ರನೌಟ್, ಶಾರುಖ್ ಖಾನ್ , ದೀಪಿಕ ಪಡುಕೋಣೆ ಜೋಯ ಅಖ್ತರ್ , ಜಾವೇದ್ ಅಖ್ತರ್ ಮುಂತಾದವರು.
 
ಅದೇ ರೀತಿ ಬಾಲಿವುಡ್ ಸೂಪರ್ ಸ್ಟಾರ್ ಆಮೀರ್ ಖಾನ್ ಸಹ ಬಾಂದ್ರಾದಲ್ಲಿರುವ ತನ್ನ ಮನೆಯಲ್ಲಿ ಬಿಗ್ ಶಾಪ್ ಪಾರ್ಟಿಯನ್ನು ಸಿದ್ಧ ಮಾಡಿದ್ದಾರೆ. ಈ ಪಾರ್ಟಿಯಲ್ಲಿ ಪ್ರಿಯಾಂಕ ಚೋಪ್ರ, ರಣವೀರ್ ಸಿಂಗ್, ಕರಣ್ ಜೋಹರ್ ಮುಂತಾದವರು ಆಹ್ವಾನಿತರಾಗಿದ್ದಾರೆ. 

ವೆಬ್ದುನಿಯಾವನ್ನು ಓದಿ