ಅನುಷ್ಕ ಮನೆಗೆ ಬಂದ ವಿರಾಟ್ ಅಪ್ಪ ಅಮ್ಮ..ಆಹಾ ಇವರ ಮದ್ವೆಯಂತೆ.. ಅಂತ ಯಾರಿಗೂ ಗೊತ್ತಿಲ್ಲವಂತೆ!!

ಶನಿವಾರ, 25 ಅಕ್ಟೋಬರ್ 2014 (12:28 IST)
ಮದುವೆ ಆಗ ಬಹುದು , ಆಗುತ್ತಾರೆ, ಆಗೇ ಬಿಟ್ಟಿದ್ದಾರೆ ಎನ್ನುವ ಗಾಳಿಸುದ್ದಿ ಬಾಲಿವುಡ್ ನಲ್ಲಿ ಸಾಮಾನ್ಯ ಸಂಗತಿ. ಅಂತಹ ಪಟ್ಟಿಗೆ ಅನುಷ್ಕ ಶರ್ಮ ಮತ್ತು ವಿರಾಟ್ ಕೊಹ್ಲಿ ಜೋಡಿ ಸಹ ಸೇರ್ಪಡೆ ಆಗಿದೆ ಎಂದು ಹೇಳಬಹುದು. ಈ ಸೆಲೆಬ್ರಿಟಿ ಜೋಡಿ ಪ್ರೀತಿ ಮಾಡಿದ್ದಾಯ್ತು ಇನ್ನು ಮದುವೆ ಅಷ್ಟೇ ಬಾಕಿ ಉಳಿದಿರೋದು ಎನ್ನುವ ಘಟ್ಟಕ್ಕೆ ಬಂದು ತಲುಪಿದ್ದಾರೆ. ಇತ್ತೀಚಿಗೆ ಅನುಷ್ಕ ಮನೆಗೆ ವಿರಾಟ್ ತಾಯಿತಂದೆ ಬಂದಿದ್ದರಂತೆ..ಎರಡು ಕುಟುಂಬದವರು ಮಾತುಕತೆ ಆಡಿದರಂತೆ.
 
ಇದು ಹಾಗೆ ಸುಮ್ಮನೆ ಎನ್ನುವ ಒಂದು ಸಾಧಾರಣ .. ಸಾಮಾನ್ಯವಾದ ಭೇಟಿಯಾಗಿತ್ತು ಎಂದು ಅನುಷ್ಕ ಮತ್ತು ವಿರಾಟ್ ಹೇಳಿದ್ದಾರೆ. ಈಗ ಹಾಗೆ ಸುಮ್ಮನೆ ಮಾತುಕತೆ ಆಡಲು ಬಂದರು ಸಹಿತ ಈ ಜೋಡಿ ಮುಂದಿನ ಶುಭ ಗಳಿಗೆಗೆ ಕಾಯುತ್ತಿದ್ದಾರೆ ಎನ್ನುವುದನ್ನು ವಿವರಿಸಬೇಕಿಲ್ಲ. 
 
ಇವರಿಬ್ಬರು ರಹಸ್ಯವಾಗಿ ವಿದೇಶದಲ್ಲಿ ಭೇಟಿ ಮಾಡಿದ್ದು ಇವರ ಪ್ರೇಮವನ್ನು  ಮಾಧ್ಯಮಗಳು ಬಿಚ್ಚಿ ತೋರಿಸಿದ್ದವು. ಆದರೆ ಈ ಸಂಬಂಧದ ಬಗ್ಗೆ ಎರಡು ಮನೆಯವರು ಪ್ರಶ್ನಿಸಿದಾಗ ಅದಕ್ಕೆ ಸೂಕ್ತ ಉತ್ತರ ಹೇಳಲು ವಿರಾಟ್ ಬಳಿ ಸಮಯ ಇರಲಿಲ್ಲ. ಈಗ ಕಾಲ ಕೂಡಿ ಬಂದಿದ್ದು , ಅನುಷ್ಕ ಮನೆಗೆ ವಿರಾಟ್ ಮನೆಯವರು ಹೋಗಿ ಬಂದಿದ್ದಾರೆ. ಇಲ್ಲಿವರೆಗೂ ಈ ಜೋಡಿಯ ನಿಶ್ಚಿತಾರ್ಥ ಆಗೇ ಹೋಗಿದೆ ಎಂದು ಹರಡಿದ್ದ ಸುದ್ದಿ ಸುಳ್ಳು ಎನ್ನುವುದು ಸಾಬೀತಾಗಿದೆ.. ಏನೇ ಆದರು ಇವರಿಬ್ಬರು ಹಸೆಮಣೆಗೇರುವ ಕಾಲ ಸನ್ನಿಹಿತವಾಗಿದೆ ಎನ್ನುವುದು ಸತ್ಯ.. ಸತ್ಯ..!
 
 

ವೆಬ್ದುನಿಯಾವನ್ನು ಓದಿ