ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು. ಯಾವುದೂ ಸ್ಥಿರವಲ್ಲ!

ಬುಧವಾರ, 12 ನವೆಂಬರ್ 2014 (10:45 IST)
ಬದುಕಲ್ಲಿ ಕಷ್ಟಸುಖಗಳು ಸಾಮಾನ್ಯ ಸಂಗತಿ. ಅದರಲ್ಲು ಚಿತ್ರರಂಗದಲ್ಲಿ ಇರುವವರಿಗೆ ಶುಕ್ರವಾರ ಬಂತೆಂದರೆ ಸಾಕು ಅವರ ಬದುಕಿನಲ್ಲಿ ಏಳುಬೀಳು ಉಂಟು ಮಾಡುತ್ತದೆ. ಅಪಜಯಗಳು ಉಂಟಾಗಿ ಕೆರಿಯರ್ ವಿಷಯದಲ್ಲಿ ತೊಂದರೆ ಎದುರಾದಾಗ ಹೆದರದೆ ಅದನ್ನು ಸಹನೆಯಿಂದ ನೋಡ ಬೇಕು. ಮಾನಸಿಕವಾಗಿ ಕುಗ್ಗದೆ  ಮುಂದಿನ ನಡೆಯತ್ತ ಗಮನ ಹರಿಸ ಬೇಕು ಎಂದು ಹೇಳಿದ್ದಾಳೆ ನಟಿ ದೀಪಿಕ ಪಡುಕೋಣೆ.

ಈ ರಂಗದಲ್ಲಿ ಇದ್ದಾಗ ಜಯಾಪಜಯ ಎರಡನ್ನು ಸಮಾನವಾಗಿ ಸ್ವೀಕರಿಸ ಬೇಕು ಎಂದು ಹೇಳಿರುವ ದೀಪಿಕಾ ಒಮ್ಮೊಮ್ಮೆ ಆರಾಮವಾಗಿ ಸಿಗುವ ಗೆಲುವು, ಕೆಲವು ಬಾರಿ ಅದೆಷ್ಟು ಕಷ್ಟ ಪಟ್ಟರು ಸಹಿತ ಸಿಗದು. ನನಗೆ ಈ ಎರಡು ಘಟ್ಟಗಳ ಅನುಭವ ಉಂಟಾಗಿದೆ. ದೇವರ ದಯೆ ಈಗ ಸಿನಿಮಾರಂಗದಲ್ಲಿ ನನಗೆ ಅಂತಹ ಅಡ್ಡಿ ಆತಂಕ  ಇಲ್ಲ.

ನನ್ನ ಸಿನಿಮಾಗಳು ಸೋತ ಕಾಲದಲ್ಲಿ ನಾನು ಸಾಕಷ್ಟು ಕಲಿತಿದ್ದೇನೆ ಎಂದಿದ್ದಾಳೆ, ಅಲ್ಲದೆ, ಯಾವುದೇ ಕೆಲಸ ಆದರು ಸಹ  ಸಂಪೂರ್ಣವಾಗಿ ಸಹನೆಯಿಂದ ಕಷ್ಟಪಟ್ಟು ಕೆಲಸ ಮಾಡಿ ಆ ಬಳಿಕ ಅದನ್ನು ಸಹನೆಯಿಂದ ನೋಡ ಬೇಕು. ಹಾಗೆ ಮಾಡಿದರೆ ಗೆಲುವು ಹುಡುಕಿಕೊಂಡು  ಬರುತ್ತದೆ.
 
ಮುಖ್ಯವಾಗಿ ಸೋತ ಸಂದರ್ಭದಲ್ಲಿ ನಮ್ಮನ್ನು ಜೀವಂತವಾಗಿಡುವುದು ಇದೇ ಸಂಗತಿ ಎಂದಿದ್ದಾಳೆ. ಶಾರುಖ್ ಖಾನ್ ಜೊತೆ ನಟಿಸಿರುವ ಚೆನ್ನೈ ಎಕ್ಸ್‌ಪ್ರೆಸ್ ಹಾಗೂ ಹ್ಯಾಪಿ ನ್ಯೂ ಇಯರ್ ಆಕೆಯ ತಾರ ಬದುಕನ್ನು ಉಜ್ವಲ ಮಾಡಿದೆ. ಒಂದೊಮ್ಮೆ ಆಕೆ ವಿಮರ್ಶಕರ ವಿಮರ್ಶೆಯ ದಾಳಿಗೆ ಸಿಕ್ಕ ನಟಿ. ಆದರೆ ನಿರಂತರವಾದ ಶ್ರಮದ ಪರಿಣಾಮ ಈಗ ಗೋಲ್ಡನ್  ಲೆಗ್ ಹುಡುಗಿಯಾಗಿದ್ದಾಳೆ. ಲೈಫ್ ಅಂದ್ರೆ ಹೀಗೆ ಅಲ್ವೇ! 

ವೆಬ್ದುನಿಯಾವನ್ನು ಓದಿ