ಸೂಪರ್ ಸ್ಟಾರ್ ರಜನಿಕಾಂತ್ ಯಶಸ್ವಿ ಚಿತ್ರಗಳಲ್ಲಿ ರೋಬೋಟ್ ಸಹ ಒಂದಾಗಿದೆ. ಐಶ್ವರ್ಯ ರೈ ಮತ್ತು ರಜನಿ ಅವರು ಒಟ್ಟಾಗಿ ನಟಿಸಿದ್ದ ರೋಬೋಟ್ ಈಗ ಮುಂದಿನ ಭಾಗದಲ್ಲಿ ಸಿದ್ಧ ಆಗುವುದಕ್ಕೆ ಎಲ್ಲ ರೀತಿಯ ಸಿದ್ಧತೆ ನಡೆಸಲಾಗುತ್ತಿದೆ. ಈ ಚಿತ್ರದಲ್ಲಿ ತಾನು ನಟಿಸಲ್ಲ ಎಂದು ರಜನಿ ಕಾಂತ್ ಅವರು ಹೇಳಿದ್ದರು, ಅವರ ಬದಲಿಗೆ ತಮಿಳು ನಟ ವಿಜಯ್ ನಟಿಸುತ್ತಾರೆ ಎನ್ನುವ ಸುದ್ದಿ ಇತ್ತು.