ಅಮಿತಾಬ್ ಬಚ್ಚನ್ ಖುಷ್ಬೂ ಡ್ರೀಮ್ ಬಾಯ್ ಅಂತೆ ...

ಗುರುವಾರ, 20 ನವೆಂಬರ್ 2014 (11:13 IST)
ಸೂಪರ್ ಸ್ಟಾರ್ , ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅಂದ್ರೆ ಆಂಗ್ರಿ ಯಂಗ್ ಮ್ಯಾನ್ ಎಂದು ಗೊತ್ತು ಎಲ್ಲರಿಗೂ ಆದರೆ ಆ ಹೀರೋ ತನ್ನ 72  ರ ಹರೆಯದಲ್ಲೂ ಸಹಿತ ಯಾವುದೇ ರೀತಿಯಲ್ಲೂ ತನ್ನ ಚಾರ್ಮ್ ಬಿಟ್ಟಿಲ್ಲ. ಅನೇಕರು ಈಗ ಸಹ ಅವರ ಬಿಗ್ ಫ್ಯಾನ್. ಅಂತಹವರ ಲಿಸ್ಟ್ ನಲ್ಲಿ ಸಿನೆಮಾ  ನಟಿಯರು ಸಹಿತ ಸೇರ್ಪಡೆ ಆಗಿದ್ದಾರೆ. ಅವರಲ್ಲಿ ಖುಷ್ಬೂ ಸಹಿತ ಒಬ್ಬರು. 
 
ತಮಗೆ ಅಮಿತಾಬ್ ಅವರು ಕನಸಿನ ಹೀರೋ. ತಾವು ಅಂದು ನೋಡಿದ ದಿನದಿಂದ ಹಿಡಿದು ಈವರೆಗೂ ಅವರೇ ಹೀರೋ ಎಂದು ಹೇಳಿದ್ದಾರೆ ಖುಷ್ಬೂ. ಇದ್ದದ್ದು ಇದ್ದಂತೆ ಹೇಳುವ ಖುಷ್ಬೂ ತಮ್ಮ ನೇರವಂತಿಕೆಯಿಂದ ಅನೇಕ ವಿವಾದಗಳಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ಅದೇರೀತಿ ಅದರಿಂದ ಹೊರ ಬಂದರು  ತಮಗೆ ಅನ್ನಿಸಿದ್ದನ್ನು ಹೇಳುವುದಕ್ಕೆ ಯಾವುದೇ ರೀತಿಯ ಹಿಂಜರಿತ ಇಲ್ಲ. ಈಗ ಖುಷ್ಬೂ ಗೆ ಅಮಿತಾಬ್ ಅವರು ಇಷ್ಟ ಆಗಿದೆ ಎನ್ನುವ ಸಂಗತಿ ಎಲ್ಲರ ಗಮನ ಸೆಳೆದಿದೆ. ಈ ಡ್ರೀಮ್ ಬಾಯ್ ಬಗ್ಗೆ ತನಗಿರುವ ಪ್ರೀತಿಯನ್ನು ಆಕೆ ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ. 
 
 ಈ ಮುಖಾಂತರ ತಾನು ಮತ್ತೆ ಅಭಿಮಾನಿಗಳ 'ಬಾಯ್' ಚರ್ಚೆಗೆ ಕಾರಣ ಆಗಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ರವಿಚಂದ್ರನ್ ಅವರ ಚಿತ್ರಗಳ ಮೂಲಕ ದಕ್ಷಿಣ ಭಾರತಕ್ಕೆ ಎಂಟ್ರಿ ಆದ ಈ ಚೆಲುವೆ ಆ ಬಳಿಕ ತಮಿಳು  ಚಿತ್ರಗಳಲ್ಲಿ ಸಂಪೂರ್ಣವಾಗಿ ತಮ್ಮನ್ನು ತೊಡಗಿಸಿಕೊಂಡರು. ಅದೇ ಸಮಯದಲ್ಲಿ ತೆಲುಗು ಭಾಷೆಯಲ್ಲೂ ಸಹ ಗುರುತಿಸಿಕೊಂಡ ಈಕೆ ತಮಿಳು ನಿರ್ದೇಶಕರನ್ನು ಮದುವೆ ಆಗಿ ಎರಡು ಮಕ್ಕಳ ತಾಯಿಯಾಗಿದ್ದಾರೆ. ಮದುವೆ ಆದ ಬಳಿಕ ಸಂಪೂರ್ಣವಾಗಿ ಹಿಂದೂ ಧರ್ಮಕ್ಕೆ ಸೇರಿದ ಈಕೆ ಆ ಮೂಲಕವೂ ತನ್ನ ವಿಶೇಷತೆ ತೋರಿದ್ದರು. ಆಕೆಯ ಬಿಗ್ ಬಿ ಪ್ರೀತಿಯ ಬಗ್ಗೆ ಅಮಿತಾಬ್ ಯಾವ ರೀತಿ ಪ್ರತಿಕ್ರಿಯೆ ತೋರುತ್ತಾರೆ ಎನ್ನುವುದು ಈಗಿರುವ ಪ್ರಶ್ನೆ !
 

ವೆಬ್ದುನಿಯಾವನ್ನು ಓದಿ