ಆ ಮನೆಗೆ ಬರುವ ಮುನ್ನ ರಣಬೀರ್ ಅವರ ತಂದೆ ರಣಧೀರ್ ಕಪೂರ್ ಅವರ ಆರೋಗ್ಯ ಹದಗೆಟ್ಟಿತ್ತು. ತನ್ನ ತಂದೆಯ ಆರೋಗ್ಯ ಸರಿಯಾದ ಬಳಿಕ ಹೊಸ ಮನೆಗೆ ಬಂದಿದ್ದಾರೆ ರಣಬೀರ್. ಈಗ ಅವರು ಕೃಷ್ಣ ನಿವಾಸಿಯಲ್ಲ. ಬದಲಿಗೆ ಕತ್ರಿನಾ ಜೊತೆ ವಾಸಿ ಈ ಮನೆಯ ಗೃಹ ಪ್ರವೇಶ ಇತ್ತೀಚಿಗೆ ನಡೆದಿದ್ದು, ಕಾರ್ಯಕ್ರಮದಲ್ಲಿ ಆರ್ಯನ್ ಮುಖರ್ಜಿ, ಹೃತಿಕ್ ರೋಶನ್, ಕಂಗನ ರನೌಟ್, ಅನುಷ್ಕ ಶರ್ಮ, ಕಬೀರ್ ಖಾನ್, ಸೇರಿದಂತೆ ಬಾಲಿವುಡ್ ಗೆ ಸೇರಿದ ಬಹುತೇಕರು ಬಂದಿದ್ದರಂತೆ.ಈಗ ಲೀವಿನ್ ಸಂಬಂಧದಲ್ಲಿ ಇರುವ ಈ ಜೋಡಿ ಹೊಸ ಮನೆಯ ಆನಂದ ಅನುಭವಿಸುತ್ತಿದ್ದಾರೆ. ಎಲ್ಲವು ಇವರು ನೆನೆದಂತೆ ಆದರೆ ಮುಂದಿನ ವರ್ಷ ಮದುವೆ ಆಗುತ್ತಿದ್ದಾರೆ.