ರಾಣ ಬಿಪಾಸ ಬಸು ನಡುವೆ ಏನ್ ನಡೀತಾ ಇದೆ ?

ಶನಿವಾರ, 22 ನವೆಂಬರ್ 2014 (13:11 IST)
ದಕ್ಷಿಣ ಭಾರತದ ಅತ್ಯಂತ ಮುದ್ದಾದ ನಟಿ ತ್ರಿಷಾ. ಕೇವಲ ಮುದ್ದು ಮುದ್ದು ನಟಿಯಲ್ಲ ಆಕೆ ಪ್ರತಿಭಾವಂತೆ ಸಹ . ಆದ್ದರಿಂದ ತಮಿಳು ಹಾಗೂ ತೆಲುಗು  ಚಿತ್ರರಂಗ ಆಕೆಯನ್ನು ವರ್ಷಾನುಗಟ್ಟಲೆ ಕಾಪಾಡಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಆಕೆಯ ಲಕ್ ಹೇಳಿಕೊಳ್ಳುವಂತೆ ಇಲ್ಲ. ಆದ್ದರಿಂದ ಸೋಲು ಕೈ ಹಿಡಿದಿದೆ . 
 
ಈಗ ಅದೇ ಅದೃಷ್ಟ ಆಕೆ ಬದುಕಿನ  ಜೊತೆಗೂ ಸಹಿತ ಆಟ ಆಡುತ್ತಿದೆ ಎಂದೇ ಹೇಳ ಬಹುದು. ಕನ್ನಡ ಚಿತ್ರ ಪವರ್ *** ನಲ್ಲಿ ನಟಿಸಿ ಈಗ ಜೀವದಾನ ಪಡೆದಿರುವ ತ್ರಿಷಾ  ಕೈಲಿ ತಮಿಳು ಮತ್ತು ತೆಲುಗು ಚಿತ್ರಗಳಿವೆ. ಬದುಕಲ್ಲಿ ರಾಣ ಹೀರೋ ಆಗಿದ್ದು ಹಳೆಯ ಕಥೆ. ಇತ್ತೀಚಿಗೆ ಅವರ ನಡುವೆ ಸಣ್ಣ ಗಲಾಟೆ ನಡೆದಿದ್ದು, ಆಕೆಯು ಆ ಗಲಾಟೆಯ ಕಾರಣದಿಂದ ಹೃದಯ ಮುರುಕೋ ಬೇಕಾಗಿ ಬಂದಿದೆಯಂತೆ. 
 
ಇವೆಲ್ಲ ಅಂತೆಗಳ ನಡುವೆ ಈಗ ಸಧ್ಯದ  ಸುದ್ದಿ ಏನೆಂದರೆ ತ್ರಿಷ ಬ್ಯುಸಿನೆಸ್ ಮ್ಯಾನ್ ಜೊತೆ ಮದುವೆಗೆ  ಸಿದ್ಧತೆ ನಡೆಸಿದ್ದಾಳೆ. ಅದೆಷ್ಟು ಸತ್ಯವೋ ಗೊತ್ತಿಲ್ಲ, ಅದೇ ಸಮಯದಲ್ಲಿ ರಾಣ ಬಿಪಾಸ ಬಸು ಜೊತೆ ಬ್ಯುಸಿ. ಈ ಎಲ್ಲ ಸಂಗತಿಗಳು ಸಹಿತ ಈಗ ಚರ್ಚೆಗೆ ಕಾರಣವಾಗಿದೆ. ಈ ಮಧ್ಯೆ ಬಿಪ್ ಳನ್ನು ನಂಬಿರುವ ಹರ್ಮನ್ ಕಥೆ ಏನಾಯಿತು ಎನ್ನುವುದೇ ಗೊತ್ತಿಲ್ಲ. ಒಟ್ಟಾರೆ ಚಿತ್ರಂಗದಲ್ಲಿ ಏನಾಗುತ್ತಿದೆ ಎನ್ನುವ ಸಂಗತಿ ಸ್ಪಷ್ಟವಾಗಿ ಗೊತ್ತಾಗೋದೇ ಇಲ್ಲ. ಸಾಕಾಷ್ಟು ಅಂತೆಕಂತೆಗಳಿಗೆ ಈಗ ಕಾಲ !

ವೆಬ್ದುನಿಯಾವನ್ನು ಓದಿ