ಇಲಿಯಾನಾಗೆ ಅವಕಾಶಗಳ ಸುರಿಮಳೆ.. ಬಾಲಿವುಡ್ ಹ್ಯಾಪಿ ಬಿಗಿನಿಂಗ್

ಮಂಗಳವಾರ, 25 ನವೆಂಬರ್ 2014 (12:02 IST)
ದಕ್ಷಿಣ ಭಾರತ ಚಿತ್ರಗಳ ಮೂಲಕ ಬಣ್ಣ ಹಚ್ಚಿದ್ದ ಇಲಿಯಾನ ಈಗ ಹಿಂದಿ ಚಿತ್ರಗಳತ್ತ ತನ್ನ ಗಮನ ನೆಟ್ಟಿರುವುದು ಮಾತ್ರವಲ್ಲ ಯಶಸ್ವಿ ನಾಯಕಿಯ ದಿಕ್ಕಿನತ್ತ ಸಾಗಿದ್ದಾಳೆ. ಆಕೆ ಇತ್ತೀಚಿಗೆ ನಟಿಸಿದ ಹ್ಯಾಪಿ ಎಂಡಿಂಗ್ ಚಿತ್ರ ಯಶಸ್ವಿ ಯಾಗಿದೆ. ಬಾಕ್ಸಾಫೀಸ್ ನಲ್ಲಿ ಉತ್ತಮ ಫಲಿತಾಂಶ ಕಂಡಿದೆ ಎಂದೇ ಹೇಳಬಹುದಾಗಿದೆ.

ಈ ಮುದ್ದಾದ ಮಾದಕ ಚೆಲುವೆ ಹ್ಯಾಪಿ ಎಂಡಿಂಗ್ ಚಿತ್ರದಲ್ಲಿ ಸೈಫ್ ಅಲಿ ಖಾನ್ ಅವರ ಜೊತೆ ತನ್ನ ಮಾದಕ ರೂಪರಾಶಿ  ಬಿಚ್ಚಿ ತೋರಿ ಎಲ್ಲರ ಎದೆಯಲ್ಲಿ ತಲ್ಲಣ ಉಂಟು ಮಾಡಿದ್ದಾಳೆ. ಈ ತಲ್ಲಣದಿಂದ ಗಂಡು ಹೃದಯಗಳು ಆ ಚಿತ್ರ ನೋಡಲೆಂದು ಚಿತ್ರರಂಗಕ್ಕೆ ಧಾವಿಸುತ್ತಿದ್ದಾರೆ. 
 
ಬರ್ಫಿ ಸಿನಿಮಾದ ಯಶಸ್ಸಿನಿಂದ ಆಕೆಗೆ ಮೈ ತೇರ ಹೀರೋ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ಆ ಚಿತ್ರವೂ ಸಹಿತ ಕಮರ್ಷಿಯಲ್ ಹಿಟ್ ಚಿತ್ರ ಎನ್ನುವ ಅಗ್ಗಳಿಕೆ ಪಡೆಯಿತು. ಅದಾದ ನಂತರ ಈಗ ಆಕೆ ಸೈಫ್ ಜೊತೆ ಹ್ಯಾಪಿ ಎಂಡಿಂಗ್ ಎನ್ನುವ ಚಿತ್ರದಲ್ಲಿ ಅಭಿನಯಿಸಿದ್ದಾಳೆ. ಇತ್ತೀಚಿಗೆ ಆ ಚಿತ್ರವೂ ಬಿಡುಗಡೆಯಾಗಿದ್ದಲ್ಲದೆ  ಬಾಕ್ಸಾಫೀಸಲ್ಲಿ ಗಳಿಕೆ ಮಾಡುತ್ತಿದೆ.
 
ಅದರಲ್ಲೂ ಸೈಫ್ ಮತ್ತು ಇಲಿ ಬೇಬಿ ಜೋಡಿ ಸಕತ್ ವರ್ಕ್ ಔಟ್ ಆಗಿದೆ ಈ ಚಿತ್ರದಲ್ಲಿ ಪ್ರೇಕ್ಷಕರು ತುಂಬಾ ಆಸಕ್ತಿಯಿಂದ ನೋಡುವಂತೆ ನಟಿಸಿದ್ದಾರೆ. ಸೈಫ್ ನಿರ್ಮಿಸಿರುವ ಈ ಚಿತ್ರ ವಿಶ್ವವ್ಯಾಪಿಯಾಗಿ ಪ್ರಸಾರ ಆಗುತ್ತಿದೆ. ಆದರಿಂದ ಒಂದೇ ಸಲಕ್ಕೆ ಇಲಿ ಬೇಬಿ ವಿಶ್ವ ಖ್ಯಾತಿ ಯಾಗಿದ್ದಾಳೆ.

ಇಡಿ ವಿಶ್ವದಲ್ಲೂ ಸಹಿತ ಒಳ್ಳೆ ಗಳಿಕೆ ಆಗುತ್ತಿದೆ. ಈ ಚಿತ್ರದ ಗೆಲುವಿನಿಂದ ಇಲಿಯಾನಳಿಗೆ ಅನೇಕ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. ಈ ಮೂಲಕ ಆಕೆಗೆ ಸಿಕ್ಕಿರುವ ಹಾಗು ಸಿಗುತ್ತಿರುವ ಪಾತ್ರಗಳು ಮಾದಕ ಪಾತ್ರಗಳಂತೆ.

ಸೊ ಇನ್ನು ಮುಂದೆ ಬಾಲಿವುಡ್ ಇಲಿಯಾನಳ ಗ್ಲಾಮರ್ ನಿಂದ ಫಳಫಳ ಹೊಳೆಯುತ್ತೆ. ಆಕೆ ಸಹ ತನ್ನ 'ಮಿತಿ' ಮೀರುವ ಎಲ್ಲ ಸಾಧ್ಯತೆಗಳು ಸಹಿತ ಕಂಡು ಬರುತ್ತಿವೆ ಎನ್ನುವುದು ಬಿ ಟೌನ್ ವಾಸಿಗಳ ಅಭಿಪ್ರಾಯ.. 

ವೆಬ್ದುನಿಯಾವನ್ನು ಓದಿ